Dinesh Gunawardena : ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್​ ಗುಣವರ್ದೆನಾ ಪ್ರಮಾಣ ವಚನ

ಶ್ರೀಲಂಕಾ : Dinesh Gunawardena : ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಶ್ರೀಲಂಕಾದ ಜನತೆಯನ್ನು ಸರ್ಕಾರದ ವಿರುದ್ಧವೇ ದಂಗೇಳುವಂತೆ ಮಾಡಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಹಿಂದೂ ಮಹಾಸಾಗರದಲ್ಲಿರುವ ರಾಷ್ಟ್ರವು ತನ್ನ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶ್ರೀಲಂಕಾದಲ್ಲಿ ಹೆಚ್ಚಿನ ಪ್ರತಿಭಟನೆಗಳಿಗೆ ಬೆದರಿದ ಗೋಟಬಯ ರಾಜಪಕ್ಸೆ ದೇಶದಿಂದ ಪಲಾಯಾನ ಮಾಡಿದ ಬಳಿಕ ನಡೆದ ಆರ್ಥಿಕ ಬೆಳವಣಿಗೆಯಲ್ಲಿ ರನಿಲ್​ ವಿಕ್ರಮಸಿಂಘೆ ದೇಶದ ನೂತನ ಅಧ್ಯಕ್ಷರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಇದೀಗ ಶ್ರೀಲಂಕಾದ ಹಿರಿಯ ಶಾಸಕ ದಿನೇಶ್​​ ಗುಣವರ್ದೆನಾ ಇಂದು ದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ ಎಂದು ಶ್ರೀಲಂಕಾ ಪ್ರಧಾನಿ ಕಚೇರಿ ಅಧಿಕೃತ ಮಾಹಿತಿಯನ್ನು ನೀಡಿದೆ.


ಶ್ರೀಲಂಕಾದಲ್ಲಿ ಹೊಸ ಆಡಳಿತವು ಜಾರಿಗೆ ಬರುತ್ತಿದ್ದಂತೆಯೇ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಕೊಲಂಬೋದಲ್ಲಿರುವ ಸರ್ಕಾರಿ ಮೈದಾನದಲ್ಲಿ ಪ್ರತಿಭಟನಾಕಾರರ ಶಿಬಿರಗಳ ಮೇಲೆ ದಾಳಿ ಮಾಡಿದೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀಲಂಕಾದಲ್ಲಿ ನೂತನ ಪ್ರಧಾನಿಯ ಆಯ್ಕೆಯಾಗಿದೆ. ಕೊಲಂಬೊದಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ತೆರವುಗೊಳಿಸುತ್ತಿದ್ದು ಒಂಬತಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.


ಪೊಡುಜನಾ ಪೆರಮುನಾ ಪಕ್ಷದ ಮಾಜಿ ಸಚಿವ ಗುಣವರ್ದೆನಾ ಅಧ್ಯಕ್ಷ ವಿಕ್ರಮಸಿಂಘೆ ಸಮ್ಮುಖದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಶಾಸಕರು ಹಾಗೂ ಅಧಿಕಾರಿಗಳಿಂದ ತುಂಬಿದ್ದ ಕೊಠಡಿಯಲ್ಲಿ ಸಮವಸ್ತ್ರಧಾರಿ ಮಿಲಿಟರಿ ಅಧಿಕಾರಿಗಳ ಮುಂದೆ ಆಸೀನರಾದರು. ಸಚಿವ ಸಂಪುಟದ ಉಳಿದ ಸದಸ್ಯರು ಇಂದೇ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.


ಸರ್ಕಾರಗಳಿಂದ ದೇಶದ ಆರ್ಥಿಕತೆಯ ದುರುಪಯೋಗ, ಉಕ್ರೇನ್​ ಸಂಘರ್ಷ, ಸಾಮೂಹಿಕ ಪ್ರತಿಭಟನೆಗಳ ಪರಿಣಾಮ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮಿತಿಮೀರಿತ್ತು. ಇದನ್ನು ನಿಭಾಯಿಸುವಲ್ಲಿ ವಿಫಲವಾದ ಸರ್ಕಾರದ ಮೇಲೆ ಜನ ಸಾಮಾನ್ಯರು ದಂಗೆ ಎದ್ದಿದ್ದಾರೆ. ಅಂತಿಮವಾಗಿ ಈ ದಂಗೆಯು ಶ್ರೀಲಂಕಾದ ಹಿಂದಿನ ಅಧ್ಯಕ್ಷ ಗೋಟಾಬಯ ರಾಜಪಕ್ಸೆಯನ್ನು ದೇಶದಿಂದ ಪಲಾಯನ ಮಾಡುವಂತೆ ಮಾಡಿತ್ತು .

ಇದನ್ನು ಓದಿ : Ranveer Singh poses naked :ಬಾಲಿವುಡ್ ನಟ ರಣವೀರ್​ ಸಿಂಗ್​ ಬೆತ್ತಲೆ ಫೋಟೋಶೂಟ್​ : ದಂಗಾದ ನೆಟ್ಟಿಗರು

ಇದನ್ನೂ ಓದಿ : sudeep and appu cutout : ವಿಕ್ರಾಂತ್​ ರೋಣ ಸಿನಿತಂಡದಿಂದ ಅಪ್ಪು ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಸಿನಿಮಾ ರಿಲೀಸ್​ನಂದು ತಲೆ ಎತ್ತಲಿದೆ ಪುನೀತ್​ ಕಟೌಟ್​

Dinesh Gunawardena sworn in as Sri Lanka’s new PM

Comments are closed.