ಸಿಲಿಕಾನ್ ಸಿಟಿ ಮಂದಿಗೆ ಕೊರೊನಾ ಶಾಕ್ : ನಮ್ಮ ಮೆಟ್ರೋದ 80 ಸಿಬ್ಬಂದಿಗಳಿಗೆ ಸೋಂಕು

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಅದ್ರಲ್ಲೂ ಬೆಂಗಳೂರಿಗರಿಗೆ ಕೊರೊನಾ ಮತ್ತೊಂದು ಶಾಕ್ ಕೊಟ್ಟಿದ್ದು, ನಮ್ಮ ಮೆಟ್ರೋದ 80 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಮಂದಿಗೆ ಜೀವನಾಡಿಯಂತಾಗಿತ್ತು. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ 5 ತಿಂಗಳ ನಂತರ ಮೆಟ್ರೋ ರೈಲುಗಳು ಓಡಾಡೋದಕ್ಕೆ ಶುರುಮಾಡಿವೆ. ಆದರೆ ಜನರು ಮಾತ್ರ ಮೆಟ್ರೋ ಸಂಚಾರ ಮಾಡೋದಕ್ಕೆ ಭಯ ಪಡುತ್ತಿದ್ದಾರೆ.

ಅದ್ರಲ್ಲೂ ಇದೀಗ ನಮ್ಮ ಮೆಟ್ರೋ ಆಪರೇಷನ್ ವಿಭಾಗದ 28 ಲೋಕೋ ಪೈಲಟ್‍ಗಳಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿತ ಸಿಬ್ಬಂದಿ ಪೈಕಿ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಹೋಂ ಐಸೋಲೇಷನ್‍ನಲ್ಲಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೊದಲು ನಿತ್ಯವೂ 5 ಲಕ್ಷ ಮಂದಿ ಮೆಟ್ರೋದಲ್ಲಿ ಸಂಚಾರ ಮಾಡುತ್ತಿದ್ದರು. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಮೆಟ್ರೋದಲ್ಲಿ ಸಂಚಾರ ಮಾಡುವವರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಅದ್ರಲ್ಲೂ ಜನರು ಮೆಟ್ರೋ ರೈಲು ಹತ್ತೋದಕ್ಕೂ ಭಯ ಪಡುತ್ತಿದ್ದಾರೆ.

ಹೀಗಾಗಿ ಕಳೆದೊಂದು ತಿಂಗಳ ಅವಧಿಯಲ್ಲಿ 10 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದೀಗ ನಮ್ಮ ಮೆಟ್ರೋ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದಾಗಿ ಸೋಂಕು ಇನ್ನಷ್ಟು ಮಂದಿಗೆ ಹರಡುವ ಭೀತಿ ಎದುರಾಗಿದೆ.

Leave A Reply

Your email address will not be published.