Pineapple Recipe : ಹುಳಿ ಸಿಹಿ ಮಿಶ್ರಣದ ಅನಾನಸ್‌ ಫಿರ್ನಿ; ಮಹಿಳಾ ದಿನಾಚರಣೆಗೊಂದು ವಿಶೇಷ ಪಾಕವಿಧಾನ

ವಿಶಿಷ್ಟ ಪರಿಮಳ, ಸಿಹಿ–ಹುಳಿ ರುಚಿಯ ಹಣ್ಣು ಅನಾನಸ್‌ ಹಳದಿ ಬಣ್ಣದ ಜ್ಯೂಸಿ ಪ್ರುಟ್‌ ಆದ ಅನಾನಸ್‌ ಮೂಲತಃ ಸೌತ್‌ ಅಮೇರಿಕಾದ ಹಣ್ಣು. ಅನೇಕ ಪೊಷಕಾಂಶಗಳನ್ನು ಹೊಂದಿರುವ ಇದು ಆಂಟಿ ಒಕ್ಸಿಡೆಂಟ್‌ ಮತ್ತು ಆಂಟಿ ಇನ್ಫ್ಲಮೇಟರಿ ಗುಣ ಹೊಂದಿದೆ. ಇದರಿಂದ ಅನೇಕ ಬಗೆಯ ಅಡುಗೆಗಳನ್ನು (Pineapple Recipe)ತಯಾರಿಸಲಾಗುತ್ತದೆ. ಸಿಹಿ ವ್ಯಂಜನಗಳ ಜೊತೆಗೆ ಅಡುಗೆಗಳಲ್ಲೂ ಇದನ್ನು ಬಳಸಲಾಗುತ್ತದೆ. ಹಲ್ವ, ಜಾಮ್‌, ಗೊಜ್ಜು ಮುಂತಾದವುಗಳನ್ನು ಇದರಿಂದ ತಯಾರಿಸಲಾಗುತ್ತದೆ. ಈ ಮಹಿಳಾ ದಿನಾಚರಣೆಗೆ (Women’s Day 2023) ವಿಶೇಷ ಪಾಕ ವಿಧಾನ ತಯಾರಿಸಬೇಕೆಂದಿದ್ದರೆ ಅನಾನಸ್‌ನ ಫಿರ್ನಿ ಉತ್ತಮ ಆಯ್ಕೆಯಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟ ಪಡುವ ತಿಂಡಿಯಾಗಿದೆ. ಸುಲಭವಾಗಿ ಮತ್ತು ರುಚಿಯಾಗಿ ಮನೆಯಲ್ಲಿಯೇ ತಯಾರಿಸುವ ವ್ಯಂಜನ ಇದಾಗಿದೆ.

ಅನಾನಸ್‌ ಫಿರ್ನಿ ತಯಾರಿಸಲು ಬೇಕಾದ ಪದಾರ್ಥಗಳು :
ಅನಾನಸ್‌ ಪೀಸ್‌ಗಳು (ದುಂಡಾಗಿ ಕತ್ತರಿಸಿದ) 6
ಮುಕ್ಕಾಲು ಕಪ್‌ ಮೈದಾ
ಅರ್ಧ ಚಮಚ ಬೇಕಿಂಗ್‌ ಸೋಡಾ
ಅರ್ಧ ಚಮಚ ಏಲಕ್ಕಿ ಪುಡಿ
ಎರಡು ಚಮಚ ಸಕ್ಕರೆ
ಒಂದು ಚಮಚ ಚಕ್ಕೆ ಪುಡಿ
ಅರ್ಧ ಕಪ್‌ ಹಾಲು
ಎರಡು ಚಮಚ ಸಕ್ಕರೆ ಪುಡಿ
ಅರ್ಧ ಕಪ್‌ ಅಡುಗೆ ಎಣ್ಣೆ

ಇದನ್ನೂ ಓದಿ : Protein Vegetables : ಬರೀ ಮೊಟ್ಟೆ ಅಷ್ಟೇ ಅಲ್ಲ, ಈ ಮೂರು ತರಕಾರಿಗಳೂ ಪ್ರೋಟೀನ್‌ ಕೊರತೆ ನೀಗಿಸಬಲ್ಲದು

ಅನಾನಸ್‌ ಫಿರ್ನಿ ತಯಾರಿಸುವ ವಿಧಾನ :

  • ಒಂದು ಪಾತ್ರೆಗೆ ಮೈದಾ, ಬೇಕಿಂಗ್‌ ಸೋಡಾ, ಏಲಕ್ಕಿ ಪುಡಿ, ಸಕ್ಕರೆ, ಹಾಲು ಸೇರಿಸಿ ಗಂಟುಗಳಿಲ್ಲದ ಪೇಸ್ಟ್‌ ತಯಾರಿಸಿ.
  • ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ. ತಯಾರಿಸಿಟ್ಟುಕೊಂಡ ಪೇಸ್ಟ್‌ನಲ್ಲಿ ಅನಾನಸ್‌ ಪೀಸ್‌ಗಳನ್ನು ಡಿಪ್‌ ಮಾಡಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣ ಬರುವವರೆಗೂ ಎರಡೂ ಕಡೆ ಬೇಯಿಸಿ.
  • ಕರಿದ ನಂತರ ಅದಕ್ಕೆ ಮೇಲಿನಿಂದ ಸಕ್ಕರೆ ಪುಡಿ ಮತ್ತು ಚಕ್ಕೆಯ ಪುಡಿ ಉದುರಿಸಿ.
  • ಅನಾನಸ್‌ ಫಿರ್ನಿ ಸವಿಯಿರಿ.

ಇದನ್ನೂ ಓದಿ : Cucumber Face Mask : ಬೇಸಿಗೆಯ ಸ್ಕಿನ್‌ ಪ್ರಾಬ್ಲಮ್‌ಗಳಿಗೆ ಬಳಸಿ ಸವತೆಕಾಯಿ ಫೇಸ್‌ ಮಾಸ್ಕ್‌

ಇದನ್ನೂ ಓದಿ : Jackfruit Flour : ಹಲಸಿನಕಾಯಿ ಹಿಟ್ಟು ಮಧುಮೇಹಿಗಳಿಗೂ ಬೆಸ್ಟ್‌; ಅಧ್ಯಯನ ಹೇಳಿದ್ದೇನು…

(Pineapple Recipe, Try this mouth-watering fritter this Women’s Day 2023)

Comments are closed.