ಸೋಮವಾರ, ಏಪ್ರಿಲ್ 28, 2025
HomeCinemaಮತ್ತೆ ಬಣ್ಣದ ಲೋಕಕ್ಕೆ ಸಂಸದೆ…! ಸುಮಲತಾ ನಟನೆಯ ಚಿತ್ರ ಯಾವುದು ಗೊತ್ತಾ…?!

ಮತ್ತೆ ಬಣ್ಣದ ಲೋಕಕ್ಕೆ ಸಂಸದೆ…! ಸುಮಲತಾ ನಟನೆಯ ಚಿತ್ರ ಯಾವುದು ಗೊತ್ತಾ…?!

- Advertisement -

ಚಿತ್ರರಂಗದ ಸೆಳೆತವೇ ಹಾಗೇ ಅದೂ ಬಿಟ್ಟರೂ ಬಿಡದಂತೆ ಕಾಡುತ್ತದೆ. ಈಗ ಮಂಡ್ಯ ಸಂಸದೆ ಸುಮಲತಾ ವಿಚಾರದಲ್ಲೂ ಆಗಿರೋದು ಹಾಗೇ ಸಂಸದೆಯಾದ ಮೇಲೂ ಬಣ್ಣ ಸೆಳೆದಿದ್ದು ಮತ್ತೊಮ್ಮೆ ನಟನೆಗೆ ಸೈ ಎಂದಿದ್ದಾರೆ.

ನಟ ಹಾಗೂ ಮಾಜಿ ಸಂಸದ ದಿ.ಅಂಬರೀಶ್ ನಿಧನದ ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸುಮಲತಾ ಮಂಡ್ಯದಿಂದ ರಾಜಕೀಯ ಕಣಕ್ಕಿಳಿದ್ದು ಹಾಗೂ ಚುನಾವಣೆ ಗೆದ್ದಿದ್ದು ಈಗ ಇತಿಹಾಸ.
ಹೀಗೆ ಚುನಾವಣೆ ಗೆದ್ದ ಸುಮಲತಾ ಫುಲ್ ಟೈಂ ರಾಜಕೀಯದಲ್ಲಿ ಬ್ಯುಸಿಯಾಗಿದ್ದು ಬಹುತೇಕ ಸಿನಿಮಾ ರಂಗದಿಂದ ದೂರ ಉಳಿದಿದ್ದರು.

ಇದೀಗ ಮತ್ತೊಮ್ಮೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಸುಮಲತಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಮತ್ತೊಮ್ಮೆ ಬಣ್ಣ ಹಚ್ಚಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಲಿದ್ದಾರೆ. ಜಟ್ಟ ಖ್ಯಾತಿಯ ನಿರ್ದೇಶಕ ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದಲ್ಲಿ ಸುಮಲತಾ ಕ್ರೇಜಿಸ್ಟಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಐತಿಹಾಸಿಕ ಕತೆ ಹೊಂದಿರುವ ಕನ್ನಡಿಗ ಚಿತ್ರ ವಿಭಿನ್ನವಾಗಿ ಮೂಡಿ ಬರಲಿದ್ದು, ಕ್ರೇಜಿಸ್ಟಾರ್ ಕೂಡ ಢಿಪರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಕನ್ನಡ ಮತ್ತು ಇಂಗ್ಲೀಷ್ ನ ಮೊದಲ ನಿಘಂಟು ರಚಿಸಿದ ಪಾದ್ರಿ ಫರ್ನಿನಾಂಡ್ ಕಿಟೆಲ್ ಅವಧಿ ಕತೆಯ ಇದಾಗಿದ್ದು, ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಿದ್ದು, ಆದರೆ ಸುಮಲತಾ ಯಾವ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಮಾಹಿತಿಯನ್ನು ಚಿತ್ರರಂಗ ರಿವೀಲ್ ಮಾಡಿಲ್ಲ.

ಒಟ್ಟಿನಲ್ಲಿ ಆಗಾಗ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಮಲತಾ ರಾಜಕೀಯಕ್ಕೆ ಬಂದ ಮೇಲೆ ಚಿತ್ರರಂಗವನ್ನು ಸಂಪೂರ್ಣ ಮರೆತೇ ಬಿಟ್ಟಿದ್ದರು.

ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದು ಸಂಸದೆಯಾಗಿರೋದರಿಂದ ಸುಮಲತಾ ನಟನೆಯ ಈ ಚಿತ್ರ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

RELATED ARTICLES

Most Popular