ಮುಂಬೈ: ತಮ್ಮ ಕಂಪನಿಯ TDS ಪಾವತಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಸ್ಟ್ ಡೀಲ್ ಟಿವಿಪ್ರೈವೇಟ್ ಲಿಮಿಟೆಡ್ ಮಾಲೀಕರಾದ ಈ ದಂಪತಿ ಎರಡು ಪ್ರಕರಣಗಳಲ್ಲಿ ಟಿಡಿಎಸ್ ಪಾವತಿಸುವ ಲ್ಲಿ ವಿಳಂಬ ಮಾಡಿದ್ದು ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬಲ್ಲಾರ್ಡ್ ಪಿಯರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ದಂಪತಿಗೆ ಅಕ್ಟೋಬರ್ 20 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಆದೇಶದಿಂದ ಸ್ಟಾರ್ ದಂಪತಿ ಮುಜುಗರಕ್ಕಿಡಾಗಿದ್ದು ಬೇಲ್ ಪಡೆದುಕೊಳ್ಳಬೇಕು ಇಲ್ಲವೇ ನ್ಯಾಯಾಲಯದ ಮುಂದೇ ಹಾಜರಾಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೇ ವಾದ ಮಂಡಿಸಿದ್ದ ಸ್ಪೆಷಲ್ ಪ್ರಾಸಿಕ್ಯೂಟರ್ ಅಮಿತ್ ಮುಂಡೆ ಶಿಲ್ಪಾ ರಾಜ್ ಕುಂದ್ರಾ ದಂಪತಿ 2015-16 ಹಾಗೂ 2016-17 ನೇ ಸಾಲಿನ ಟಿಡಿಎಸ್ ಕಟ್ಟುವಲ್ಲಿ ವಿಳಂಬ ಮಾಡಿದ್ದರಿಂದ 1 ಕೋಟಿ 46 ಲಕ್ಷಕ್ಕೂ ಅಧಿಕ ಹಣ ಕಡಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.