ಅನ್ ಲಾಕ್ ಬಗ್ಗೆ ಸುಳಿವು ಕೊಟ್ಟ ಪ್ರಧಾನಿ ಮೋದಿ

0

ವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಆದೇಶವನ್ನು ಹಂತ ಹಂತವಾಗಿ ಸಡಿಲ ಮಾಡಲಾಗುತ್ತಿದೆ. ಈಗಾಗಲೇ ಅನ್ ಲಾಕ್ 1 ಜಾರಿಯಲ್ಲಿದೆ. ಇನ್ನಷ್ಟು ಅನ್ ಲಾಕ್ ಮಾಡುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ, ದೇಶದ ಎಲ್ಲಾ ರಾಜ್ಯಗಳು ಅನ್ ಲಾಕ್ ಆಗಬೇಕಿದೆ. ಬಹುತೇಕ ರಾಜ್ಯಗಳಲ್ಲಿ ಕಚೇರಿಗಳು ಆರಂಭಗೊಂಡಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಕಚೇರಿಗಳು ಆರಂಭವಾಗಬೇಕಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅನ್ ಲಾಕ್ ಕುರಿತು ಸುಳಿವು ನೀಡಿದ್ದಾರೆ.

ದೇಶದಲ್ಲಿ ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಜೂನ್ ತಿಂಗಳಿನಲ್ಲಿ ರಸಗೊಬ್ಬರ ಮಾರಾಟ ದ್ವಿಗುಣವಾಗಿದೆ. ಅಲ್ಲದೇ ಈಶಾನ್ಯ ರಾಜ್ಯಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇನ್ನು ಹೆದ್ದಾರಿಗಳಲ್ಲಿನ ಟೋಲ್ ಗಳಲ್ಲಿ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು, ಆನ್ ಲೈನ್ ಪೇಮೆಂಟ್ ನಲ್ಲಿಯೂ ಹೆಚ್ಚಳವಾಗಿದೆ. ಕೃಷಿ ಕ್ಷೇತ್ರ ದೇಶದ ಆರ್ಥಕತೆಗೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಇನ್ನು ಅತೀ ಸಣ್ಣ, ಸಣ್ಣ ಉದ್ಯಮಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಎಂಎಸ್ಎಂಇ ಗೆ ಹೆಚ್ಚಿನ ಯೋಜನೆಯನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.