athiya and kl rahul : ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಪರಸ್ಪರ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಗುಟ್ಟಾಗೇನು ಉಳಿದಿಲ್ಲ. ಈ ಬಗ್ಗೆ ಕೆ.ಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ ಸಹ ಇವರಿಬ್ಬರ ನಡುವಿನ ಬಾಂಡಿಂಗ್ ಎಲ್ಲವನ್ನೂ ಹೇಳುತ್ತದೆ. ಸಧ್ಯದಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಕೂಡ ಅಲ್ಲಲ್ಲಿ ಹರಿದಾಡುತ್ತಿದೆ. ಈ ಎಲ್ಲದರ ನಡುವೆ ಹಿರಿಯ ನಟ ಸುನೀಲ್ ಶೆಟ್ಟಿ ತಮ್ಮ ಪುತ್ರಿ ಆಥಿಯಾ ಶೆಟ್ಟಿ ವಿವಾಹದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಇದೇ ವಿಚಾರದಲ್ಲಿ ಖಾಸಗಿ ವಾಹಿನಿ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಿರಿಯ ನಟ ಸುನೀಲ್ ಶೆಟ್ಟಿ, ಇದೀಗ ಕಾಲ ಬದಲಾಗಿದೆ. ನಮಗೆ ಏನು ಬೇಕು ಎನ್ನುವುದನ್ನು ಇಚ್ಛೆಯನುಸಾರ ಅವರವರೇ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ನನ್ನ ಪುತ್ರ ಹಾಗೂ ಪುತ್ರಿ ಇಬ್ಬರೂ ಜವಾಬ್ದಾರಯುತವಾಗಿದ್ದಾರೆ.ಹೀಗಾಗಿ ಅವರ ಭವಿಷ್ಯದ ನಿರ್ಧಾರಗಳನ್ನೂ ಅವರೇ ಕೈಗೊಳ್ಳಲಿ. ಅವರು ಏನೇ ನಿರ್ಧಾರ ಕೈಗೊಂಡರೂ ಎಲ್ಲದ್ದಕ್ಕೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಆಥಿಯಾ ಹಾಗೂ ಕೆ.ಎಲ್ ರಾಹುಲ್ ಜೊತೆಯಾಗಿ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಜೋಡಿ ಮೊಟ್ಟ ಮೊದಲ ಬಾರಿಗೆ ಆಥಿಯಾ ಸಹೋದರ ಅಹಾನ್ ಶೆಟ್ಟಿ ಮೊದಲ ಸಿನಿಮಾ ತಡಪ್ನ ಪ್ರೀಮಿಯರ್ ನೈಟ್ನಲ್ಲಿ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ಈ ಜೋಡಿ ಈ ವರ್ಷದ ಅಂತ್ಯದೊಳಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎನ್ನಲಾಗಿದೆ. ದಕ್ಷಿಣ ಭಾರತದ ಸಂಪ್ರದಾಯದಂತೆ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಕೂಡ ಎಲ್ಲೆಡೆ ಹರಿದಾಡುತ್ತಿದೆ.
ಇದನ್ನು ಓದಿ : Ravindra Jadeja : ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್
ಇದನ್ನೂ ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು
suniel shetty says daughter athiya and kl rahul have his blessings for wedding