ಬೆಳ್ತಂಗಡಿ : ಖ್ಯಾತ ತಮಿಳು ನಟ ವಿಶಾಲ್ (Tamil Actor Vishal ) ಪವಿತ್ರ ಪುಣ್ಯಕ್ಷೇತ್ರವೆನಿಸಿರುವ ಶ್ರೀ ಧರ್ಮಸ್ಥಳಕ್ಕೆ (Dharmasthala Manjunatha Temple) ಭೇಟಿ ನೀಡಿದ್ದಾರೆ. ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ. ಇದೀಗ ತಮಿಳು ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ವಿಶಾಲ್ ಜೊತೆಯಲ್ಲಿ ಸ್ನೇಹಿತರು ದೇವರ ದರ್ಶನ ಪಡೆದುಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನದ ಬೆನ್ನಲ್ಲೇ ಆಶ್ರಮವನ್ನು ಮುನ್ನೆಡೆಸುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ ಮೈಸೂರಿನ ಶಕ್ತಿಧಾಮ ಆಶ್ರಮಕ್ಕೆ ಭೇಟಿ ನೀಡುವ ಮೂಲಕ ಸುದ್ದಿಯಾಗಿದ್ದರು. ವಿಶಾಲ್ ನಟನೆಯ ತುಪ್ಪರಿವಾಲನ್ 2, ಮಾರ್ಕ್ ಆಂಟೋನಿ ಮತ್ತು ಪಾರಸಿಗ ರಾಜ ಸಿನಿಮಾಗಳು ಇನ್ನಷ್ಟೇ ತೆರೆ ಕಾಣಬೇಕಾಗಿದೆ.

ಇದನ್ನೂ ಓದಿ ; Siddhant Veer Suryavanshi : ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ಸಾವು
ಇದನ್ನೂ ಓದಿ : Vedha teaser: ಕೈಯಲ್ಲಿ ಮಚ್ಚು, ರಗಡ್ ಲುಕ್; ಹೀಗಿದೆ ನೋಡಿ ಶಿವಣ್ಣನ 125ನೇ ಸಿನಿಮಾ ‘ವೇದ’ ಟೀಸರ್
Tamil Actor Vishal visits Dharmasthala Manjunatha Temple