Spandana Passed Away : ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ

ಸ್ಯಾಂಡಲ್‌ವುಡ್ ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana Passed Away) ಅವರು ಹೃದಯಾಘಾತದಿಂದ ಇಹಲೋಕವನ್ನು ತ್ಯಜಿಸಿದ್ದಾರೆ. ನಟ ವಿಜಯ ರಾಘವೇಂದ್ರ ಅವರ ಪತ್ನಿ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರು, ಸಿನಿಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ನಟ ವಿಜಯ ರಾಘವೇಂದ್ರ ಅವರ ಪತ್ನಿ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಸುದ್ದಿ ಈಡೀ ಕನ್ನಡ ಸಿನಿರಂಗಕ್ಕೆ ಬಹಳ ಆಘಾತಕಾರಿ ಸುದ್ದಿಯಾಗಿದೆ.

ಇದನ್ನೂ ಓದಿ : Kangana Ranaut : ಚಂದ್ರಮುಖಿ’2 ನಲ್ಲಿ ಕಂಗನಾ, ಹೇಗಿದೆ ಫಸ್ಟ್ ಲುಕ್

ನಟ ವಿಜಯ್‌ ರಾಘವೇಂದ್ರ ಅವರು ಆಗಸ್ಟ್ 26, 2007 ರಂದು, ಸಹಾಯಕ ಪೊಲೀಸ್ ಆಯುಕ್ತರಾದ ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನಾ ಎಂಬ ತುಳು ಹುಡುಗಿಯನ್ನು ಪ್ರೀತಿಸಿ ವಿವಾಹವಾದರು. ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. ಅಷ್ಟೇ ಅಲ್ಲದೇ 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ಈ ವರ್ಷ ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನು ಕೇವಲ 19 ದಿನಗಳಷ್ಟೇ ಬಾಕಿ ಇರುವಾಗ ಈ ದುರಂತ ಘಟನೆ ಸಂಭವಿಸಿದೆ.

Spandana Passed Away: Sandalwood actor Vijayaraghavendra’s wife Spandana passed away

Comments are closed.