Vedha teaser: ಕೈಯಲ್ಲಿ ಮಚ್ಚು, ರಗಡ್ ಲುಕ್; ಹೀಗಿದೆ ನೋಡಿ ಶಿವಣ್ಣನ 125ನೇ ಸಿನಿಮಾ ‘ವೇದ’ ಟೀಸರ್

ಬೆಂಗಳೂರು: Vedha teaser: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಪೋಸ್ಟರ್ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದ್ದ ವೇದ ಚಿತ್ರತಂಡ ಟೀಸರ್ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ.

ಇದನ್ನೂ ಓದಿ: Siddhant Veer Suryavanshi : ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ಸಾವು

ಶಿವರಾಜ್ ಕುಮಾರ್ ಅವರ ಅಭಿನಯದ 125ನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳ ಪಾಲಿಗೆ ಈ ಚಿತ್ರ ಮತ್ತಷ್ಟು ವಿಶೇಷವಾದುದು. ಹೀಗಾಗಿ ಅವರನ್ನು ಬಿಗ್ ಸ್ಕ್ರೀನ್ ಮೇಲೆ ಕಾಣಲು ಅಭಿಮಾನಿಗಳು ಬಹಳ ಕಾತರರಾಗಿದ್ದಾರೆ. ಈ ಹಿಂದೆ ಅ.20ರಂದು ವೇದ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಕೂಡಾ ಅನೌನ್ಸ್ ಮಾಡಿತ್ತು. ಇಂದು ಬಿಡುಗಡೆಯಾದ ಟೀಸರ್ ನಲ್ಲಿ ಶಿವಣ್ಣ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಅವರ ಮಾಸ್ ಲುಕ್ ಪಕ್ಕಾ ಅವರ ಹಳೆ ಸಿನಿಮಾ ಓಂ ನೆನಪಿಸುವಂತಿದೆ.

ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸಿರುವ ಶಿವಣ್ಣನ ವೇದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವೆಪನ್ಸ್ ಆಫ್ ವೇದ ಹೆಸರಿನಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ, ಶೀರ್ಷಿಕೆಯೇ ಹೇಳುವಂತೆ ಕಲ್ಲು, ಮಚ್ಚು, ಲಾಂಗ್ ಗಳೇ ಟೀಸರ್ ನಲ್ಲಿ ಹೈಲೈಟ್ಸ್ ಆಗಿವೆ. ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಶಿವಣ್ಣ 1960ರಲ್ಲಿ ನಡೆದ ರಕ್ತ ಮತ್ತು ಕ್ರೂರತೆಯ ಕಥೆಯನ್ನು ಹೇಳಹೊರಟಿರುವುದು ಟೀಸರ್ ನಿಂದ ಸಾಬೀತಾಗಿದೆ.

ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಅವರಿಬ್ಬರದ್ದು ಅದ್ಭುತ ಕಾಂಬಿನೇಶನ್. 2013ರಲ್ಲಿ ಮೊದಲ ಬಾರಿಗೆ ಕೈಜೋಡಿಸಿದ್ದ ಇವರಿಬ್ಬರ ಭಜರಂಗಿ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಬಳಿಕ ವಜ್ರಕಾಯ, ಭಜರಂಗಿ- 2 ಸಿನಿಮಾಗಳಲ್ಲೂ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ವೇದ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: Fake pregnancy: ಪ್ರೆಗ್ನೆಂಟ್ ಆಗಿ ಆರೇ ತಿಂಗಳಿಗೆ ಹೆತ್ತ ಮಹಿಳೆ; ಆಸ್ಪತ್ರೆಯಲ್ಲಿ ಮನೆಮಂದಿ ಆಕೆ ಕೈಯಲ್ಲಿ ಕಂಡಿದ್ದೇನು ಗೊತ್ತಾ

ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಗಾಂಧಿನಗರದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ ಎದುರು ಎಲ್ ಇಡಿ ಸ್ಕ್ರೀನ್ ಮೂಲಕ ಟೀಸರ್ ರಿಲೀಸ್ ಮಾಡಿದ್ದು, ಕಟೌಟ್ ಕೂಡಾ ಅನಾವರಣಗೊಳಿಸಲಾಗಿದೆ. ಡಿ.23ರಂದು ತೆರೆ ಕಾಣಲಿರುವ ವೇದ ಸಿನಿಮಾ ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾಗೆ ಜೀ ಸ್ಟುಡಿಯೋಸ್ ಕೈ ಜೋಡಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಣ್ಣಗೆ ಗಾನವಿ ನಾಯಕಿಯಾಗಿ, ಮಗಳ ಪಾತ್ರದಲ್ಲಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

Vedha teaser: Look at Shivanna’s 125th movie ‘Veda’ teaser

Comments are closed.