Amit Shah : ಮತ್ತೆ ಜೀವ ಪಡೆದುಕೊಂಡ ಸಂಪುಟ ಸರ್ಕಸ್ : ಎಪ್ರಿಲ್‌ 1ರಂದು ಕರ್ನಾಟಕಕ್ಕೆ ಅಮಿತ್ ಶಾ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಗಾಗಿ ಜಾತಕ ಪಕ್ಷಿಯಂತೆ ಕಾಯ್ತಿರೋ ರಾಜ್ಯ ಬಿಜೆಪಿ ಶಾಸಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಎಪ್ರಿಲ್‌ 1 ರಂದು ಬಿಜೆಪಿಯ ಅಘೋಷಿತ ಹೈಕಮಾಂಡ್ ಹಾಗೂ ಕೇಂದ್ರ ಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸಲಿದ್ದು, ಇದರಿಂದ ಸಂಪುಟ ಪುನಾರಚನೆ (Cabinet Expansion) ಹಾಗೂ ವಿಸ್ತರಣೆಯ ಕಾಲ ಸನ್ನಿಹಿತವಾಗಬಹುದೆಂಬ ಭರವಸೆ ಮೂಡಿದೆ. ತುಮಕೂರಿನ ಸಿದ್ಧ ಗಂಗಾ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ 115 ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮ ಎಪ್ರಿಲ್‌ 1 ಕ್ಕೆ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ‌

ಅಮಿತ್ ಶಾ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಚಟುವಟಿಕೆ ಚುರುಕುಗೊಂಡಿದೆ. ರಾಜ್ಯ ಬಿಜೆಪಿ ಅಮಿತ್ ಶಾ ರಿಂದ ಶ್ಲಾಘನೆ ಪಡೆಯಲು ಫುಲ್ ವರ್ಕೌಟ್ ಆರಂಭಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಾಸಕರು ಹಾಗೂ ಸಚಿವರ ಅಂಕಪಟ್ಟಿಯೊಂದಿಗೆ ಸಿದ್ಧವಾಗಿದ್ದಾರಂತೆ. ಇದಲ್ಲದೇ ಸಚಿವ ಸಂಪುಟ ವಿಸ್ತರಣೆ , ನಿಗಮ‌ಮಂಡಳಿ ನೇಮಕಾತಿ ಯೂ ಸೇರಿದಂತೆ ಹಲವು ವಿಚಾರಕ್ಕೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿಎಂ ಬೊಮ್ಮಾಯಿ ಜೊತೆ ಸಭೆ ನಡೆಸಲಿದ್ದು ಅಮಿತಾ ಶಾ ಗೆ ಯಾವೆಲ್ಲ ವಿಚಾರಗಳನ್ನು ತಿಳಿಸಬೇಕು. ಯಾವ ಸಂಗತಿಗಳ ಬಗ್ಗೆ ಗಮನ ಸೆಳೆಯಬೇಕು ಎಂಬೆಂಲ್ಲ ಸಂಗತಿಗಳನ್ನು ಚರ್ಚಿಸಲಿದ್ದಾರಂತೆ.

ನಿನ್ನೆ‌ ಸಂಜೆಯೂ ಪಕ್ಷದ ಪದಾಧಿಕಾರಿಗಳ ಜೊತೆ ಸಿಎಂ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಈ ವೇಳೆ ನಿಗಮ‌ಮಂಡಳಿ ನೇಮಕ‌ಸೇರಿದಂತೆ ಹಲವು ಸಂಗತಿಗಳು ಚರ್ಚೆಗ ಬಂದಿತ್ತು. ಮೂಲಗಳ ಮಾಹಿತಿ ಪ್ರಕಾರ ಬಿಜೆಪಿ ಈಗಾಗಲೇ ಸಚಿವ ಸಂಪುಟದಿಂದ ಕೈಬಿಡುವ ಸಚಿವರ ಸಂಖ್ಯೆಯನ್ನು ಅಂತಿಮಗೊಳಿಸಿದೆ. ಮಾತ್ರವಲ್ಲದೇ ಹೊಸದಾಗಿ ಸಂಪುಟ ಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬೇಕು ಎಂಬುದನ್ನು ಫೈನಲ್ ಮಾಡಿದ ಯಂತೆ.

ಈ ವರದಿಯನ್ನು ಅಮಿತ್ ಶಾ ಕೈಗೆ ನೀಡಿ ಚುನಾವಣೆ ಪ್ಲ್ಯಾನ್ , ಸ್ಟ್ಯಾಟಜಿ ಬಗ್ಗೆ ಅಮಿತ್ ಶಾ ಜೊತೆ ಚರ್ಚೆ ನಡೆಸೋ ಪ್ಲ್ಯಾನ್‌‌ನಲ್ಲಿದೆ ಬಿಜೆಪಿ. ಹೀಗಾಗಿ ಶಾ ಆಗಮನದ ಪೂರ್ವಭಾವಿ ಸಿದ್ಧತೆಗಳು ವೇಗ ಪಡೆದುಕೊಂಡಿದೆ. ಶಾ ರಾಜ್ಯ ಬಿಜೆಪಿ ವರದಿಯೊಂದಿಗೆ ಇನ್ನಿತರ ಹೈಕಮಾಂಡ್ ನಾಯಕರ ಅನುಮತಿ ಪಡೆದು ವಿಸ್ತರಣೆಗೆ ಅಂತಿಮ‌ ಮುದ್ರೆ ಹಾಕಿಸಲಿದ್ದಾರಂತೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಕರ್ಚಿಪ್ ಹಾಕಿ ಕಾಯುತ್ತ ಕೂತಿದ್ದ ಆಕಾಂಕ್ಷಿಗಳಿಗೆ ಯುಗಾದಿ ಬೆಲ್ಲ ಕೊಡೋ ಸಾಧ್ಯತೆ ಇದೆ.

ಇದನ್ನೂ ಓದಿ : ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

ಇದನ್ನೂ ಓದಿ : ಬಿಜೆಪಿ ನಾಯಕರ ಮಕ್ಕಳಿಗೆ, ಸಂಬಂಧಿಗಳಿಗೆ ನೋ ಟಿಕೇಟ್ : ಹೊರಬಿತ್ತು ಹೈಕಮಾಂಡ್ ಖಡಕ್ ಆದೇಶ

(Karnataka Amit Shah visit April 1st for Cabinet Expansion)

Comments are closed.