April Fools Day 2022 : ಏಪ್ರಿಲ್‌ ಫೂಲ್ಸ್‌ ಡೇ ಏಕೆ ಈ ದಿನ ಅಷ್ಟು ಫೇಮಸ್‌! ಇದರ ಇತಿಹಾಸ ಮತ್ತು ಮೂಲ ನಿಮಗೆ ಗೊತ್ತೇ?

ಪ್ರತಿವರ್ಷ ಎಪ್ರಿಲ್‌ ಒಂದನ್ನು ಏಪ್ರಿಲ್‌ ಫೂಲ್ಸ್‌ ಡೇ(April Fools Day 2022) ಎಂದು ಜಗತ್ತಿನಾದ್ಯಂತ ಆಚರಿಸುತ್ತಾರೆ. ಈ ದಿನವನ್ನು ಅನಿಯಮಿತ ಹಾಸ್ಯ, ತಮಾಷೆ ಮತ್ತು ಸಂತೋಷಕ್ಕೆ ಮೀಸಲಿಡಲಾಗಿದೆ. ಈ ಸಂದರ್ಭದಲ್ಲಿ ಜನರು ತಮಾಷೆ ಮಾಡುತ್ತ ಒಬ್ಬರನ್ನೊಬ್ಬರು ನಗಿಸುವುದೇ ಆಗಿದೆ. ಜನರು ಚಿತ್ರ ವಿಚಿತ್ರ ಐಡಿಯಾಗಳೊಂದಿಗೆ ತಮ್ಮ ಪ್ರೀತಿ ಪಾತ್ರರಿಗೆ ಅಥವಾ ಗೆಳಯರಿಗೆ ಆಶ್ಚರ್ಯಕರ ರೀತಿಯಲ್ಲಿ ಸುದ್ದಿಗಳನ್ನು ಹೇಳಿ ಅವರನ್ನು ಪೇಚಿಗೆ ಸಿಲುಕಿಸಿ ನಂತರ ಅದು ಸುಳ್ಳು ಸುದ್ದಿ ಎಂದು ಹೇಳುತ್ತಾ ನಗಿಸುತ್ತಾರೆ. ಏಪ್ರಿಲ್‌ ಫೂಲ್‌ ಅನ್ನು ಶತಮಾನಗಳಿಂದಲೂ ವಿವಿಧ ಸಂಸ್ಕ್ರತಿಗಳು ಆಚರಿಸುತ್ತಲೇ ಬಂದಿದ್ದಾರೆ. ಇದನ್ನು ಮೊದಲು ಆಚರಿಸಿದವರು ಯುರೋಪ್‌ನ ಜನರು ಎಂದು ಇತಿಹಾಸ ಹೇಳುತ್ತದೆ.

ಇತಿಹಾಸ ಮತ್ತು ಮೂಲ:
ನಾವು ಏಪ್ರಿಲ್‌ ಫೂಲ್‌ ಅಥವಾ ಮೂರ್ಖರ ದಿನವನ್ನು ಏಕೆ ಮತ್ತು ಎಂದಿನಿಂದ ಆಚರಿಸುತ್ತಿದ್ದೇವೆ? ನಿಜ ಹೇಳಬೇಕೆಂದರೆ ಈ ಏಪ್ರಿಲ್‌ ಫೂಲ್‌ ಡೇ ಯಾವಾಗನಿಂದ ಶುರುವಾಯಿತು ಎಂಬುದು ಈಗಲೂ ಒಂದು ನಿಗೂಢವೇ. ಇದನ್ನು ಯಾರು ಪ್ರಾರಂಭಿಸಿದರು ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿರದ ಸಂಗತಿಯಾಗಿದೆ. ಅದೇನೇ ಇದ್ದರೂ ಇತಿಹಾಸ ತಜ್ಞರ ಪ್ರಕಾರ ಇದನ್ನು 1582 ರಲ್ಲಿ ಪ್ರಾರಂಭಿಸಲಾಯಿತು ಎಂದು ತಿಳಿದುಬಂದಿದೆ. ಇದು ಫ್ರಾನ್ಸ್‌ ಜೂಲಿಯನ್‌ ಕ್ಯಾಲಂಡರ್‌ ನಿಂದ ಗ್ರೇಗೋರಿಯನ್‌ ಕ್ಯಾಲಂಡರ್‌ಗೆ ಬದಲಾದ ಸಮಯವಾಗಿತ್ತು.

ಪೋಪ್‌ ಗ್ರೆಗೋರಿ XIII ಗ್ರೆಗೋರಿಯನ್‌ ಕ್ಯಾಲೆಂಡರ್‌ ಅನ್ನು ಜನವರಿ 1ರಂದು ಪರಿಚಯಿಸಿದ ನಂತರ ಈ ಏಪ್ರಿಲ್‌ ಫೂಲ್ಸ್‌ ಡೇಯನ್ನು ಆಚರಿಸುತ್ತಾ ಬಂದಿದ್ದಾರೆ. ಇದಕ್ಕಿಂತ ಮೊದಲು ಹೊಸ ವರ್ಷವನ್ನು ಮಾರ್ಚ ಅಂತ್ಯದಲ್ಲಿ ಆಚರಿಸಲಾಗುತ್ತಿತ್ತು.

ಇದನ್ನೂ ಓದಿ: Happy Ugadi 2022 : ಯುಗಾದಿ 2022 : ಈ ದಿನದ ಮಹತ್ವ, ಆಚರಣೆಯ ಬಗ್ಗೆ ನೀವೂ ತಿಳಿಯಿರಿ

ಪ್ರಾಚೀನ ಕಾಲದಲ್ಲಿ ಕ್ಯಾಲೆಂಡರ್‌ಗಳು ವೆರ್ನಲ್‌ ಇಕ್ವಿನೊಕ್ಸ್‌(ವಸಂತ ಋತು) ಅನ್ನು ಆಧರಿಸಿದ್ದವು. ಹೊಸ ವರ್ಷವನ್ನು ಏಪ್ರಿಲ್‌ 1 ರ ಅಥವಾ ಅದರ ಆಸುಪಾಸಿನಲ್ಲಿ ಆಚರಿಸಲಾಗುತ್ತಿತ್ತು. ಯುರೋಪಿನ ಅನೇಕ ಸ್ಥಳಗಳಲ್ಲಿ ಹೊಸ ವರ್ಷವನ್ನು ಮಾರ್ಚ್ 25ರ ಸುಮಾರಿಗೆ ಆಚರಿಸುತ್ತಿದ್ದರು.

ಪೀಪಲ್‌ ಗ್ರೆಗೋರಿ ಹೊಸವರ್ಷವನ್ನು ಜನವರಿ 1ಕ್ಕೆ ಬದಲಾಯಿಸಿದ ನಂತರವೂ ಅನೇಕರು ಈ ತೀವ್ರವಾದ ಹಠಾತ್‌ ಬದಲಾವಣೆಯನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ನಂಬಲಾಗಿದೆ. ಒಂದು ಅವರಿಗೆ ಹೊಸ ಕ್ಯಾಲೆಂಡರ್‌ ಬಗ್ಗೆ ತಿಳಿದಿರಲಿಲ್ಲ ಅಥವಾ ಅವರು ಹಳೆಯ ಕ್ಯಾಲೆಂಡರ್‌ ಅನ್ನೇ ಅನುಸರಿಸುತ್ತಿದ್ದರು. ಅದಕ್ಕಾಗಿಯೇ ಸಾಮಾನ್ಯವಾಗಿ ಸಾಂಪ್ರದಾಯಿಕ ಕ್ಯಾಲೆಂಡರ್‌ ಅನ್ನು ಅನುಸರಿಸುವ ಮತ್ತು ಆ ದಿನವನ್ನು ಆಚರಿಸುವ ಜನರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು. ಹೀಗೆ ಏಪ್ರಿಲ್‌ 1ಅನ್ನು ಏಪ್ರಿಲ್‌ ಫೂಲ್ಸ್‌ ಡೇ ಎಂದು ಆಚರಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ: Delicious Mango : ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ರುಚಿಕರ ಮಾವು : ಕಾರಣ ಏನು ಗೊತ್ತಾ?

(April Fools Day 2022 History and origin of the day)

Comments are closed.