Karnataka Cabinet Expansion : ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ : ಯಾರು ಇನ್‌, ಯಾರು ಔಟ್‌, ಇಲ್ಲಿದೆ Exclusive ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದರೂ ಇನ್ನೊಂದೆಡೆ ಕೊನೆಕ್ಷಣಗಳಲ್ಲಾದರೂ ಸಚಿವ ಸಂಪುಟ ಸೇರ್ಪಡೆಗೊಳ್ಳಬೇಕೆಂಬ ಕಾರಣಕ್ಕೆ ಸಚಿವ ಸ್ಥಾನಾಕಾಂಕ್ಷಿಗಳ ಸರ್ಕಸ್ ಕೂಡ ಜೋರಾಗಿದೆ. ಈ ಮಧ್ಯೆ ಮೇ‌ಮಧ್ಯಂತರದ ವೇಳೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ ಸಂಪುಟ ವಿಸ್ತರಣೆಗೆ (Karnataka Cabinet Expansion ) ಹೈಕಮಾಂಡ್ ಗ್ರೀನ್ ಸಿಗ್ನಲ್ ಹೊತ್ತು ತರುತ್ತಾರೆ ಎಂದು ನೀರಿಕ್ಷಿಸಲಾಗುತ್ತಿದ್ದು, ಸಚಿವ ಸಂಪುಟದಿಂದ ಹೊರಬೀಳುವ ಹಾಗೂ ಸಂಪುಟಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿ ಇಲ್ಲಿದೆ.

ಹೌದು, ಇನ್ನೇನು ಚುನಾವಣೆಗೆ ದಿನಗಣನೆ ನಡೆದಿದ್ದರೂ ಸಂಪುಟ ವಿಸ್ತರಣೆಯ ಸರ್ಕಸ್ ನಿಂತಿಲ್ಲ. ಸಚಿವ ಸ್ಥಾನ ಪಡೆಯಲು ಕಳೆದ ಒಂದು ವರ್ಷದಿಂದ ಸರ್ಕಸ್ ನಡೆಸಿರೋ ಶಾಸಕರು ಇದೇ ಕೊನೆಯ ಪ್ರಯತ್ನ ಎಂಬಂತೆ ಸಂಪುಟ ಸೇರಲು ಪ್ರಯತ್ನ ಆರಂಭಿಸಿದ್ದಾರೆ. ಒಂದೆಡೆ ಸಂಪುಟ ಸೇರಲು ಸರ್ಕಸ್ ನಡೆದಿದ್ದರೇ, ಇನ್ನೊಂದೆಡೆ ಈಗಾಗಲೇ ಸಚಿವ ಸ್ಥಾನ ಪಡೆದಿರೋ ಶಾಸಕರು ಸಚಿವರಾಗಿ ಉಳಿಯಲು ಇನ್ನಿಲ್ಲದ ಪರದಾಟ ನಡೆಸಿದ್ದಾರೆ.

ಈ ಮಧ್ಯೆ ಸದ್ಯ ಸಂಪುಟದಲ್ಲಿ ಒಟ್ಟು 5 ಸಚಿವ ಸ್ಥಾನ ಖಾಲಿ ಇದ್ದು, 12 ಕ್ಕೂ ಹೆಚ್ಚು ಸಚಿವ ಸ್ಥಾನಾಕಾಂಕ್ಷಿಗಳಿದ್ದಾರೆ. ಹೀಗಾಗಿ ಈಗಾಗಲೇ ಸಂಪುಟದಲ್ಲಿರೋ ಬಿ.ಸಿ.ಪಾಟೀಲ್, ಪ್ರಥ್ವಿರಾಜ್ ಚೌಹಾಣ, ಶಶಿಕಲಾ ಜೊಲ್ಲೆ,‌ ಶ್ರೀನಿವಾಸ್ ಪೂಜಾರಿ ಸೇರಿದಂತೆ ಒಟ್ಟು 5 ಕ್ಕೂ ಹೆಚ್ಚು ಸಚಿವರಿಗೆ ಕೋಕ್ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಇನ್ನು ಜಾತಿ, ಮೀಸಲಾತಿ, ಪಕ್ಷ ಸಂಘಟನೆ, ವಯಸ್ಸು, ಪ್ರಭಾವ, ಓಟ್ ಬ್ಯಾಂಕ್ ಲೆಕ್ಕಾಚಾರ, ಪ್ರಾದೇಶಿಕತೆ , ಯುವಮುಖ, ಆರ್ ಎಸ್ ಎಸ್ ನಿಷ್ಠೆ ಆಧರಿಸಿ ಹೊಸಬರಿಗೆ ಸಚಿವ ಸ್ಥಾನ ನೀಡಲು ಸಿದ್ಧತೆ ನಡೆದಿದೆ.

Karnataka Cabinet Expansion : ಬಿಜೆಪಿ ಹೈಕಮಾಂಡ್ ಲೆಕ್ಕಾಚಾರದ ಪ್ರಕಾರ ಸೇರ್ಪಡೆಯಾಗುವ ಶಾಸಕರು :

  1. ಸುರಪುರ- ರಾಜುಗೌಡ
  2. ಪಿ.ರಾಜೀವ್
  3. ಹಿರಿಯೂರು- ಪೂರ್ಣಿಮಾ
  4. ಸಿ.ಪಿ.ಯೋಗೇಶ್ವರ್
  5. ಅರವಿಂದ್ ಬೆಲ್ಲದ್‌
  6. ಎಂ.ಪಿ.ರೇಣುಕಾಚಾರ್ಯ
  7. ಕೆ.ರಾಮದಾಸ್
  8. ದತ್ತಾತ್ರೇಯ ರೇವೂರ್
  9. ಹಾಲಾಡಿ ಶ್ರೀನಿವಾಸ್ ಶೆಟ್ಟಿ
  10. ಬಸನಗೌಡ ಪಾಟೀಲ್ ಯತ್ನಾಳ್
  11. ತಿಪ್ಪಾರೆಡ್ಡಿ
  12. ಎನ್.ಮಹೇಶ್
  13. ಸತೀಶ್ ರೆಡ್ಡಿ
  14. ಎಂ.ಪಿ.ಕುಮಾರಸ್ವಾಮಿ

ಹೆಸರು ಸಂಪುಟಕ್ಕೆ ಸೇರ್ಪಡರಗೊಳ್ಳೋರು ಸಾಲಿನಲ್ಲಿ ಕೇಳಿಬಂದಿದೆ. ಅಲ್ಲದೇ ಚುನಾವಣೆಗೆ ದಿನಗಣನೆ ನಡೆದಿರೋದರಿಂದ ವಿವಾದ, ಭ್ರಷ್ಟಾಚಾರ, ಹಗರಣಗಳಿಂದ ಮುಕ್ತವಾಗಿ ಇರುವವರಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿದೆಯಂತೆ. ಹೀಗಾಗಿ ಮತ್ತೊಮ್ಮೆ ರಾಜ್ಯದ ಸಚಿವ ಸ್ಥಾನಾಕಾಂಕ್ಷಿಗಳ ಚಿತ್ತ ಹೈಕಮಾಂಡ್ ನತ್ತ ನೆಟ್ಟಿದ್ದು ಈ ಭಾರಿಯಾದ್ರೂ ಸಚಿವ ಸ್ಥಾನಕ್ಕೇರೋ ಶಾಸಕರ ಕನಸು ಈಡೇರುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಪಿಎಸ್​ಐ ನೇಮಕಾತಿ ಅಕ್ರಮ ಹೊರಬರಲು ಬಿಜೆಪಿಗರೇ ಕಾರಣ ಎಂದ ಹೆಚ್​​.ಡಿ ಕುಮಾರಸ್ವಾಮಿ

ಇದನ್ನೂ ಓದಿ : ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್​ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ : ಬಿ.ವೈ ವಿಜಯೇಂದ್ರ

Karnataka Cabinet Expansion Who is out Who is in Here is Exclusive Details

Comments are closed.