Sudeep press meet : ನಾನು ಚುನಾವಣೆಯಲ್ಲಿ ಸ್ಪರ್ದಿಸುತ್ತಿಲ್ಲ ; ಬಿಜೆಪಿ ಸೇರ್ಪಡೆ ಬಗ್ಗೆ ಸುದೀಪ್‌ ಸ್ಪಷ್ಟನೆ

ಬೆಂಗಳೂರು : (Sudeep press meet) ರಾಜ್ಯ ರಾಜಕಾರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್‌ (Sudeep Joining BJP) ಬಿಜೆಪಿ ಪಕ್ಷ ಸೇರ್ಪಡೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಜೊತೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ನಡುವಲ್ಲೇ ಸುದೀಪ್‌ಗೆ ಬೆದರಿಕೆ ಕರೆ ಬಂದಿದ್ದು, ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್‌ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ್ದು, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎನ್ನುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಜೊತೆಗೆ ಯಾರ ಪರವಾಗಿಯೂ ಟಿಕೆಟ್‌ ನೀಡುವಂತೆ ಯಾವ ಪಕ್ಷದವರಲ್ಲಿ ಕೇಳಿಲ್ಲ. ಯಾರ ಪರವೂ ನಾನು ಲಾಭಿ ನಡೆಸಿಲ್ಲ. ತನ್ನ ಮನೆಗೆ ಬೆದರಿಕೆ ಪತ್ರ ಬಂದಿದೆ. ಈ ಪತ್ರವನ್ನು ರಾಜಕೀಯದ ಕಾರಣಕ್ಕೆ ಮಾಡಿಲ್ಲ. ಸಿನಿಮಾ ರಂಗದಲ್ಲಿರುವ ಕೆಲವರು ಮಾಡಿದ್ದಾರೆ. ಅವರು ಯಾರೂ ಅನ್ನೋದು ನನಗೆ ಗೊತ್ತಿದೆ. ಅವರಿಗೆ ಬೇರೆ ದಾರಿಯಲ್ಲಿಯೇ ಉತ್ತರ ಕೊಡುತ್ತೇನೆ. ನನಗೆ ಕಷ್ಟಕಾಲದಲ್ಲಿ ಯಾರು ಬೆಂಬಲ ಅವರ ಪರ ನಾನು ಇರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಕೆಲವು ಚುನಾವಣೆಗಳ ಹೊತ್ತಲ್ಲಿ ಸುದೀಪ್ ರಾಜೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಸುದೀಪ್‌ ಯಾವುದೇ ಪಾರ್ಟಿಗೂ ಸೇರ್ಪಡೆ ಆಗಿರಲಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳ ಪರ ಪ್ರಚಾರವನ್ನು ನಡೆಸಿದ್ದರು. ಈಗ 2023 ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ನಟ ಕಿಚ್ಚ ಸುದೀಪ್ ನೇರವಾಗಿ ಬಿಜೆಪಿ ಬೆಂಬಲಿಸಲಿದ್ದು, ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇದಲ್ಲದೇ ರಾಜ್ಯದ ಚುನಾವಣೆ ಬಳಿಕ ಸುದೀಪ್ ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಲಿದ್ದಾರೆ ಎನ್ನಲಾಗಿತ್ತು. ಇನ್ನಿ ಕಾಂಗ್ರೆಸ್ ಪಾರ್ಟಿ ಸುದೀಪ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಮಾಜಿ ಸಂಸದೆ ನಟಿ ರಮ್ಯಾ ಸುದೀಪ್‌ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗುವಂತೆ ಬಹಿರಂಗ ಆಹ್ವಾನ ನೀಡಿದ್ದರು. ಇನ್ನೊಂದೆಡೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಖುದ್ದು ಸುದೀಪ್‌ ಅವರ ಮನೆಗೆ ಭೇಟಿ ಕೊಟ್ಟು ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ಡಿಕೆಶಿ ಆಹ್ವಾನವನ್ನು ಸುದೀಪ್‌ ನಯವಾಗಿಯೇ ತಿರಸ್ಕರಿಸಿದ್ದರು.

ಇದೀಗ ಚುನಾವಣೆ ಹೊತ್ತಿನಲ್ಲಿ ಸುದೀಪ್‌ ಮೋದಿಯವರ ವಿಚಾರಧಾರೆ ಮೆಚ್ಚಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಎಲ್ಲಾ ಉಹಾಪೋಹಗಳಿಗೆ ಸುದೀಪ್‌ ಸ್ಪಷ್ಟನೆ ನೀಡಿದ್ದು, ತಾನು ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. “ಯಾವ ಪಕ್ಷದಿಂದಲೂ ನಾನು ಚುನಾವಣೆಗೆ ನಿಲ್ಲಲ್ಲ. ಚುನಾವಣೆ, ರಾಜಕಾರಣ ನನಗೆ ಇಷ್ಟವಿಲ್ಲ, ನನ್ನ ಸ್ನೇಹಿತರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಅಷ್ಟೇ. ನಾನು ಯಾರ ಪರವಾಗಿಯೂ ಟಿಕೆಟ್‌ ಕೇಳಿಲ್ಲ ” ಎಂದು ಬಿಜೆಪಿ ಸೇರ್ಪಡೆ ಬಗ್ಗೆ ಇರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಚುನಾವಣೆ ಸೇರ್ಪಡೆ ಸುದ್ದಿ ಹೊರಬೀಳುತ್ತಲೇ ಸುದೀಪ್‌ ಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಕೂಡ ಮಾತನಾಡಿದ್ದು, ನಾನು ಯಾವ ಬೆದರಿಕೆಗಳಿಗೂ ಹೆದರುವುದಿಲ್ಲ ನನ್ನ ಕೈ ಹಿಡಿದ ವ್ಯಕ್ತಿಗಳನ್ನು ನಾನು ಮರೆಯುವುದಿಲ್ಲ. ಸಮಯ ಬಂದಾಗ ಆ ವ್ಯಕ್ತಿಯ ಪರ ನಿಲ್ಲುತ್ತೇನೆ. ನಾನು ಯಾವುದೇ ಪಕ್ಷದ ಪರ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. . ಕೆಲವು ವಿಚಾರಗಳನ್ನು ಇಲ್ಲಿ ಹೇಳಲು ಆಗುವುದಿಲ್ಲ. ನಾನೊಂದು ನಿಲುವು ತೆಗದುಕೊಂಡಿದ್ದೇನೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲೇ ಹೇಳುತ್ತೇನೆ ಎಂದಿದ್ದಾರೆ.

Sudeep press meet: I am not contesting the election Sudeep clarified about joining BJP

Comments are closed.