sudeep and appu cutout : ಸ್ಯಾಂಡಲ್ವುಡ್ನಲ್ಲಿ ಸಧ್ಯ ಸಾಲು ಸಾಲು ಹಿಟ್ ಸಿನಿಮಾಗಳು ಬರ್ತಾನೇ ಇದೆ. ಗರುಡ ಗಮನ ವೃಷಭ ವಾಹನ, ಕೆಜಿಎಫ್ 2, ಚಾರ್ಲಿ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಚಂದನವನದಲ್ಲಿ ಬರ್ತಿರುವ ಸಿನಿಮಾಗಳು ಒಂದಕ್ಕಿಂದ ಒಂದು ಚೆನ್ನಾಗಿ ಇರೋದ್ರಿಂದ ಮುಂಬರುವ ಸಿನಿಮಾಗಳ ಮೇಲೂ ಸಿನಿ ರಸಿಕರಿಗೆ ನಿರೀಕ್ಷೆ ಮೊದಲಿಗಿಂತಲೂ ಹೆಚ್ಚಾಗಿದೆ. ಅದೇ ರೀತಿ ಸದ್ಯ ಬಿಡುಗಡೆಗೆ ಸಜ್ಜಾಗಿರುವ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ವಿಕ್ರಾಂತ್ ರೋಣ ಸಿನಿಮಾ ಕೂಡ ಕನ್ನಡಿಗರಿಗೆ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ವಿಕ್ರಾಂತ್ ರೋಣ ಸಿನಿಮಾ ತಂಡ ಅತ್ಯಂತ ವಿಭಿನ್ನ ರೀತಿಯಲ್ಲಿ ಸಿನಿಮಾದ ಪ್ರಚಾರ ಕಾರ್ಯವನ್ನು ಮಾಡುತ್ತಿದೆ .
ವಿಕ್ರಾಂತ್ ರೋಣ ಸಿನಿಮಾ ತಂಡವು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕಿಚ್ಚ ಸುದೀಪ ಅಭಿಮಾನಿಗಳಿಗೆ ಖುಷಿ ನೀಡುವ ಜೊತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೂ ಖುಷಿ ಸುದ್ದಿ ನೀಡುವ ಕಾರ್ಯ ಮಾಡಿದೆ. ಪವರ್ ಸ್ಟಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಜೇಮ್ಸ್ ಚಿತ್ರ ಈಗಾಗಲೇ ತೆರೆ ಕಂಡಿದೆ. ಹೀಗಾಗಿ ಮತ್ತೊಮ್ಮೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದೊಡ್ಡ ದೊಡ್ಡ ಕಟೌಟ್ಗಳನ್ನು ಥಿಯೇಟರ್ಗಳ ಮುಂದೆ ನೋಡುವ ಭಾಗ್ಯ ಅಪ್ಪು ಅಭಿಮಾನಿಗಳಿಗೆ ಇರಲಿಲ್ಲ. ಆದರೆ ಪುನೀತ್ ಅಭಿಮಾನಿಗಳ ಈ ದುಃಖಕ್ಕೆ ಪರಿಹಾರ ನೀಡಿರುವ ವಿಕ್ರಾಂತ್ ರೋಣ ಚಿತ್ರತಂಡ ಸುದೀಪ್ ಜೊತೆಯಲ್ಲಿ ಪುನೀತ್ ಕಟೌಟ್ನ್ನು ಅಳವಡಿಸಲು ಪ್ಲಾನ್ ರೂಪಿಸಿದೆ.
ಪುನೀತ್ ರಾಜ್ಕುಮಾರ್ ಹಾಗೂ ಸುದೀಪ್ ಬಾಲ್ಯದಿಂದಲೂ ಸ್ನೇಹಿತರು. ಸ್ನೇಹಿತನ ಅಗಲಿಕೆಯ ನೋವಿನಲ್ಲಿರುವ ನಟ ಕಿಚ್ಚ ಸುದೀಪ ತನ್ನ ಸಿನಿಮಾದಲ್ಲಿ ಪುನೀತ್ರ ಕಟೌಟ್ ಅಳವಡಿಸಲು ನಿರ್ಧರಿಸುವ ಮೂಲಕ ಸ್ನೇಹಿತನಿಗೆ ಚಿಕ್ಕ ಅರ್ಪಣೆ ನೀಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯ ದಿನದಂದು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸುದೀಪ್ ಹಾಗೂ ಅಪ್ಪು ಜೊತೆಯಾಗಿರುವ ಕಟೌಟ್ಗಳು ತಲೆ ಎತ್ತಲಿವೆ.
ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆ ಕಾಣಲಿದೆ. ಹಿಂದಿ, ಮಲಯಾಳಂ, ತಮಿಳು, ತೆಲುಗು, ಅರೆಬಿಕ್, ಜರ್ಮನಿ, ಉರ್ದು ಹೀಗೆ ಅನೇಕ ಭಾಷೆಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನು ಓದಿ : CBSE class 12 Results declared : CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Ranveer Singh poses naked :ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ : ದಂಗಾದ ನೆಟ್ಟಿಗರು
sudeep and appu cutout will be erected during vikrant rona release