Kim Jong-un : ಹೂವು ಅರಳದಕ್ಕೆ ಮಾಲಿಗೆ ಶಿಕ್ಷೆ; ಸರ್ವಾಧಿಕಾರಿ ಕಿಮ್ ಜೋಂಗ್ ಅನ್ ಹೊರಡಿಸಿದ ಆದೇಶ ಏನು ಗೊತ್ತಾ?


ಉತ್ತರಕೊರಿಯಾದ ಸರ್ವಧಿಕಾರಿ ಕಿಮ್ ಜೋಂಗ್ ಅನ್
(Kim Jong-un) ಹುಚ್ಚಾಟದ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಈತ ಉತ್ತರ ಕೊರಿಯಾವನ್ನು ತನ್ನ ಕಪಿ ಮುಷ್ಠಿಯಲ್ಲಿ ಇಟ್ಟುಕೊಂಡ ವ್ಯಕ್ತಿ. ಇಲ್ಲಿ ಇವನು ಹೇಳಿದ್ದೆ ಕಾನೂನು. ಹೇರ್ ಸೈಲ್ ನಿಂದ ಹಿಡಿದು ಯಾವಾಗ ಊಟ ಮಾಡಬೇಕು ಹೇಗಿರಬೇಕು ಅನ್ನೋದನ್ನು ಅವನೇ ನಿರ್ಧರಿಸುತ್ತಾನೆ. ಕೊರಿಯಾದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾದಾಗ ಜನರನ್ನು ಕಡಿಮೆ ಊಟ ಮಾಡುವಂತೆ ಆದೇಶಿಸಿದ್ದ. ಇಂತಹ ಹುಚ್ಚುಚ್ಚಾದ ಆದೇಶಗಳನ್ನು ಕಿಮ್ ಮಾಡ್ತಾನೆ ಇರುತ್ತಾನೆ .ಇದೀಗ ಇಂತಹದೇ ಒಂದು ನಿರ್ಧಾರ ಮತ್ತೆ ಜನರಿಗೆ ಕಿಮ್ ನ ಹುಚ್ಚಾಟದ ಅನುಭವವನ್ನು ಮಾಡಿದೆ. ಅದೇನು ಗೊತ್ತಾ? ಕಿಮ್ ತನ್ನ ಹೂತೋಟದಲ್ಲಿ ನಿಗದಿತ ಸಮಯಕ್ಕೆ ಹೂವು ಅರಳಿಲ್ಲ ಅಂತ ಅಲ್ಲಿ ಕೆಲಸ ಮಾಡುತ್ತಿದ ವ್ಯಕ್ಕಿಯನ್ನು ಕಾರ್ಮಿಕ ಶಿಬಿರಕ್ಕೆ ಕಳುಹಿಸಿ ಶಿಕ್ಷೆ ವಿಧಿಸಿದ್ದಾನೆ.

ಕಿಮ್ ಜೋಂಗ್ ಅನ್ ತನ್ನ ತಂದೆಯ ಹೆಸರಲ್ಲೇ ಗ್ರೀನ್ ಹೌಸ್ ನ್ನು ನಿರ್ಮಿಸಿದ್ದಾನೆ. ಅದರ ಮೇಲ್ವಿಚರಣೆಗಾಗಿ ಈ ಮಾಲಿಯನ್ನು ನಿಯೋಜಿಸಿದ್ದ. ಆದ್ರೆ ಫೆಬ್ರವರಿ 16 ರಂದು ಇಲ್ಲಿ ತನ್ನ ತಂದೆಯ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಈ ತೋಟದಿಂದ ಹೂವುಗಳನ್ನು ಬಳಸಬೇಕಾಗಿತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಇದಕ್ಕೆ ಮಾಲಿಯ ಬೇಜಾವಾಬ್ದಾರಿಯೇ ಕಾರಣ ಅಂತ ಅಂದುಕೊಂಡಿರುವ ಕಿಮ್ ಮಾಲಿಗೆ 6 ತಿಂಗಳ ಕಾಲ ಕಾರ್ಮಿಕ ಕ್ಯಾಂಪ್ ನಲ್ಲಿ ಕಳೆಯುವಂತೆ ಆದೇಶ ಹೊರಡಿಸಿದ್ದಾನೆ. ಇನ್ನು ಇಲ್ಲಿರುವ ಕಾರ್ಮಿಕ ಕ್ಯಾಂಪ್ ಗಳು ಒಂದು ರೀತಿಯ ಶಿಕ್ಷೆಯ ಕೇಂದ್ರಗಳಾಗಿಯೇ ಮಾರ್ಪಟ್ಟಿರೋದು ದುರಂತ .

ಇದಿಷ್ಟೇ ಅಲ್ಲ, ಕಿಮ್ ನ ಹುಚ್ಚಾಟ, ಪ್ರತಿವರ್ಷ ಕಿಮ್ ಜೋಂಗ್ ಅನ್ ತಂದೆ ಕಿಮ್ ಜಾನ್ ಲೀ ಪುಣ್ಯತಿಥಿಗೆ 11 ದಿನಗಳ ಕಾಲ ಉತ್ತರಕೊರಿಯಾದಲ್ಲಿ ಶೋಕಾಚರಣೆ ಇರುತ್ತೆ. ಆಗ ದೇಶಾದ್ಯಂತ ಯಾರು ಕೂಡಾ ನಗುವಂತಿಲ್ಲ, ಮಧ್ಯ ಸೇವಿಸುವಂತಿಲ್ಲ. ಜೊತೆಗೆ ಮನೆಗೆ ಯಾವುದೇ ಅಗತ್ಯವಾದ ಸಾಮಾಗ್ರಿಯನ್ನು ತರುವಂತಿಲ್ಲ. ಒಂದು ವೇಳೆ ತಂದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಜನರು ರಸ್ತೆ, ರಸ್ತೆಗಳಲ್ಲಿ ಶೋಕ ವ್ಯಕ್ತ ಪಡಿಸಿಕೊಂಡು ತಿರುಗೋದು ಸಾಮಾನ್ಯ. ಕಿಮ್‌ ಈ ಹಿಂದೆ ಯಾರೂ ಕೂಡ ನಗಾಡದಂತೆಯೂ ಆದೇಶ ಹೊರಡಿಸಿದ್ದ. ಅಪ್ಪಿ ತಪ್ಪಿ ನಕ್ಕವರನ್ನು ಜೈಲಿಗೆ ಅಟ್ಟುವ ಜೊತೆಗೆ ಕಠಿಣ ಶಿಕ್ಷೆಗೂ ಗುರಿಪಡಿಸಿದ್ದಾನೆ. ಇದೀಗ ಕಿಮ್‌ ನೀಡಿರುವ ಶಿಕ್ಷೆಯ ಕುರಿತು ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ : 5 ನಿಮಿಷ ಸಿನಿಮಾ ನೋಡಿದ ಬಾಲಕನಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ಕಿಮ್​ ಜಾಂಗ್​ ಉನ್​..!

ಇದನ್ನೂ ಓದಿ :‌ ಮಾಜಿ ಸರ್ವಾಧಿಕಾರಿ ಪುಣ್ಯಸ್ಮರಣೆ ನಿಮಿತ್ತ ವಿಚಿತ್ರ ನಿರ್ಬಂಧ..! ಉ. ಕೊರಿಯಾದ ಪ್ರಜೆಗಳಿಗೆ ನಗದಂತೆ ಆದೇಶ

( Kim Jong-un Sends Gardeners to Labour Camp, father birthday time Flowers Fail to Bloom)

Comments are closed.