ಸ್ಯಾಂಡಲ್‌ವುಡ್‌ನಲ್ಲಿ ಘ್ ಪ್ಯಾನ್ ಇಂಡಿಯ ಸಿನಿಮಾ ಕ್ರೇಜ್ ಹೆಚ್ಚಾಗಿದೆ. ನಟ ಉಪೇಂದ್ರ ಅಭಿನಯದ ಕಬ್ಜ ಪ್ಯಾನ್ ಇಂಡಿಯ ಸಿನಿಮಾವಾಗಿ ರೆಡಿಯಾಗಿದ್ದು, ಮುಂದಿನ ತಿಂಗಳು ತೆರೆ ಕಾಣಲಿದೆ. ಅದರ ಬೆನ್ನಲ್ಲೇ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ. ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅದನ್ನು ನೋಡಿದ ಸಿನಿಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದೀಗ ಹೊಸ ಟ್ರೆಂಡ್‌ನ್ನು ಸೃಷ್ಟಿಸುವುದಕ್ಕಾಗಿ ಮಾರ್ಟಿನ್ ಸಿನಿಮಾ ಬಗ್ಗೆ ಜೋಶ್ ಅಪ್ಲಿಕೇಶ್‌ನಲ್ಲಿ (Josh App Challenge) ಪ್ರೇಕ್ಷಕರಿಗೆ ಚಾಲೆಂಜ್‌ನ್ನು ನೀಡಿದ್ದಾರೆ. ಇದೀಗ ಈ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು ಈ ಸಿನಿಮಾ ಟೀಸರ್ ಬಿಡುಗಡೆಯಾಗಿ ನಾಲ್ಕು ದಿನಗಳ ಕಳೆದಿದೆ. ಆದರೆ ಸಾಮಾಜಿಕ ಜಾಕತಾಣದಲ್ಲಿ ಸಖತ್ ಸದ್ದು ಮಾಡುತ್ತಿರುವುದಂತೂ ಸತ್ಯ. ಸದ್ಯ ಮಾರ್ಟಿನ್ ‘ಜೋಶ್’ ಅಪ್ಲಿಕೇಶನ್‌ನಲ್ಲೂ ಹೊಸ ರೀತಿಯಲ್ಲಿ ಟ್ರೆಂಡ್ ಆಗುತ್ತಿದೆ. ಜೋಶ್‌ನಲ್ಲಿ ‘ಮಾರ್ಟಿನ್’ ಸಿನಿಮಾದ ಚಾಲೆಂಜ್ ಲೈವ್ ಆಗಿದ್ದು, ಕ್ರಿಯೇಟರ್‌ಗಳು ಸಿನಿಮಾದ ಟೀಸರ್‌ಗೆ ಸಾಕಷ್ಟು ವಿಡಿಯೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ನೀವೂ ಕೂಡ #Martin ಚಾಲೆಂಜ್ ನಲ್ಲಿ ಭಾಗವಹಿಸಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನ ಭೇಟಿ ಆಗೋ ಅವಕಾಶ ಪಡೆಯಬಹುದು.
ನಟ ಧ್ರುವ ಸರ್ಜಾ ಮೂರು ವರ್ಷದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ‘ಮಾರ್ಟಿನ್’ ಸಿನಿಮಾದ ಟೀಸರ್ ಫೆ.23 ರಂದು ಬಿಡುಗಡೆಗೊಂಡಿದೆ. ಹೆಚ್ಚಾಗಿ ಸಿನಿಮಾದ ಟೀಸರ್‌ನ್ನು ಯು ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ‘ಮಾರ್ಟಿನ್’ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್ – ಟೀಸರ್‌ನ್ನು ಸಿನಿಮಾದಂತೆ ದೊಡ್ಡ ಪರದೆಯ ಮೇಲೆ ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದಾರೆ. ಮಾರ್ಟಿನ್ ಸಿನಿಮಾದ ಟೀಸರ್ 23ರ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದರೆ, ಅದಕ್ಕೂ ಮುಂಚೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಥಿಯೇಟರ್‌ನಲ್ಲಿ ಸಿನಿಮಾದ ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ.
ಇದನ್ನೂ ಓದಿ : ಚೊಚ್ಚಲ ಸಿನಿಮಾ ನ್ಯಾನ್ಸಿ ರಾಣಿ ಬಿಡುಗಡೆಗೂ ಮೊದಲು ಮಲಯಾಳಂ ನಿರ್ದೇಶಕ ವಿಧಿವಶ
ಇದನ್ನೂ ಓದಿ : ಕಬ್ಜ ಸಿನಿಮಾದ 3ನೇ ಹಾಡು ಅದ್ದೂರಿ ರಿಲೀಸ್ : ಸ್ಪೆಷಲ್ ಸಾಂಗ್‌ಗೆ ಫಿದಾ ಆದ ಫ್ಯಾನ್ಸ್
ಇದನ್ನೂ ಓದಿ : ಸ್ಯಾಂಡಲ್‌ವುಡ್ ನಟ ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 13 ಸಿನಿಮಾದ ಟೀಸರ್ ರಿಲೀಸ್
ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ವೈಭವೀ ಶಾಂಡಿಲ್ಯ ತೆರೆ ಹಂಚಿಕೊಂಡಿದ್ದು, ನಿರ್ಮಾಪಕ ಉದಯ್ ಮೆಹ್ತಾ ಅವರು ಸಿನಿಮಾ ಅದ್ದೂರಿತನಕ್ಕೆ ಕಾರಣಕರ್ತರಾಗಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್ ಅವರಂತೂ, ಸಿನಿಮಾ ಬಿಡುಗಡೆಗೂ ಮುನ್ನವೇ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ. ಈ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಮಾಡಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಹ ಕೆಲಸ ಮಾಡಿದ್ದಾರೆ.
Take Josh App Challenge : Meet Action Prince Dhruva Sarja