ಸೋಮವಾರ, ಏಪ್ರಿಲ್ 28, 2025
HomeCinemaDivya Suresh : ಬಿಗ್‌ಬಾಸ್‌ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ಅಪಘಾತ

Divya Suresh : ಬಿಗ್‌ಬಾಸ್‌ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ಅಪಘಾತ

- Advertisement -

ಬೆಂಗಳೂರು : ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಮೂಲಕ ಖ್ಯಾತಿ ಪಡೆದ ಸ್ಯಾಂಡಲ್‌ವುಡ್‌ ನಟಿ ದಿವ್ಯಾ ಸುರೇಶ್‌ (Divya Suresh) ಅಪಘಾತಕ್ಕೆ ಒಳಗಾಗಿದ್ದಾರೆ. ಕೊರೊನಾ ವ್ಯಾಕ್ಸಿನ್‌ ತೆಗೆದುಕೊಂಡು ಮನೆಗೆ ಮರಳುವ ವೇಳೆಲ್ಲಿ ಈ ಅವಘಡ ಸಂಭವಿಸಿದೆ. ಈ ಕುರಿತು ದಿವ್ಯಾ ಸುರೇಶ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಉತ್ತರ ಹಳ್ಳಿ ರಸ್ತೆಯಲ್ಲಿ ತನ್ನ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ದಿವ್ಯ ಸುರೇಶ್‌ ಅವರಿಗೆ ಅಪಘಾತವಾಗಿದೆ. ರಸ್ತೆಯಲ್ಲಿ ನಾಯಿಗಳು ಅಡ್ಡಬಂದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ನಟಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಿಗ್‌ಬಾಸ್‌ ಸ್ಪರ್ಧೆಯ ಮೂಲಕ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಜೊತೆಗೆ ಬಿಗ್‌ಬಾಸ್‌ ವಿನ್ನರ್‌ ಮಂಜು ಪಾವಗಡ ಜೊತೆಗಿನ ಫ್ರೆಂಡ್‌ ಶಿಪ್‌ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ದಿವ್ಯ ಕಿರಿಕ್‌ ಮಾಡಿಕೊಂಡಿದ್ದರು. ನಂತರದಲ್ಲಿ ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

ದಿವ್ಯಾ ಸುರೇಶ್‌ ನಟಿಯಾಗಿ ರೂಪದರ್ಶಿಯಾಗಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ದಿವ್ಯಾ ಮಾಜಿ ವೃತ್ತಿಪರ ಕಬಡ್ಡಿ ಆಟಗಾರ್ತಿಯಾಗಿದ್ದರು. ಕರ್ನಾಟಕ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ತೆಲುಗು ಅಡಲ್ಟ್ ಕಾಮಿಡಿ ಸಿನಿಮಾ ಟೆಂಪ್ಟ್ ರಾಜಾದಲ್ಲಿ ದಿವ್ಯಾ ಸುರೇಶ್ ನಟಿಸಿದ್ದಾರೆ.

ಲಿಪ್ ಲಾಕ್ ನಿಂದ ಸುದ್ದಿಯಾದ ದಿವ್ಯ ಸುರೇಶ್ (Divya Suresh)

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಎಷ್ಟು ಸುದ್ದಿ‌ ಮಾಡುತ್ತೋ ಅದಕ್ಕಿಂತ ಹೆಚ್ಚು ಸದ್ದು ಮಾಡೋದು ಅಭ್ಯರ್ಥಿ ಗಳು. ಇದೀಗ ಬಿಗ್ ಬಾಸ್ ಸ್ಪರ್ಧಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದದರು. ಸ್ಪರ್ಧಿಗಳ ಪೈಕಿ ಮನೆಯೊಳಗೆ ಸಖತ್ ಹವಾ ಸೃಷ್ಟಿಸಿದ್ದ ನಟಿ ದಿವ್ಯಾ ಸುರೇಶ್ ಬಿಗ್ ಬಾಸ್ ಅಂಗಳದಿಂದ ಹೊರ ಬರುತ್ತಿದ್ದಂತೆ ತುಟಿಗೆ ತುಟಿ ಬೆಸೆದು ಸದ್ದು ಮಾಡಿದ್ದಾರೆ. ಇಷ್ಟಕ್ಕೂ ದಿವ್ಯ ಸುರೇಶ್ ಲಿಪ್ ಲಾಕ್ ಮಾಡಿರೋದು ಯಾರ ಜೊತೆಗೆ ಅನ್ನೋ ಕುತೂಹಲನಾ ? ದಿವ್ಯ ಸುರೇಶ್ (Divya Suresh) ತುಟಿಗೆ ತುಟಿ ಬೆಸೆದಿರೋದು ರಿಯಲ್ ಲೈಫ್ ಅಲ್ಲ. ಬದಲಾಗಿ ರೀಲ್ ನಲ್ಲಿ. ಹೌದು ಬಿಗ್ ಬಾಸ್ ಗೆ ಹೋಗೋ ಮುನ್ನವೇ ದಿವ್ಯಾ ಸುರೇಶ್ ರೌಡಿ ಬೇಬಿ ಅನ್ನೋ ಸಿನಿಮಾ ದಲ್ಲಿ‌ ನಟಿಸಿದ್ದರು. ಈ ಸಿನಿಮಾದ ಹಾಟ್ ದೃಶ್ಯ ಈಗ ಸಖತ್ ವೈರಲ್ ಆಗಿದೆ.

ರೌಡಿ ಬೇಬಿ ಸಿನಿಮಾದ ಹಾಡೊಂದ ರಲ್ಲಿ ದಿವ್ಯ ಸುರೇಶ್ ಹಾಟ್ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿ ದ್ದಾರೆ. ಅದೇ ಪೋಟೋ ಗಳು ಇದೀಗ ಸಖತ್ ವೈರಲ್ ಆಗಿದೆ. ಇನ್ನೂ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಾಗ ವೇದಿಕೆ ಮೇಲೆ ತಮ್ಮ ನೋವು ತೋಡಿಕೊಂಡಿದ್ದ ದಿವ್ಯ ಸುರೇಶ್ ನಾನು ಏನೇ ಮಾಡಲು ಹೋದರೂ ಅದು ಅರ್ಧದಲ್ಲೇ ನಿಂತು ಹೋಗುತ್ತದೆ. ಸಿನಿಮಾ, ಸೀರಿಯಲ್ ಏನಾದ್ರು ಅಷ್ಟೇ ಎಂದಿದ್ದರು. ಅವರ ಮಾತಿನಂತೆ ಅವರು ಸ್ಪರ್ಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಕರೋನಾ ಕಾರಣ ದಿಂದ ಅರ್ಧದಲ್ಲೇ ನಿಂತು ಹೋಗಿದ್ದು ಮಾತ್ರ ದುರದೃಷ್ಟವೇ ಸರಿ.

ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಬಾಳಲ್ಲಿ ಬಿರುಗಾಳಿ: ಎರಡನೇ ಮದುವೆ ಮುರಿದುಕೊಂಡ ಶ್ರೀಜಾ

ಇದನ್ನೂ ಓದಿ : ನಾಪತ್ತೆಯಾಗಿದ್ದ ನಟಿ ಗೋಣಿಚೀಲದಲ್ಲಿ ಶವವಾಗಿ ಪತ್ತೆ :ಪತಿ ಪೊಲೀಸರ ವಶಕ್ಕೆ

(Bigg Boss Actress fame Actress Divya Suresh Bike accident)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular