ಆಕೆ ಕೆರಿಯರ್ ಆರಂಭಿಸಿದ್ದು ದೆವ್ವದ ಪಾತ್ರದಲ್ಲಿ. ಅಷ್ಟೇ ಅಲ್ಲ ದೆವ್ವವಾಗಿ ಆಕೆಯ ಅಭಿನಯ ಎಂಥವರನ್ನು ನಡುಗಿಸುವಂತಿತ್ತು. ಈಗ ಅದೇ ದೆವ್ವದ ಹುಡುಗಿ ದೇವತೆಯಂತೆ ಬದಲಾಗಿದ್ದಾಳೆ, ಮಾತ್ರವಲ್ಲ ಅಕ್ಷರಷಃ ಮೋಡಿ ಮಾಡುವಂತೆ ಸಿನಿಪ್ರಿಯರನ್ನು ಕಾಡುತ್ತಿದ್ದಾಳೆ. ಇಷ್ಟಕ್ಕೂ ನಾವು ಯಾರ ಬಗ್ಗೆ ಹೇಳ್ತಿದ್ದಿವಿ ಅಂತ ಗೊತ್ತಾಯ್ತಾ? ಅದು ಮತ್ಯಾರೂ ಅಲ್ಲ ದಿ ಕೇರಳ ಸ್ಟೋರಿ (The Kerala story) ಬೆಡಗಿ ಅದಾ ಶರ್ಮಾ (Adah Sharma).

ಸಿನಿಮಾ ಗೆಲುವಿನ ಬೆನ್ನಲ್ಲೇ ಅದಾ ಶರ್ಮಾ ಸದ್ಯ ಅಭಿಮಾನಿಗಳ ಹಾಗೂ ನಿರ್ದೇಶಕರು, ನಿರ್ಮಾಪಕರ ಫೆವರಿಟ್ ನಟಿ ಎನ್ನಿಸಿದ್ದಾರೆ. ಕೇರಳ ಸ್ಟೋರಿಯ ಮನೋಜ್ಞ ಅಭಿನಯದ ಬಳಿಕ ಅದಾ ಶರ್ಮಾ ಪ್ರಸಿದ್ಧಿ ದುಪ್ಪಟ್ಟಾಗಿದೆ. ಹಲವು ಅವಕಾಶಗಳು ಅವರನ್ನು ಹುಡುಕಿ ಬರ್ತಿದೆ. ಈ ಮಧ್ಯೆ ಅದಾ ಶರ್ಮಾ ಕೇವಲ ಸಿನಿಮಾ ಮಾತ್ರವಲ್ಲ ಇವೆಂಟ್, ಪೋಟೋಶೂಟ್ ಹಾಗೂ ಮ್ಯಾಗಜಿನ್ ಗಳ ಕವರ್ ಪೇಜ್ ಮೂಲಕವೂ ಸದ್ದು ಮಾಡ್ತಿದ್ದಾರೆ.
ಇದನ್ನೂ ಓದಿ : ಸ್ವಿಮ್ಮಿಂಗ್ ಪೂಲ್‌ನಲ್ಲಿ ರಾಗಿಣಿ ದ್ವಿವೇದಿ : ತುಪ್ಪದ ಬೆಡಗಿಯ ಅವತಾರಕ್ಕೆ ಫ್ಯಾನ್ಸ್ ಫಿದಾ

ಸದ್ಯ ಸಿನಿಬಿಟ್ಸ್ ಮ್ಯಾಗ್ ಜಿನ್ ಕವರ್ ಪೇಜ್ ಗಾಗಿ ಅದಾ ಶರ್ಮಾ ಡೀಪ್ ನೆಕ್ ಗೌನ್ ಅತ್ಯಂತ ಬೋಲ್ಡಾಗಿ ಪೋಸ್ ನೀಡಿದ್ದು, ಪೋಟೋ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲ ಸಿನಿಬಿಟ್ಸ್ ನ ಮುಖಪುಟದಲ್ಲಿ ಈ ಪೋಟೋ ನೋಡಿ ಅದಾ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿರೋ ಅದಾ ಶರ್ಮಾ, ಸಾಕಷ್ಟು ಪೋಟೋಸ್ , ವರ್ಕೌಟ್, ಇವನಿಂಗ್ ಟೈಂಸ್ಪೆಂಟ್ಸ್ ಹೀಗೆ ತಮ್ಮ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.

ಸುದೀಪ್ತೋ ಸೇನ್ ರ ದಿಕೇರಳ ಸ್ಟೋರಿ ಸ್ಮಾಲ್ ಬಜೆಟ್ ಸಿನಿಮಾವಾಗಿದ್ದರೂ ರಿಲೀಸ್ ನ ಬಳಿಕ ಸಖತ್ ಟೀಕೆ ಹಾಗೂ ವಿಮರ್ಶೆಯೊಂದಿಗೆ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಈ ಸಿನಿಮಾ ಸದ್ಯದಲ್ಲೇ ಒಟಿಟಿ ಫ್ಲ್ಯಾಟ್ ಫಾರಂನಲ್ಲೂ ತೆರೆ ಕಾಣಲಿದೆ. ಈ ಸಿನಿಮಾದ ಬಳಿಕ ಅದಾ ಜನಪ್ರಿಯತೆಯ ಉತ್ತುಂಗ ತಲುಪಿದ್ದಾರೆ. ಕೇರಳ ಸ್ಟೋರಿ ಸಿನಿಮಾದಲ್ಲಿನ ನಟನೆಗಾಗಿ ಅದಾ ಶರ್ಮಾ ಕೇವಲ ಹೊಗಳಿಕೆ ಮಾತ್ರವಲ್ಲ ಟೀಕೆ ಹಾಗೂ ವಿರೋಧಗಳನ್ನು ಎದುರಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅದಾ ಸೋಷಿಯಲ್ ಮೀಡಿಯಾದಲ್ಲೂ ಹಾಗೂ ಸಿನಿಮಾ ಕೆರಿಯರ್ ನಲ್ಲೂ ತಮ್ಮ ಜರ್ನಿ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಕೊನೆಗೂ ಒಂದಾಗಲಿಲ್ಲ ಸುದೀಪ್-ದರ್ಶನ್ ! ಕಾರಣ ಏನು ಗೊತ್ತಾ?!

ಕೇವಲ ಹಿಂದಿ ಮಾತ್ರವಲ್ಲದೇ ತಮಿಳು,ತೆಲುಗು ಸಿನಿಮಾದಲ್ಲೂ ಅದಾ ನಟಿಸಿದ್ದು, ಬೋಲ್ಡ್ ಪೋಟೋಶೂಟ್ ಗಳ ಮೂಲಕವೇ ಅದಾ ಪಡ್ಡೆಹೈಕಳ ಹೃದಯ ಗೆದ್ದಿದ್ದಾರೆ. ಇತ್ತೀಚಿಗೆ ಅದಾ ಶರ್ಮಾ ಬೀಚವೊಂದರಲ್ಲಿ ಲಾಠಿ ಹಿಡಿದು ಸರ್ಕಸ್ ಮಾಡುತ್ತಾ ಇಂಟ್ರಸ್ಟಿಂಗ್ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದರು. ಅದಾ ಸಾಲ್ಸಾ ವಿಡಿಯೋ ಮೈಜುಮ್ಮೆನಿಸುವಂತಿದ್ದು, ಅಭಿಮಾನಿಗಳು ಸಂಭ್ರಮದಿಂದ ಶೇರ್ ಮಾಡಿದ್ದಾರೆ.

ಮೂಲತಃ ಕೇರಳದವರೇ ಆಗಿರೋ ಅದಾ, ದಿ ಕೇರಳ ಸ್ಟೋರಿ ಬಳಿಕ ಹಿಂದೆಂದಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ. 2008 ರಲ್ಲಿ ಅದಾ 1920 ಎಂಬ ಹಾರರ್ ಥ್ರಿಲ್ಲರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆ ಸಿನಿಮಾದಲ್ಲಿ ಅದಾ ನಟನೆ ಸಿನಿ ಪ್ರಿಯರನ್ನು ಸೆಳೆದಿತ್ತು. ಸದ್ಯ ಅದಾ ಹೊಸ ಪೋಟೋ ಶೂಟ್ ಅಭಿಮಾನಿಗಳ ಮನಗೆದ್ದಿದೆ.
The Kerala Files Movie Actress Adah Sharma Cineblitz Magazie PhotoShoots goes Viral