Transformer efficiency : ತಡವಾಗಿ ಎಚ್ಚೆತ್ತ ಬೆಸ್ಕಾಂ : ಟ್ರಾನ್ಸ್‌ಫಾರ್ಮರ್‌ಗಳ ಕ್ಷಮತೆ, ಗುಣಮಟ್ಟ ಸರ್ವೇ ಆರಂಭ

ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಒಂದೆಡೆ ರಸ್ತೆಗುಂಡಿಗಳ‌ ಕಾಟವಾದ್ರೇ ಇನ್ನೊಂದೆಡೆ ಬಲಿಗೆ ಕಾಯ್ತಿರೋ ಟ್ರಾನ್ಸ್‌ ಫಾರ್ಮರ್ ಗಳ ಕಾಟ. ಆದ್ರೀಗ ಕೊನೆಗೂ ಎಚ್ಚೆತ್ತುಕೊಂಡಿರೋ ಬೆಂಗಳೂರು ವಿದ್ಯುತ್ ನಿಗಮ ಬೆಸ್ಕಾಂ (BESCOM) ಅಪ್ಪ ಮಗಳು ಬೆಂಕಿಗೆ ಬಲಿಯಾದ ಬಳಿಕ ಟ್ರಾನ್ಸ್‌ ಫಾರ್ಮರ್ ಗಳ (Transformer efficiency) ಕ್ಷಮತೆ ಹಾಗೂ ಸ್ಥಿತಿಗತಿಗಳ ಪರಿಶೀಲನೆಗೆ ಕೊನೆಗೂ ಮನಸ್ಸು ಮಾಡಿದೆ.

ಬೆಂಗಳೂರಿನ ಮಂಗನಹಳ್ಳಿ ಬಳಿ ಕೆಲದಿನಗಳ ಹಿಂದೆಯಷ್ಟೇ, ಅಪ್ಪ ಮಗಳು ಟ್ರಾನ್ಸಫಾರ್ಮರ್ ಸ್ಪೋಟ ಕ್ಕೆ ಜೀವಂತವಾಗಿ ಉರಿದು ಹೋಗಿದ್ದರು. ಈ ಸಾವುಗಳ ಬಳಿಕ ಸದ್ಯ ಬೆಸ್ಕಾಂ ಅಧಿಕಾರಿಗಳು ಇಂತಹ ದುರಂತಗಳನ್ನ ತಪ್ಪಿಸಲು ಮುಂದಾಗಿದ್ದು, ನಗರದಲ್ಲಿ ದುರಸ್ತಿ ಮತ್ತು ಕ್ಷಮತೆ ಕಳೆದುಕೊಂಡಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇ ಆರಂಭಿಸಿದೆ. ಈ ಸರ್ವೇ ಮೂಲಕ ಸಮಸ್ಯೆ ಇರುವ ಟ್ರಾನ್ಸ್ ಫಾರ್ಮರ್ ಗಳನ್ನ ಪತ್ತೆ ಮಾಡಿ ಅವುಗಳನ್ನ ಬದಲಾಯಿಸಿ ಅವಘಡಗಳನ್ನ ತಪ್ಪಿಸಲು ಪ್ಲ್ಯಾನ್ ಮಾಡಿದೆ.

ಇನ್ನು ಬೆಂಗಳೂರಿನಲ್ಲಿ ಬರೋಬ್ಬರಿ 4,50,584 ಟ್ರಾನ್ಸ್ ಫಾರ್ಮರ್ ಸೆಂಟರ್ ಗಳಿವೆ. ಇವುಗಳಲ್ಲಿ 25, 63, 100, 250, 500 ಕೆ.ವಿ.ಕ್ಯಾಪಸಿಟಿ ಟ್ರಾನ್ಸ್ ಫಾರ್ಮರ್ ಗಳು ಇದ್ದು, ಸದ್ಯದ ಮಾಹಿತಿ ಪ್ರಕಾರ ನಗರದಾದ್ಯಂತ 100 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಡೇಂಜರ್ ಪರಿಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ 25 ಮತ್ತು 15 ವರ್ಷದ ಹಳೆಯ 1000 ಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಡೆಂಜರ್‌ ಹಂತದಲ್ಲಿವೆ. ಜೊತೆಗೆ 27,830 ಅಧಿಕ‌ ಟ್ರಾನ್ಸ್ ಫಾರ್ಮರ್ ವಿಫಲವಾಗಿವೆ.

ಇನ್ನು ಟ್ರಾನ್ಸ್ ಫಾರ್ಮರ್ ಸರ್ವೇ ಬಗ್ಗೆ ಬೆಸ್ಕಾಂ ಟೆಕ್ನಿಕಲ್ ವಿಭಾಗದ ನಿರ್ದೇಶಕ ನಾಗಾರ್ಜುನ್ ಮಾಹಿತಿ ನೀಡಿದ್ದು, ಈಗಾಗಲೇ ನಗರದಾದ್ಯಂತ ಏಜ್ ಓಲ್ಡ್ ಟ್ರಾನ್ಸ್ ಫಾರ್ಮರ್ ಸರ್ವೇ ಆರಂಭಿಸಿದ್ದೇವೆ. ಸಾಮಾನ್ಯವಾಗಿ ಓವರ್ ಲೋಡ್ ಆದ ಟ್ರಾನ್ಸ್ ಫಾರ್ಮರ್ ಗಳು ಬಳಕೆಗೆ ಬರಲ್ಲ. ಮಳೆ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಲೂ ಬೇಗ ಹಾಳಾಗುತ್ತದೆ. ಈ ಸಮಸ್ಯೆಗಳನ್ನು ಪರಿಶೀಲಿಸಿ ತುರ್ತು ಬದಲಾವಣೆ ಹಾಗೂ ಗುಣಮಟ್ಟ ಕಾಪಾಡಲು ಹಾಗೂ ಉತ್ತಮ ಗುಣಮಟ್ಟದ ಟ್ರಾನ್ಸಫಾರ್ಮರ್ ಅವಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸರ್ವೇ ಕಾರ್ಯ ಇನ್ನೊಂದು ತಿಂಗಳಿ ನಲ್ಲಿ ಮುಕ್ತಾಯಗೊಳ್ಳಲಿದೆ. ಮಳೆಗಾಲದಲ್ಲಿ ಇನ್ನಷ್ಟು ಅಪಾಯದ ಸಾಧ್ಯತೆಗಳಿದ್ದು, ಇದಕ್ಕಾಗಿ ಈಗಾಗಲೇ ದುರಸ್ಥಿ ಹಾಗೂ ಬದಲಾಣೆಗೆ ಬೆಸ್ಕಾಂ ಸಿದ್ಧವಾಗುತ್ತಿದೆ. ಇನ್ನಾದರೂ ನಗರದ ಬೆಸ್ಕಾಂ ಗಳು ಜನರ ಪ್ರಾಣವನ್ನು ಬಲಿ ಪಡೆಯದಿರಲಿ ಅನ್ನೋದು ಜನರ ಆಶಯ.

ಇದನ್ನೂ ಓದಿ : ಬಿಬಿಎಂಪಿ ಆವರಣದಲ್ಲಿ ಪವರ್ ಸ್ಟಾರ್ : ಪುನೀತ್ ಪುತ್ಥಳಿ ಅನಾವರಣಗೊಳಿಸಿದ ಸಿಎಂ

ಇದನ್ನೂ ಓದಿ : ಕೊರೋನಾ ಸಂತ್ತಸ್ಥ ಕುಟುಂಬಕ್ಕೆ ಸರ್ಕಾರದ ನೆರವು : ಪರಿಹಾರದ ಚೆಕ್ ನಿರಾಕರಿಸಿದ ಸಾವಿರಕ್ಕೂ ಅಧಿಕ ಕುಟುಂಬಸ್ಥರು

Transformer efficiency quality survey started by BESCOM

Comments are closed.