ಕರ್ನಾಟಕದಲ್ಲಿ ನಾಡು- ನುಡಿ ವಿಚಾರಕ್ಕೆ ಮತ್ತೊಮ್ಮೆ ಕನ್ನಡಿಗರು ಬೀದಿಗೆ ಬರಲು ಸಿದ್ಧವಾಗಿದ್ದಾರೆ. ರಾಯಣ್ಣನ ಪ್ರತಿಮೆಗೆ ಅವಮಾನ, ಕನ್ನಡ ಧ್ವಜಕ್ಕೆ ಬೆಂಕಿ ಸೇರಿದಂತೆ ಹಲವು ಕಾರಣಕ್ಕೆ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಇನ್ನು ಕನ್ನಡದ ಪರ ಹೋರಾಟಕ್ಕೆ ಪಕ್ಷಾತೀತವಾಗಿ ರಾಜಕೀಯ ನಾಯಕರು, ನಟ-ನಟಿಯರು ಬೆಂಬಲ ಕೊಟ್ಟಿದ್ದಾರೆ. ಆದರೆ ಕನ್ನಡ ಸ್ಟಾರ್ ನಟರಾದ ಯಶ್ ಮತ್ತು ಸುದೀಪ್ (Sudeep and Yash) ಈ ವಿಚಾರದಲ್ಲಿ ಮೌನ ವಹಿಸಿರೋದು ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು ಎಲ್ಲಿದ್ದೀರಾ ಯಶ್ ಸುದೀಪ್ ಅಂತ ಜನ ಪ್ರಶ್ನಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಕರುನಾಡಿನಲ್ಲಿ ನಾಡು-ನುಡಿಕನ್ನಡ ಪರ ಹೋರಾಟದ್ದೇ ಮಾತು. ಕರವೇ, ಕನ್ನಡ ವಾಟಾಳ ಪಕ್ಷ ಸೇರಿದಂತೆ ನೊರೆಂಟು ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದರೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕನ್ನಡ ಪರ ಹೋರಾಟಕ್ಕೆ ಬಲತುಂಬುತ್ತಿದ್ದಾರೆ. ಸ್ಯಾಂಡಲ್ ವುಡ್ ನಾಯಕರು ಟ್ವೀಟ್ ಹಾಗೂ ಪೋಸ್ಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.ಮಾತ್ರವಲ್ಲ ಹೋರಾಟಕ್ಕೂ ನಮ್ಮ ಬೆಂಬಲವಿದೆ ಎಂದಿದ್ದಾರೆ. ಶಿವಣ್ಣನ ನೇತೃತ್ವದಲ್ಲಿ ಹೋರಾಟಕ್ಕೆ ಸಿದ್ಧ ಎಂದು ರಂಗಾಯಣ ರಘು, ಲೂಸ್ ಮಾದ್,ದುನಿಯಾ ವಿಜಯ್, ವಿನೋಧ್ ರಾಜ್ ಬಹಿರಂಗವಾಗಿಯೇ ಹೇಳಿದ್ದರು.
ಇನ್ನು ಒಂದು ಹೆಜ್ಜೆ ಮುಂದೇ ಹೋದ ಹ್ಯಾಟ್ರಿಕ್ ಹೀರೋ ಶಿವಣ್ಣ ಕನ್ನಡಕ್ಕಾಗಿನಮ್ಮ ಪ್ರಾಣ ಕೊಡಲು ಸಿದ್ಧ ಎಂದಿದ್ದಾರೆ. ಆದರೆ ಎಲ್ಲರೂ ಕನ್ನಡ ಪರ ಹೋರಾಟಕ್ಕೆ ಪ್ರತಿಕ್ರಿಯಿಸಿದ್ದರೇ ನಟ ಯಶ್ ಮತ್ತು ಸುದೀಪ್ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಸುದೀಪ್ ಹಾಗೂ ಯಶ್ ಟ್ವಿಟರ್,ಇನ್ ಸ್ಟಾಗ್ರಾಂ,ಫೇಸಬುಕ್ ಸೇರಿದಂತೆ ಯಾವುದೇ ಸೋಷಿಯಲ್ ಮೀಡಿಯಾದಲ್ಲೂ ಕನ್ನಡ ಪರ ಹೋರಾಟ, ಕನ್ನಡಿಗರ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಎತ್ತಿಲ್ಲ.
ಯಶ್ ಮತ್ತು ಸುದೀಪ್ ಈ ಮೌನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಹಾಗೂ ಟೀಕೆಗೆ ಗುರಿಯಾಗಿದೆ. ಫ್ಯಾನ್ ಇಂಡಿಯಾ ಸ್ಟಾರ್ ಆದ ಮಾತ್ರಕ್ಕೆ ನೀವು ಕನ್ನಡಿಗರಲ್ಲವೇ ? ಸ್ಟಾರ್ ಗಳಾದ ಮಾತ್ರಕ್ಕೆ ನಿಮ್ಮನ್ನು ಆಲ್ ಇಂಡಿಯಾ ಮಟ್ಟಕ್ಕೆ ಬೆಳೆಸಿದ ಕನ್ನಡವನ್ನು ಮರೆತು ಬಿಟ್ರಾ ? ಕನ್ನಡಕ್ಕಾಗಿ ಧ್ವನಿ ಎತ್ತಲು ಮನಸ್ಸಿಲ್ಲವಾ? ಅಥವಾ ಸಮಯವಿಲ್ಲವಾ? ಕನ್ನಡದ ಪರ ಮಾತನಾಡಲು ಪರಭಾಷಾ ಪ್ರೇಕ್ಷಕರ ಭಯವೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಮತ್ತು ಸುದೀಪ್ ರನ್ನು ಅಭಿಮಾನಿಗಳು ವ್ಯಂಗ್ಯವಾಗಿ ಪ್ರಶ್ನಿಸುತ್ತಿದ್ದಾರೆ.
ಅಷ್ಟೇ ಅಲ್ಲ ಕೆಲವರು ಸುದೀಪ್ ಮತ್ತು ಯಶ್ ಅಕೌಂಟ್ ನಲ್ಲೇ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿದ್ದೀರಾ ಯಶ್ ಮತ್ತು ಸುದೀಪ್ ಆಭಿಯಾನಕ್ಕೆ ಯಶ್ ಸುದೀಪ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದು ಟ್ವೀಟ್ ಮಾಡಿದರೇ, ಪೋಸ್ಟ್ ಹಾಕಿದರೇ ಮಾತ್ರ ಅಭಿಮಾನವೇ ಅವರು ಈ ವಿಚಾರದ ಬಗ್ಗೆ ಸಿಎಂ ಬಳಿಯೇ ಮಾತನಾಡಿರಬಹುದಲ್ಲವೇ ಎಂದು ಸುದೀಪ್ ಅಭಿಮಾನಿಗಳು ಟ್ರೋಲರ್ ಗಳಿ ಬಳಿ ವಾದ ಮಾಡಿದ್ದಾರೆ.
ಮುರಳಿ
— Umesh Shivaraju (@umesh_anush) December 22, 2021
ರಿಷಬ್ ಶೆಟ್ಟಿ
ದರ್ಶನ್
ಶ್ರೀನಗರ ಕಿಟ್ಟಿ
ದುನಿಯಾ ವಿಜಯ್
ಸತೀಶ್ ನೀನಾಸಂ#BanMES ಬೆಂಬಲಿಸಿದರು.
ಶಿವಣ್ಣ ಒಂದು ಹೆಜ್ಜೆ ಮುಂದೆ- “ಕನ್ನಡ ನನ್ನ ತಾಯಿ,ನನ್ನ ಜೀವ ಹೋದರೂ ಹೋಗಲಿ ಕನ್ನಡಕ್ಕೆ” ಅಂದರು@TheNameIsYash@KicchaSudeep +ಇತರರು
ಮಾತ್ರ ಸೊಲ್ಲೆತ್ತಿಲ್ಲ.
ನಾಡು,ನುಡಿಯಿಂದ ಸಿಕ್ಕಿರೋದು ಈ ಯಶಸ್ಸು. ಇವರುಗಳು ಮರೆತಂತಿದೆ. pic.twitter.com/xZDobGVA37
ಒಟ್ಟಿನಲ್ಲಿ ಸ್ಟಾರ್ ನಟರಾದ ಯಶ್ ಸುದೀಪ್ ಕನ್ನಡದ ಪರ ಧ್ವನಿ ಎತ್ತದ್ದಕ್ಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಮತ್ತೊಮ್ಮೆ ಎಲ್ಲಿದ್ದೀರಾ ಎಂಬ ಪ್ರಶ್ನೆ ಸದ್ದು ಮಾಡಿದೆ.
ಇದನ್ನೂ ಓದಿ : Meghana Raj Christmas : ಮೇಘನಾ ರಾಜ್ ಮನೆಯಲ್ಲಿ ಸಂಭ್ರಮ : ರಾಯನ್‌ರಾಜ್ ಸರ್ಜಾ ಜೊತೆ ಖುಷಿಗೆ ಕಾರಣ ಹಂಚಿಕೊಂಡ ಕುಟ್ಟಿಮಾ
( Sudeep Yash Silent For The Kannada Fight, Where Are You Asked Fans)