ದಿ ಕೇರಳ ಸ್ಟೋರಿ ಬಿಡುಗಡೆಯಾದ ಒಂದು ವಾರ ಕಳೆಯುತ್ತಿದ್ದಂತೆ ಅದ್ಭುತ ಬಾಕ್ಸ್ ಆಫೀಸ್ ಕಲೆಕ್ಷನ್ (The Kerala Story Box Collection) ಕಂಡಿದೆ. ನಿರ್ದೇಶಕ ಸುದೀಪ್ತೋ ಸೇನ್ ಅವರ ಆಕ್ಷನ್ ಕಟ್‌ನಲ್ಲಿ ಮೂಡಿ ಬಂದಿರುವ ದಿ ಕೇರಳ ಸ್ಟೋರಿ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಾಲ್ಲೊಂದು ವಿಷಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಇಂದಿನವರೆಗೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಕಾಣುತ್ತಿದೆ. ಒಂದು ವಾರಕ್ಕೆ ಒಟ್ಟು 100 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ.
ಈ ಸಿನಿಮಾ ಗೆಲುವಿನಿಮದ ನಟಿ ಅದಾ ಶರ್ಮಾ ಸಖತ್ ಖುಷಿಯಲ್ಲಿ ಇದ್ದಾರೆ. ಇನ್ನು ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ದೊರಕಿದೆ. ಹೀಗಾಗಿ ದಿ ಕೇರಳ ಸ್ಟೋರಿ ಸಿನಿಮಾದ ಅಬ್ಬರ ಮತ್ತಷ್ಟು ದಿನ ಮುಂದುವರೆಯುವಂತೆ ಕಾಣುತ್ತಿದೆ. ವಿಮರ್ಶಕರ ಪ್ರಕಾರ ಎರಡನೇ ವಾರಾಂತ್ಯದಲ್ಲಿ ಕೂಡ ಭರ್ಜರಿ ಕಲೆಕ್ಷನ್ ಕಾಣುವ ಸಾಧ್ಯತೆ ಇದೆ. ಶೀಘ್ರದಲ್ಲೇ ಈ ಸಿನಿಮಾ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ಅದಾ ಶರ್ಮಾ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಸಖತ್ ಮೈಲೇಜ್ ಸಿಕ್ಕಿದೆ. ಹೀಗಾಗಿ ಅವರಿಗೆ ಹೊಸ ಹೊಸ ಅವಕಾಶಗಳು ಅರಸಿ ಬರಲಿದೆ.
ಇದನ್ನೂ ಓದಿ : ಸ್ಯಾಂಡಲ್‌ವುಡ್ ಸ್ವರ ಮಾಂತ್ರಿಕ ಅರ್ಜುನ್ ಜನ್ಯಗೆ ಹುಟ್ಟುಹಬ್ಬದ ಸಂಭ್ರಮ
ಇದನ್ನೂ ಓದಿ : ಮತ್ತೋರ್ವ ಬಾಲಿವುಡ್ ಸ್ಟಾರ್‌ಗೆ ನಾಯಕಿಯಾದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : ಆದಿಪುರುಷ ಸಿನಿಮಾಕ್ಕೆ ನಟ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಪಡೆದ ಸಂಭಾವನೆ ಎಷ್ಟು ?
ದಿ ಕೇರಳ ಸ್ಟೋರಿ ಸಿನಿಮಾವು ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳನ್ನು ಒಳಗೊಂಡಿದೆ. ವಿವಾದತ್ಮಕ ಕಥಾಹಂದರ ಇರುವುದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ. ಇನ್ನುಳಿದಂತೆ ಕೆಲವು ಕಡೆಗಳಲ್ಲಿ ಪ್ರದರ್ಶನಕ್ಕೆ ಅಡ್ಡಿ ಆಗಿದ್ದರೂ ಕೂಡ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿಲ್ಲ.
The Kerala Story Box Collection: Despite the ban, The Kerala Story recorded a huge collection of Rs 100 crores.