Best Sports Bikes in India: ನೀವು ಬೈಕ್‌ ಪ್ರೇಮಿಗಳಾಗಿದ್ದರೆ ಇದನ್ನು ಖಂಡಿತ ಓದಿ. ಇಲ್ಲಿದೆ ನಿಮ್ಮ ಹೃದಯದ ಬಡಿತ ಹೆಚ್ಚಿಸುವ ಸ್ಪೋರ್ಟ್ಸ್‌ ಬೈಕ್‌ಗಳು

ಇಂದಿನ ಯುವ ಜನತೆಗೆ ಬೈಕ್‌ ಕ್ರೇಜ್‌ (Bike Craze) ಹೊಸದೇನಲ್ಲ. ಹಲವು ಬಗೆಯ ಬೈಕ್‌ಗಳು ವಾಹನ ಪ್ರಪಂಚದಲ್ಲಿ ನಿಮ್ಮನ್ನು ಆಕರ್ಷಿಸುತ್ತವೆ. ಆದರೆ ಈಗೀಗ ದುಬಾರಿ, ಶಕ್ತಿಶಾಲಿ, ಸ್ಪೋರ್ಟಿಯಸ್ಟ್‌ ಬೈಕ್‌ಗಳ (Sports Bike) ಕ್ರೇಜ್‌ ಸಾಕಷ್ಟು ಹೆಚ್ಚಾಗಿದೆ. ಭಾರತದಲ್ಲಿ ಅಂತಹ ಸ್ಪೋರ್ಟ್ಸ್‌ ಬೈಕ್‌ಗಳು ಬೇಕಾದಷ್ಟಿದೆ. ಆದರೆ ಉತ್ತಮ ಮೈಲೇಜ್‌, ಇಂಜಿನ್‌ ಹೊಂದಿರುವ ಸ್ಪೋರ್ಟ್ಸ್‌ ಬೈಕ್‌ಗಳ (Best Sports Bikes in India) ಬಗ್ಗೆ ಇಲ್ಲಿದೆ ಓದಿ.

ಭಾರತದಲ್ಲಿ ದೊರೆಯುವ ದುಬಾರಿ ಬೆಲೆಯ ಶಕ್ತಿಶಾಲಿ ಸ್ಪೋರ್ಟ್ಸ್‌ ಬೈಕ್‌ ಎಂದರೆ ಕವಾಸಕಿ ನಿಂಜಾ H2 ಬೈಕ್‌. ಈ ಸ್ಪೋರ್ಟ್ಸ್‌ ಬೈಕ್‌ನ ಆರಂಭಿಕ ಬೆಲೆ 79.90 ಲಕ್ಷ ರೂ. ಗಳು (ಎಕ್ಸ್‌ ಶೋ ರೂಂ). ಈ ಬೈಕ್‌ನಲ್ಲಿ ಕಂಪನಿಯು 998 cc ಯ ಇಂಜಿನ್‌ ಅಳವಡಿಸಿದೆ. ಈ ಬೈಕ್‌ ಪ್ರತಿ ಲೀಟರ್‌ಗೆ 18 ಕಿಮೀ ಮೈಲೇಜ್‌ ನೀಡಲಿದೆ.

ಆಧುನಿಕ ತಂತ್ರಜ್ಞಾನ ಹೊಂದಿರುವ ಡುಕಾಟಿ ಪಾನಿಗೇಲ್ ವಿ4 ಅನ್ನು ಸ್ಪೋರ್ಟ್ಸ್‌ ಬೈಕ್‌ಗಳ ಪಟ್ಟಿಯಲ್ಲಿ ನಾವು ಕೇಳುತ್ತಲೇ ಇರುತ್ತೇವೆ. ಇದರ ಬೆಲೆ 27.41 ಲಕ್ಷ ರೂ. (ಎಕ್ಸ್‌ ಶೋ ರೂಂ ಬೆಲೆ). ಈ ಬೈಕ್ 1103cc ಎಂಜಿನ್ ಹೊಂದಿದ್ದು, ಬೈಕ್ ಗೆ 212 ಬಿಎಚ್ ಪಿ ಪವರ್ ನೀಡುತ್ತದೆ. ಈ ಬೈಕ್‌ ಪ್ರತಿ ಲೀಟರ್‌ಗೆ 8 ರಿಂದ 15 ಕಿಮೀ ನೀಡಬಲ್ಲದು.

ಹೋಂಡಾ ಕಂಪನಿ ನೀಡಿರುವ CBR ಬೈಕ್, ಸ್ಪೋರ್ಟ್‌ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ಎರಡು ದಶಕಗಳಿಗೂ ಹೆಚ್ಚು ಕಾಲ ಜನರ ಅಚ್ಚುಮೆಚ್ಚಿನದಾಗಿದೆ ಎಂಬುದು ವಿಶೇಷವಾಗಿದೆ. ಇದರ ಪ್ರಸ್ತುತ ಮಾದರಿ CBR1000 RR-R ಆಗಿದೆ. ಈ ಬೈಕಿನ ಬೆಲೆ 23.74 ಲಕ್ಷ ರೂ. (ಎಕ್ಸ್‌ ಶೋ ರೂಂ) ಆಗಿದೆ. ಈ ಬೈಕ್ ನಲ್ಲಿ 1000 ಸಿಸಿ ಎಂಜಿನ್ ಲಭ್ಯವಿದ್ದು, 215 ಬಿಎಚ್ ಪಿ ಪವರ್ ನೀಡುತ್ತದೆ. CBR ಬೈಕ್ ಪ್ರತಿ ಲೀಟರ್‌ಗೆ 18 ಕಿಮೀ ಮೈಲೇಜ್‌ ನೀಡುತ್ತದೆ.

BMW S 1000RR ಬೈಕ್, ಇದು ಸ್ಪೋರ್ಟ್ಸ್‌ ಬೈಕ್‌ಗಳ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದೆ. ಇದರ ಆರಂಭಿಕ ಬೆಲೆ 20.25 ಲಕ್ಷ (ಎಕ್ಸ್ ಶೋರೂಂ) ಆಗಿದೆ. ಕಂಪನಿಯು ಈ ಸ್ಪೋರ್ಟ್ಸ್ ಬೈಕ್‌ನಲ್ಲಿ 999 ಸಿಸಿ ಎಂಜಿನ್ ಅನ್ನು ಅಳವಡಿಸಿದೆ. ಇದು ಈ ಬೈಕ್‌ಗೆ 162.26 ಬಿಹೆಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್‌ ಪ್ರತಿ ಲೀಟರ್‌ಗೆ 15.62 ಕಿಮೀ ಮೈಲೇಜ್‌ ನೀಡುತ್ತದೆ.

ದೇಶದ ಅತಿ ಹೆಚ್ಚು ಯುವ ಜನತೆ ಇಷ್ಟಪಡುವ ಸ್ಪೋರ್ಟ್ಸ್‌ ಬೈಕ್‌ ಸುಜುಕಿ ಹಯಾಬುಸಾ. ಈ ಬೈಕ್‌ನ ಆರಂಭಿಕ ಬೆಲೆ ರೂ.16.49 ಲಕ್ಷ ರೂ. (ಎಕ್ಸ್ ಶೋರೂಂ) ಆಗಿದೆ. ಈ ಬೈಕ್ 1340 ಸಿಸಿ ಎಂಜಿನ್ ಹೊಂದಿದ್ದು, 187.3 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್‌ ಪ್ರತಿ ಲೀಟರ್‌ಗೆ 18 ಕಿಮೀ ಮೈಲೇಜ್‌ ನೀಡುತ್ತದೆ.

(ಚಿತ್ರ ಕೃಪೆ : ಕವಾಸಕಿ, ಸುಜುಕಿ, ಹೊಂಡಾ, ಡುಕಾಟಿ, BMW)

ಇದನ್ನೂ ಓದಿ : Top 5 Bikes : ಭಾರತದ ಟಾಪ್‌ 5 ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳಿವು!

ಇದನ್ನೂ ಓದಿ : Best Ground Clearance Cars : ಈ ಬಜೆಟ್‌ ಕಾರುಗಳನ್ನೊಮ್ಮೆ ನೋಡಿ; ಇವು ಉತ್ತಮ ಗ್ರೌಂಡ್ ಕ್ಲಿಯರೆನ್ಸ್‌ ಕಾರುಗಳು

(Here is list of Best Sports Bikes in India. Know the price and other info)

Comments are closed.