ಕೆಜಿಎಫ್-2 ರಿಲೀಸ್ ಗೆ ಸಿದ್ಧತೆ ನಡೆದಿರೋ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡಲಾರಂಭಿಸಿದೆ. ಹೌದು, ಅಭಿನಯ ಚಕ್ರವರ್ತಿ ಸುದೀಪ್ (Sudeep) ಅಭಿನಯದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ( Vikrant Rona Teaser ) ರಿಲೀಸ್ ಸಿದ್ಧತೆ ಭರ್ಜರಿಯಾಗಿ ನಡೆದಿದ್ದು ಸಿನಿಮಾ ರಿಲೀಸ್ ಡೇಟ್ ಸದ್ಯದಲ್ಲೇ ಅನೌನ್ಸ್ ಆಗಲಿದೆ. ಈ ಮಧ್ಯೆ ಯುಗಾದಿಯಂದು ಹಬ್ಬದ ಸವಿ ಹೆಚ್ಚಿಸಲು ವಿಕ್ರಾಂತ್ ರೋಣ ಟೀಸರ್ ರಿಲೀಸ್ ಆಗಲಿದ್ದು, ಇದನ್ನು ಚಿತ್ರತಂಡ ಖಚಿತಪಡಿಸಲಿದೆ.

ಯುಗಾದಿ ಹೊಸವರ್ಷವನ್ನು ಸ್ವಾಗತಿಸೋ ಸಂಭ್ರಮದಲ್ಲಿರೋ ಜನತೆಗೆ ಹಾಗೂ ಸುದೀಪ್ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ ನೀಡಲು ಸಜ್ಜಾಗಿದೆ ವಿಕ್ರಾಂತ್ ರೋಣ ತಂಡ. ಯುಗಾದಿ ಹಬ್ಬದಂದು ಅಂದ್ರೇ ಎಪ್ರಿಲ್ 2 ರಂದು ಬೆಳಗ್ಗೆ 9.55 ಕ್ಕೆ ಸರಿಯಾಗಿ ಬಹುಭಾಷೆಗಳಲ್ಲಿ ವಿಕ್ರಾಂತ್ ರೋಣ ಟೀಸರ್ ತೆರೆ ಕಾಣಲಿದೆ. ಸುದೀಪ್ ಜೊತೆ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡೀಸ್ ಸೇರಿದಂತೆ ಹಲವು ಖ್ಯಾತನಾಮರು ನಟಿಸಿರೋ ಈ ಸಿನಿಮಾ ಸಖತ್ ಕುತೂಹಲ ಮೂಡಿಸಿದ್ದು, ಈ ನಿಟ್ಟಿನಲ್ಲಿ ರಿಲೀಸ್ ಆಗ್ತಿರೋ ಟೀಸರ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆ ಇದೆ.

ಈಗಿನ ಟ್ರೆಂಡ್ ನಂತೆ ವಿಕ್ರಾಂತ್ ರೋಣ ಸಿನಿಮಾ ಟೀಸರ್ ನ್ನು ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬರು ಸೆಲೆಬ್ರೆಟಿ ರಿಲೀಸ್ ಮಾಡಲಿದ್ದಾರೆ. ಮಲೆಯಾಳಂನಲ್ಲಿ ವಿಕ್ರಾಂತ್ ರೋಣಗೇ ಮೋಹನ್ ಲಾಲ್ ಗ್ರೀನ್ ಸಿಗ್ನಲ್ ತೋರಲಿದ್ದಾರೆ. ತಮಿಳಿನ ಖ್ಯಾತ ನಟ ಸಿಂಬರಸನ್ ಟಿ.ಆರ್. ವಿಕ್ರಾಂತ್ ರೋಣ ತಮಿಳು ಟೀಸರ್ ತೆರೆಗೆ ಬಿಡಲಿದ್ದಾರೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ತೆಲುಗು ಟೀಸರ್ ರಿಲೀಸ್ ಮಾಡಿ ಶುಭಕೋರಲಿದ್ದಾರೆ. ಬಾಲಿವುಡ್ ನಲ್ಲೂ ವಿಕ್ರಾಂತ್ ರೋಣ ಸಿನಿಮಾ ಅಬ್ಬರಿಸಲಿದ್ದು, ಹಿಂದಿಯಲ್ಲಿ ಬಾಲಿವುಡ್ ಖ್ಯಾತ ನಟ ಹಾಗೂ ಸುದೀಪ್ ಸ್ನೇಹಿತ ಸಲ್ಮಾನ್ ಖಾನ್ ಟೀಸರ್ ರಿಲೀಸ್ ಮಾಡಲಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ವಿಕ್ರಾಂತ್ ರೋಣ ಫೆಬ್ರವರಿಯಲ್ಲೇ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರದಿಂದ ಸಿನಿಮಾ ರಿಲೀಸ್ ಮುಂದೂಡಿಕೆಯಾಗಿದೆ. ಈಗ ಟೀಸರ್ ರಿಲೀಸ್ ಆಗ್ತಿರೋದರಿಂದ ಸದ್ಯದಲ್ಲೇ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತೆ ಅನ್ನೋ ಅಭಿಮಾನಿಗಳ ನೀರಿಕ್ಷೆಗೆ ಬಲಬಂದಿದೆ. ವಿಕ್ರಾಂತ್ ರೋಣಗೆ ಮೊದಲು ಫ್ಯಾಂಟಮ್ ಎಂದು ಹೆಸರಿಡಲಾಗಿತ್ತು. ಬಳಿಕ ದುಬೈನ ಬುರ್ಜಾ ಖಲೀಫಾ ದ ಮೇಲೆ ಸಿನಿಮಾದ ಹೊಸ ಹೆಸರು ವಿಕ್ರಾಂತ್ ರೋಣ ಲೋಗೋವನ್ನು ಅನಾವರಣಗೊಳಿಸಲಾಯಿತು.
ಇದನ್ನೂ ಓದಿ : ಕೆಜಿಎಫ್-2 ಗೆ ಸೆನ್ಸಾರ್ ಬೋರ್ಡ್ U/A ಗ್ರೀನ್ ಸಿಗ್ನಲ್ : ಪ್ರಮೋಶನ್ ಗೆ ಖಾಸಗಿ ವಿಮಾನ ಏರಿದ ಯಶ್
ಇದನ್ನೂ ಓದಿ : ಬಿಗ್ ಬೀ ಗೆ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ : ಅಮಿತಾಬ್ ಎದುರು ತಲೆಬಾಗಲ್ಲ ಎಂದ ಪುಷ್ಪಾ ಬೆಡಗಿ
Sudeep Upcoming Movie Vikrant Rona Teaser Release Ugadi