ಒಂದೆಡೆ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಅದ್ದೂರಿಯಾಗಿ ತೆರೆ ಕಂಡು 100 ಕೋಟಿ ಕ್ಲಬ್ ನತ್ತ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಈ ಹೊತ್ತಿನಲ್ಲೇ ಅಪ್ಪು ಫ್ಯಾನ್ಸ್ ಗೆ ಹಾಗೂ ಜೇಮ್ಸ್ ನಿರ್ಮಾಪಕರಿಗೆ ಶಾಕ್ ಎದುರಾಗಿದೆ. ಹೌದು ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಕೊನೆ ಸಿನಿಮಾ ಎಂಬ ಎಮೋಶನ್ ಜೊತೆ ತೆರೆಗೆ ಬಂದ ಸಿನಿಮಾ ಜೇಮ್ಸ್. ದೊಡ್ಮನೆ ಮೂರು ಕುಡಿಗಳು ಒಂದೇ ಸಿನಿಮಾದಲ್ಲಿ ಕಾಣಿಸಿದ್ದಾರೆ ಎಂಬುದು ಸೇರಿದಂತೆ ನಾನಾ ಕಾರಣಕ್ಕೆ ಸ್ಪೆಶಲ್ ಎನ್ನಿಸಿದ ಈ ಸಿನಿಮಾ ಬಾಕ್ಸಾಫೀಸ್ ನಲ್ಲೂ ಮೂಡಿ ಮಾಡುತ್ತಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲೆಡೆ ಒಟ್ಟು 4 ಸಾವಿರ ಶೋ ಪ್ರದರ್ಶಿಸುತ್ತಿದೆ. ಆದರೆ ಈಗ ಮಲ್ಟಿಪ್ಲೆಕ್ಸ್‌ನಲ್ಲಿ ತೆರೆ ಕಾಣ್ತಿರೋ ಜೇಮ್ಸ್ ಗೆ ದಿ ಕಾಶ್ಮೀರಿ ಫೈಲ್ಸ್ (The Kashmiri Files vs James ) ಕಂಟಕವಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯೊಂದು ಬಹಿರಂಗವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಿಂದ ಜೇಮ್ಸ್ ಸಿನಿಮಾ ತೆಗೆಯುವಂತೆ ಒತ್ತಾಯ ಬರುತ್ತಿದೆ ಎಂದು ಜೇಮ್ಸ್ ನಿರ್ಮಾಪಕರು ಆರೋಪಿಸಿದ್ದಾರೆ.ಹಲವೆಡೆ ಬಿಜೆಪಿ ಶಾಸಕರು ಜೇಮ್ಸ್ ಸಿನಿಮಾ ತೆಗೆದು ಆ ವೇಳೆ ದಿ ಕಾಶ್ಮೀರಿ ಫೈಲ್ಸ್ ಶೋ ತೋರಿಸುವಂತೆ ಒತ್ತಡ ಹೇರುತ್ತಿದ್ದು, ಇದರಿಂದ ನಾವು ನಷ್ಟಕ್ಕೊಳಗಾಗುತ್ತೇವೆ ಎಂದು ಜೇಮ್ಸ್ ನಿರ್ಮಾಪಕರು ನೊಂದು ಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜೇಮ್ಸ್ ನಿರ್ಮಾಪಕರು ಮಾಜಿಸಿಎಂ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿದ್ದು, ಈ ಬಗ್ಗೆ ಸಂಬಂಧಿಸಿದವರ ಜೊತೆ ಮಾತನಾಡಿ ಸಹಾಯಮಾಡುವಂತೆ ಸಿದ್ಧರಾಮಯ್ಯನವರಿಗೆ ಮನವಿಮಾಡಿದ್ದಾರೆ. ಮಾರ್ಚ್ 17 ರಂದು ಅಪ್ಪು ಹುಟ್ಟಿದ ಹಬ್ಬದ ದಿನವೇ ರಾಜ್ಯದಾದ್ಯಂತ ಹಾಗೂ ವಿದೇಶದಲ್ಲೂ ಜೇಮ್ಸ್ ರಿಲೀಸ್ ಆಗಿತ್ತು.

ಪುನೀತ್ ನಿಧನದ ವೇಳೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದ ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದರು. ಸಿನಿಮಾಕ್ಕೆ ಪುನೀತ್ ಧ್ವನಿಯನ್ನೇ ತಂತ್ರಜ್ಞಾನ ಬಳಸಿ ಅಳವಡಿಸುವ ಪ್ಲ್ಯಾನ್ ನಲ್ಲಿದ್ದ ನಿರ್ದೇಶಕ ಚೇತನ್ ಗೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಪುನೀತ್ ಈ ಪಾತ್ರಕ್ಕೆ ಶಿವಣ್ಣ ಜೀವ ತುಂಬಿದ್ದರು.

ಇನ್ನು ಕಾಶ್ಮೀರಿ ಫೈಲ್ಸ್ ಸಿನಿಮಾ ರಾಜಕೀಯ ವಿಚಾರಕ್ಕೆ ಹೆಚ್ಚಿನ ಹೈಫ್ ಪಡೆದುಕೊಂಡಿದ್ದು ಬಿಜೆಪಿ ನಾಯಕರು ಈ ಸಿನಿಮಾವನ್ನು ಎಲ್ಲ ಹಿಂದೂಗಳು ನೋಡಲೇಬೇಕೆಂದು ಕರೆ ನೀಡಿದ್ದಾರೆ. ಮಾತ್ರವಲ್ಲ ಅದಕ್ಕಾಗಿ ಅಲ್ಲಲ್ಲಿ ಫ್ರೀ ಶೋ ಕೂಡ ಏರ್ಪಡಿಸಿದ್ದಾರೆ. ಈಗ ಇದೇ ಶೋ ವಿಚಾರ ಜೇಮ್ಸ್ ಮತ್ತು ದಿ ಕಾಶ್ಮೀರಿ ಫೈಲ್ಸ್ ನಡುವೆ ಫೈಟ್ ತಂದಿಟ್ಟಿದೆ.
ಇದನ್ನೂ ಓದಿ : Actress Tamanna : ಐಸ್ ಕ್ರೀಂ ಸೈಕಲ್ ಏರಿದ ಮಿಲ್ಕಿ ಬ್ಯೂಟಿ : ತಮನ್ನಾ ಏನಿದು ಅವತಾರ ಎಂದ ಫ್ಯಾನ್ಸ್
ಇದನ್ನೂ ಓದಿ : KGF Chapter 2 : 10 ಗಂಟೆಯಲ್ಲಿ ಕೋಟಿ ವೀಕ್ಷಣೆ : ಕೆಜಿಎಫ್-2 ಸಾಂಗ್ ಹೊಸ ದಾಖಲೆ
The Kashmiri Files vs James , producer’s displeasure against BJP MLAs