Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!

Odisha couple takes oath :ಭಾರತೀಯ ಸಂಪ್ರದಾಯದಲ್ಲಿ ನಡೆಯುವ ಮದುವೆ ಸಮಾರಂಭಗಳು ಅಂದರೆ ಅಲ್ಲಿ ವಿಜೃಂಭಣೆಗೆ ಯಾವುದೇ ಕೊರತೆ ಇರೋದಿಲ್ಲ. ಸಂಪ್ರದಾಯ, ಉಡುಗೊರೆಗಳು, ಆತಿಥ್ಯ ಅಂತಾ ಲಕ್ಷಗಟ್ಟಲೇ ಹಣವನ್ನು ಮದುವೆ ಸಮಾರಂಭಕ್ಕೆ ಸುರಿಯುತ್ತಾರೆ.ಆದರೆ ಈ ಎಲ್ಲಾ ಮಾತಿಗೆ ವಿರುದ್ಧ ಎಂಬಂತೆ ಯುವ ದಂಪತಿ ಭಾರತೀಯ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಮದುವೆಯಾಗಬೇಕಿದ್ದ ಈ ಜೋಡಿ ಶಾಸ್ತ್ರ- ಸಂಪ್ರದಾಯಗಳನ್ನು ಬಿಟ್ಟು ವಿಶಿಷ್ಠ ರೀತಿಯಲ್ಲಿ ವಿವಾಹವಾಗಿದ್ದಾರೆ.


29 ವರ್ಷದ ವಿಜಯ್​ ಕುಮಾರ್​ ಹಾಗೂ 27 ವರ್ಷದ ಶ್ರುತಿ ಸಕ್ಸೇನಾ ಇಬ್ಬರೂ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜಯ್​​ ಓಡಿಶಾದ ಬೆಹರಾಮ್​ಪುರ ನಿವಾಸಿಯಾಗಿದ್ದರೆ ಶ್ರುತಿ ಉತ್ತರ ಪ್ರದೇಶವರಾಗಿದ್ದಾರೆ.


ಅತಿಥಿಗಳು ಮದುವೆಗೆ ಆಗಮಿಸುತ್ತಿದ್ದಂತೆಯೇ ಕಲ್ಯಾಣ ಮಂಟಪದಲ್ಲಿ ಯಾವುದೇ ತಯಾರಿ ಇಲ್ಲದ್ದನ್ನು ಕಂಡು ಕೆಲಕಾಲ ಆಶ್ಚರ್ಯಚಕಿತರಾದರು. ಮದುವೆ ಹಾಲ್​ನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು. ಹಾಗೂ ಬಗೆ ಬಗೆಯ ಖಾದ್ಯಗಳು ತಯಾರಾಗುತ್ತಿದ್ದರು. ಆದರೆ ಮದುವೆ ಶಾಸ್ತ್ರಕ್ಕೆ ಬೇಕಾದ ಯಾವುದೇ ಪದಾರ್ಥಗಳು ಅಲ್ಲಿ ಇರಲಿಲ್ಲ.


ಎಷ್ಟರ ಮಟ್ಟಿಗೆ ಅಂದರೆ ಈ ಮದುವೆಗೆ ಪುರೋಹಿತರಿಗೂ ಆಹ್ವಾನ ನೀಡಿರಲಿಲ್ಲ. ವಧುವಿನ ಕೊರಳಿಗೆ ಹಾರವನ್ನು ಹಾಕಿದ ವರ ಬಳಿಕ ಭಾರತೀಯ ಸಂವಿಧಾನದ ಮೇಲೆ ಪ್ರತಿಜ್ಞೆಯನ್ನು ಮಾಡಿದರು.
ಅಲ್ಲದೇ ಮದುವೆಗೆ ದುಬಾರಿ ಉಡುಗೊರೆಗಳನ್ನು ನೀಡುವ ಬದಲು ಅತಿಥಿಗಳು ರಕ್ತದಾನ ಮಾಡಿದ್ದಾರೆ ಎಂದು ಈ ದಂಪತಿ ಹೇಳಿದ್ದಾರೆ. ಅಲ್ಲದೇ ದೇಹದ ಅಂಗಾಂಗಗಳನ್ನೂ ದಾನ ಮಾಡಲು ಸಹಿ ಹಾಕುವಂತೆ ವಿಜಯ್​ ಹಾಗೂ ಶ್ರುತಿ ಮದುವೆಗೆ ಆಗಮಿಸಿದ್ದವರಲ್ಲಿ ಮನವಿ ಮಾಡಿದ್ದಾರೆ.


ಮದುವೆ ಮಂಟಪದ ಸಮೀಪದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅತಿಥಿಗಳು ಮಾತ್ರವಲ್ಲದೇ ಸ್ವತಃ ವಿಜಯ್​ ಹಾಗೂ ಶ್ರುತಿ ಕೂಡ ರಕ್ತದಾನ ಮಾಡಿದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಶ್ರುತಿ, ನಾನು ಹಾಗೂ ವಿಜಯ್​ ಚೆನ್ನೈನಲ್ಲಿ 2015ರಲ್ಲಿ ಭೇಟಿಯಾದೆವು. ನಾವು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾಮನ್​ ಫ್ರೆಂಡ್​​ನಿಂದ ನಾವು ಒಬ್ಬರಿಗೊಬ್ಬರು ಪರಿಚಯವಾಗಿದ್ದೆವು. ನಮ್ಮ ಮದುವೆ ಅತ್ಯಂತ ವಿಭಿನ್ನವಾಗಿ ನೆರವೇರಿದೆ ಎಂದು ಹೇಳಿದರು.

Odisha couple takes oath on Indian constitution instead of pheras, urges guests to donate blood and not gifts

ಇದನ್ನು ಓದಿ : 23 Omicron Case Karnataka : ಯುಕೆಯಿಂದ ಬಂದ ಯುವತಿಗೆ ಓಮೈಕ್ರಾನ್ : ರಾಜ್ಯದಲ್ಲಿ 23 ಕ್ಕೆ ಏರಿದ ಸೋಂಕಿತರ ಸಂಖ್ಯೆ

ಇದನ್ನೂ ಓದಿ : celebrates purchase of smartphone : ಮೊಬೈಲ್​ ಖರೀದಿಸಿದ ಖುಷಿಗೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..!

Comments are closed.