ಕೆಲವೊಂದು ಹೆಸರಿಗೆ ಅಂತಹದೊಂದು ಮ್ಯಾಜಿಕ್ ಶಕ್ತಿ ಇರುತ್ತೆ. ಆ ಹೆಸರನ್ನು ಕೇಳ್ತಿದ್ದಂಗೇ ಒಂದು ಜಾದೂ ಸೃಷ್ಟಿಯಾಗುತ್ತೆ. ಅಂತಹುದೇ ಹೆಸರು ಸನ್ನಿ ಲಿಯೋನ್ (Sunny Leone). ಪಡ್ಡೆಹೈಕಳ ನಿದ್ದೆ ಕದಿಯೋ ಈ ಬೆಡಗಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ನೀಲಿ ಚಿತ್ರಗಳ ರಾಣಿಯಾಗಿ ಮೆರೆದಿದ್ದ ಸನ್ನಿ ಲಿಯೋನ್ ಈಗ ನಟಿಯಾಗಿ ಭಡ್ತಿ ಪಡೆದಿದ್ದರೂ ಇನ್ನೂ ಅವರ ಬಗ್ಗೆ ಹುಡುಗರ ಒಲವು ಕಡಿಮೆಯಾಗಿಲ್ಲ. ಸನ್ನಿ ಲಿಯೋನ್ ಕೂತರೂ ನಿಂತರೂ ಸುದ್ದಿ ಅಂತಹದ್ರಲ್ಲಿ ಸನ್ನಿ ಲಿಯೋನ್ ಬೀಚ್ ಗೆ ಹೋಗಿ ಎಂಜಾಯ್ ಮಾಡ್ತಿದ್ದರೇ ಸುದ್ದಿಯಾಗದೇ ಇರುತ್ತಾ?

ಈಗ ಆಗಿರೋದು ಅದೇ ಸನ್ನಿ ಲಿಯೋನ್ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ಗೆ ಹಾರಿದ್ದು ಅಲ್ಲಿ ಸಮುದ್ರ ತೀರದಲ್ಲಿ ಹಾಟ್ ಹಾಟ್ ಪೋಸ್ ನಲ್ಲಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಎಂಜಾಯ್ ಮಾಡ್ತಿದ್ದಾರೆ. ಪತಿ ಡೆನಿಯಲ್ ವೆಬಲ್ ಜೊತೆ ಸನ್ನಿ ಲಿಯೋನ್ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಅಲ್ಲಿ ತಿಳಿ ನೀಲ ಸಮುದ್ರ ತೀರದಲ್ಲಿ ಕೆಂಪು ಬಿಕನಿ ತೊಟ್ಟು ಸನ್ನಿ ಲಿಯೋನ್ ಮಗುವಿನಂತೆ ನೀರಾಟವಾಡಿ ಎಂಜಾಯ್ ಮಾಡಿದ್ದಾರೆ.

ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ಸ್ ಹೊಂದಿದ್ದಾರೆ. ಹೀಗಾಗಿ ಫ್ಯಾನ್ಸ್ ಗಾಗಿ ಸನ್ನಿ ಲಿಯೋನ್ ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಮಾತ್ರವಲ್ಲ ಮಾಲ್ಡೀವ್ಸ್ ಬೀಚ್ ನಲ್ಲಿ ಎಂಜಾಯ್ ಮಾಡ್ತಿರೋ ವಿಡಿಯೋ, ಅಲ್ಲಿನಬೀಚ್ ರೆಸಾರ್ಟ್, ಮಕ್ಕಳ ಜೊತೆಗಿನ ಪಾರ್ಟಿ ಹೀಗೆ ಎಲ್ಲಾ ಅಪ್ಡೇಟ್ ಮಾಹಿತಿ ಯನ್ನೂ ಒಂದೊಂದು ಸ್ಪೆಶಲ್ ಸ್ಪೆಶಲ್ ಪೋಟೋ, ವಿಡಿಯೋದ ಜೊತೆಗೆ ಶೇರ್ ಮಾಡ್ತಿದ್ದಾರೆ.

ಕೇವಲ ಸನ್ನಿ ಲಿಯೋನ್ ಪತಿ ಮಾತ್ರವಲ್ಲ ಮೂವರು ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಆ ಮಕ್ಕಳೊಂದಿಗಿನ ಪೋಟೋವನ್ನು ಸನ್ನಿ ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಸನ್ನಿ ಲಿಯೋನ್ ತಮ್ಮ ದತ್ತು ಮಗುವಿನ ಕಾರಣಕ್ಕೆ ಟೀಕೆ ಮಾಡ್ತಿರೋರ ಮೇಲೆ ಹರಿಹಾಯ್ದಿದ್ದರು. ಅಲ್ಲದೇ ತಾವು ದತ್ತುಮಗುವನ್ನು ಚೆನ್ನಾಗಿ ನೋಡಿಕೊಳ್ತಿಲ್ಲ ಅನ್ನೋ ವಾದಕ್ಕೆ ಅರ್ಥವಿಲ್ಲ ಎಂದಿದ್ದರು. ಈಗ ಎಲ್ಲ ವಿವಾದ ಮರೆತು ಮಾಲ್ಡೀವ್ಸ್ ಗೆ ಹಾರಿದ್ದು ಅಲ್ಲಿ ಎಂಜಾಯ್ ಮಾಡ್ಕೊಂಡು ಅಭಿಮಾನಿಗಳಿಗೆ ಪೋಟೋ ವಿಡಿಯೋದ ಮೂಲಕ ರಸದೌತಣ ನೀಡ್ತಿದ್ದಾರೆ.
ಇದನ್ನೂ ಓದಿ : ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್
ಇದನ್ನೂ ಓದಿ : ಸನ್ನಿ ಬಳಿಕ ಆಲಿಯಾ…!ಕ್ಯಾಲೆಂಡರ್ ಪೋಟೋ ಶೂಟ್ ನಲ್ಲಿ ಮಿಂಚಿದ ಬೆಡಗಿ
Sunny Leone photoshoot in Maldives