ಬಾಲಿವುಡ್ ನ ಸಿಂಗಂ ಖ್ಯಾತಿಯ ಅಜಯ್ ದೇವಗನ್ ಹಾಗೂ ಕರ್ನಾಟಕದ ಕಿಚ್ಚ ಸುದೀಪ್ (Sudeep Vs Ajay Devgn ) ನಡುವೆ ಹಿಂದಿ ಭಾಷೆ ವಿಚಾರಕ್ಕೆ ಈಗಾಗಲೇ ದೊಡ್ಡ ವಾರ್ ನಡೆದು ಹೋಗಿದೆ. ಹಿಂದಿ ರಾಷ್ಟ್ರ ಭಾಷೆ ಎಂಬ ವಿಚಾರಕ್ಕೆ ಹುಟ್ಟಿಕೊಂಡ ಈ ವಿವಾದ ಎಲ್ಲ ನಟ-ನಟಿಯರು ಹಾಗೂ ರಾಜಕೀಯ ನಾಯಕರ ರಿಯಾಕ್ಷನ್ ಜೊತೆ ಇತ್ತೀಚಿಗಷ್ಟೇ ತಣ್ಣಗಾಗಿದೆ. ಇದರ ಬೆನ್ನಲ್ಲೇ ಈಗ ಮತ್ತೊಮ್ಮೆ ಸಿಂಗಂ ಮತ್ತು ಕಿಚ್ಚ ನಡುವೆ ವಾರ್ ಜೋರಾಗೋ ಲಕ್ಷಣ ದಟ್ಟ ವಾಗಿದ್ದು ಒಂದೇ ದಿನದ ಅಂತರದಲ್ಲಿ ಇಬ್ಬರೂ ಸ್ಟಾರ್ ಗಳ ಸಿನಿಮಾ ತೆರೆಗೆ ಬರೋದು ಬಹುತೇಕ ಫಿಕ್ಸ್ ಅಗಿದೆ.
ಕಳೆದ ಎರಡು ವರ್ಷಗಳಿಂದ ಸದ್ದು ಮಾಡ್ತಿರೋ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ತೆರೆಗೆ ಬರೋ ಮುಹೂರ್ತ ಘೋಷಿಸಿದೆ. ಕೊರೋನಾ ಕಾರಣಕ್ಕೆ ಎರಡು ವರ್ಷಗಳಿಂದ ತೆರೆ ಕಾಣಲು ಸಿದ್ಧವಾಗಿದ್ದರೂ ಬಾಕ್ಸಾಫೀಸ್ ನಲ್ಲೇ ಉಳಿದಿದ್ದ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಬರುವ ಜೂನ್ 28 ರಂದು ತೆರೆಗೆ ಬರಲಿದೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿರೋ ವಿಕ್ರಾಂತ್ ರೋಣ ಜೂನ್ 28 ರಂದು ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ಸುದೀಪ್ ಸಿನಿಮಾ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆಯೂ ಸಾಕಷ್ಟು ನೀರಿಕ್ಷೆ ಮೂಡಿಸಿದೆ. ಹೀಗಿರುವಾಗಲೇ ಸುದೀಪ್ ಸಿನಿಮಾಗೆ ಟಕ್ಕರ್ ಕೊಡಲು ಬಾಲಿವುಡ್ ಸಿಂಗಂ ಅಜಯ್ ದೇವಗನ್ ಸಿದ್ಧವಾಗಿದ್ದಾರೆ. ಜೂನ್ 29 ರಂದು ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾ ತೆರೆಗೆ ಬರಲಿದೆಯಂತೆ.
ವಿಕ್ರಾಂತ್ ರೋಣ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಬಹುಭಾಷೆಯಲ್ಲಿ ಟೂಡಿ ಹಾಗೂ ತ್ರೀ ಡಿಯಲ್ಲಿ ಮೂಡಿ ಬರುತ್ತಿದೆ. ಅಲ್ಲದೇ ದೇಶದಾದ್ಯಂತ ಹಲವು ಭಾಷೆಯಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ವಿಕ್ರಾಂತ್ ರೋಣ ತೆರೆಗೆ ಬರ್ತಿರೋ ಹೊತ್ತಿನಲ್ಲಿ ಒಂದೇ ದಿನದ ಅಂತರದಲ್ಲಿ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾ ತೆರೆಗೆ ಬರ್ತಿರೋದು ನಿಜಕ್ಕೂ ಅಚ್ಚರಿ ಗೆ ಕಾರಣವಾಗಿದೆ.
ಇನ್ನೂ ಥ್ಯಾಂಕ್ ಗಾಡ್ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ನಟ ಅಜಯ್ ದೇವಗನ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸಿನಿಮಾದ ನಿರ್ಮಾಪಕರು ಥ್ಯಾಂಕ್ ಗಾಡ್ ಜೂನ್ 29 ರಂದು ತೆರೆ ಕಾಣಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೆ ಸಿನಿಮಾ ಕ್ಷೇತ್ರದಲ್ಲಿ ಅಜಯ್ ದೇವಗನ್ ಮತ್ತು ಸುದೀಪ್ ನಡುವೆ ಜಿದ್ದಾಜಿದ್ದಿ ಜೋರಾಗೋ ಲಕ್ಷಣವಿದೆ.
ಇದನ್ನೂ ಓದಿ : ಡಾಲಿ ಹೆಡ್ ಬುಷ್ ಗೆ ಕಂಟಕ : ಕಾನೂನು ಸಮರದ ಎಚ್ಚರಿಕೆ ನೀಡಿದ ಜಯರಾಜ್ ಕುಟುಂಬ
ಇದನ್ನೂ ಓದಿ : ಮೇ 7-8 ರಂದು ಯಜಮಾನ ಪ್ರೀಮಿಯರ್ ಲೀಗ್
Sudeep Vs Ajay Devgn Again Star War Thank god Vikrant Rona