ಸನ್ನಿ ಲಿಯೋನ್ (Sunny Leone) ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹೈಕಳ ಎದೆಬಡಿತ ಏರುಪೇರಾಗಿಸುವ ಸುಂದರಿಗೆ ಎದೆಬಡಿತ ಏರುಪೇರಾಗುವಂತ ಘಟನೆಯೊಂದು ನಡೆದಿದ್ದು, ತಮಗಾದ ಅನ್ಯಾಯವನ್ನು ಸನ್ನಿ ಲಿಯೋನ್ ತಮ್ಮ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ. ಹೌದು ಭೂಪನೊಬ್ಬ ಸನ್ನಿಲಿಯೋನ್ ಪಾನ್ ಕಾರ್ಡ್ ನೀಡಿ ಸಾಲ ಒಡೆದು ಎಸ್ಕೇಪ್ ಆಗಿದ್ದಾನೆ. ಇದರಿಂದ ಸಮಸ್ಯೆಗೊಳಗಾದ ಸನ್ನಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ದುಃಖ ತೋಡಿಕೊಂಡಿದ್ದಾರೆ.
ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ ಪಾನ್ ಕಾರ್ಡ್ ಬಳಸಿದ ವಂಚಕನೊಬ್ಬ ಧಣಿ ಸ್ಟಾಕ್ಸ್ ಲಿಮಿಟೆಡ್ ಎಂಬ ಸಂಸ್ಥೆಯಿಂದ 2000 ರೂಪಾಯಿ ಸಾಲ ಪಡೆದಿದ್ದಾನೆ. ಅಲ್ಲದೇ ಈ ಸಾಲ ಮರುಭರಣ ಮಾಡದೇಇರೋದರಿಂದ ನಟಿ ಸನ್ನಿ ಲಿಯೋನ್ ಸಿಬಿಲ್ ಸ್ಕೋರ್ ಮೇಲೆ ಪ್ರಭಾವ ಬೀರಿದೆ. ಇದರಿಂದ ಎಚ್ಚೆತ್ತ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ತಮಗಾದ ಅನ್ಯಾಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಸನ್ನಿ, ನನಗೆ ಹೀಗೆ ಅನ್ಯಾಯ ಆಗಿದೆ. ಹುಚ್ಚರು ಕೆಲವು ಮೂರ್ಖರು 2000 ರೂಪಾಯಿ ಸಾಲ ಪಡೆಯಲು ನನ್ನ ಪಾನ್ ಕಾರ್ಡ್ ಬಳಸಿದ್ದಾರೆ. ಇದರಿಂದ ನನ್ನ ಸಿಬಿಲ್ SIC ನ್ನು FCK ಮಾಡಿದ್ದಾರೆ ಎಂದು ತಮ್ಮ ಸಿಬಿಲ್ ಸ್ಕೋರ್ ಉಲ್ಲೇಖಿಸಿದ್ದಾರೆ. ಸನ್ನಿ ಲಿಯೋನ್ ಗೆ ವಂಚನೆಯಾಗಿರೋ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಿದೆ. ಸದ್ಯ ವಂಚನೆಗಾಗಿ ಸನ್ನಿ ಲಿಯೋನ್ ಹೆಸರು ಬಳಸಿದ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ತಮ್ಮ ದೂರಿಗೆ ತಕ್ಷಣ ಸ್ಪಂದಿಸಿದ ಸಂಸ್ಥೆಗೆ ಮತ್ತೆ ಟ್ವೀಟ್ ಮೂಲಕ ಸನ್ನಿ ಲಿಯೋನ್ ಧನ್ಯವಾದ ಹೇಳಿದ್ದಾರೆ. ಈ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಿದ್ದಕ್ಕಾಗಿ @ivlsecurities , @ibhomeloans,@cibil_official ಅವರಿಗೆ ಧನ್ಯವಾದಗಳು. ಭವಿಷ್ಯದಲ್ಲಿ ಇಂಥ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆವಹಿಸಿ ಎಂದು ಸನ್ನಿ ಲಿಯೋನ್ ಮನವಿ ಮಾಡಿದ್ದಾರೆ.
ಅಲ್ಲದೇ ಭವಿಷ್ಯದಲ್ಲಿ ಯಾವುದೇ ವ್ಯಕ್ತಿಗೂ ಇಂಥ ಸಮಸ್ಯೆ ಉಂಟಾಗದಂತೆ ನೀವು ಎಚ್ಚರಿಕೆ ವಹಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಯಾಕೆಂದರೇ ಯಾರು ಕೆಟ್ಟ ಸಿಬಿಲ್ ಜೊತೆ ವ್ಯ ಹರಿಸಲು ಬಯಸುವುದಿಲ್ಲ ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ. ಇನ್ನು ಸನ್ನಿ ಲಿಯೋನ್ ವಂಚನೆಗೊಳಗಾದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಟ್ರೋಲ್ ಗೂ ಆಹಾರವಾಗಿದೆ. ಸನ್ನಿ (Sunny Leone) ಹೆಸರಲ್ಲಿ ಎರಡು ಸಾವಿರ ರೂಪಾಯಿ ಸಾಲ ಪಡೆದ ವ್ಯಕ್ತಿಯ ಬಗ್ಗೆಯೂ ಜನ ಕಮೆಂಟ್ ಮಾಡ್ತಿದ್ದಾರೆ.
Thank you @IVLSecurities @ibhomeloans @CIBIL_Official for swiftly fixing this & making sure it will NEVER happen again. I know you will take care of all the others who have issues to avoid this in the future. NO ONE WANTS TO DEAL WITH A BAD CIBIL !!! Im ref. to my previous post.
— sunnyleone (@SunnyLeone) February 17, 2022
ಇದನ್ನೂ ಓದಿ : ಮದುವೆ ಆಗೋಕೆ ನಾನಿನ್ನು ಚಿಕ್ಕವಳು ಎಂದ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟ ಪುಪ್ಫಾ ಶ್ರೀವಲ್ಲಿ ಸೀರೆ ; ಉತ್ತರ ಭಾರತದಲ್ಲೂ ಅಲ್ಲೂ ಅರ್ಜುನ್ ಹವಾ
Sunny Leone, a victim of the 2000 RS fraud, and feeling shared on social media