ಮಂಗಳವಾರ, ಏಪ್ರಿಲ್ 29, 2025
HomeCinemaಕೇರಳ‌ ಸ್ಟೋರಿ ಸುಂದರಿಯ ಶಿವಭಕ್ತಿ : ಅದಾ ಶರ್ಮಾ ವಿಡಿಯೋ ವೈರಲ್

ಕೇರಳ‌ ಸ್ಟೋರಿ ಸುಂದರಿಯ ಶಿವಭಕ್ತಿ : ಅದಾ ಶರ್ಮಾ ವಿಡಿಯೋ ವೈರಲ್

- Advertisement -

ದಿ ಕೇರಳ ಸ್ಟೋರಿ (The Kerala Story Movie) ಮೂಲಕವೇ ಸದ್ದು ಮಾಡ್ತಿರೋ ಬ್ಯೂಟಿ ವಿತ್ ಬ್ರೇನ್ ಖ್ಯಾತಿಯ ನಟಿ ಅದಾ ಶರ್ಮಾ ಬಹುಭಾಷಾ ನಟಿಯಾಗಿ ಬೇಡಿಕೆ ಹೆಚ್ಚಿಸಿಕೊಳ್ತಿದ್ದಾರೆ. ಸದ್ಯ ಕೇರಳ ಸ್ಟೋರಿ ಯ ಮನೋಜ್ಞ ನಟನೆಗಾಗಿ ಮನೆ ಮಾತಾಗಿರೋ ಅದಾ ಹುಟ್ಟುಹಬ್ಬದ (Actress Adah Sharma’s birthday) ಹೊತ್ತಿನಲ್ಲಿ ತನ್ನ ಅರಾಧ್ಯದೈವದ ಎದುರು ಶಿವತಾಂಡವ ಸೋತ್ರ ಪಠಿಸುವ ಮೂಲಕ ಸುದ್ದಿಯಾಗಿದ್ದಾರೆ.

ಮೇ 11 ರಂದು ನಟಿ ಅದಾ ಶರ್ಮಾ ಹುಟ್ಟುಹಬ್ಬ (Actress Adah Sharma’s birthday) ಆಚರಿಸಿಕೊಳ್ತಿದ್ದಾರೆ.‌ ಸ್ಟಾರ್‌ ಬರ್ತಡೇ ಅಂದ್ರೇ ಅಲ್ಲಿ ಪಾರ್ಟಿ,ಕೇಕ್ ಕಟ್ಟಿಂಗ್ ಎಲ್ಲಾ ಕಾಮನ್. ಆದರೆ ಎಲ್ಲರಿಗಿಂತ ಭಿನ್ನವಾಗಿ ಅದಾ ಶರ್ಮಾ ತಮ್ಮ ಆರಾಧ್ಯದೈವ ಶಿವನ ಎದುರು ಪದ್ಮಾಸನದಲ್ಲಿ ಕೂತು ಸೋತ್ರ ಪಠಿಸುತ್ತ ಜನ್ಮದಿನ ಆಚರಿಸಿಕೊಳ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯೆಲ್ಲೋ ಕಲರ್ ಸಲ್ವಾರ್ ಹಾಗೂ ವೈಟ್ ವೇಲ್ ಕಾಮಿನೇಶನ್ ಡ್ರೆಸ್ ನಲ್ಲಿ ಅದಾ ಶರ್ಮಾ ಸೌಂದರ್ಯ ಅಭಿಮಾನಿಗಳನ್ನು ಸೆಳೆದಿದೆ.‌

ಬಾಲ್ಯದಿಂದಲೂ ದೈವಭಕ್ತೆಯಾಗಿರೋ ಅದಾ ಶರ್ಮಾ ತಮ್ಮ ಹುಟ್ಟುಹಬ್ಬದ ವೇಳೆ ವಿಶೇಷ ಪೂಜೆ ಮಾಡೋ ಪರಿಪಾಠ ಇಟ್ಟುಕೊಂಡಿದ್ದಾರಂತೆ. ಹೀಗಾಗಿ ರುದ್ರಾಭಿಷೇಕ ನೆರವೇರಿಸಿದ್ದು ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದೊಂದಿಗೆ ಅದಾ ಶರ್ಮಾ, ತಮ್ಮ ಶಕ್ತಿಯ ಮೂಲ ಶಿವ ಎಂಬುದನ್ನು ಹೇಳಿಕೊಂಡಿದ್ದಾರೆ. The secret of my energy. The energy that allows me to accept bouquets and face bans. Thank you all of you for making me yours ಎಂದು ಹೃದಯದ ಇಮೋಜಿಯೊಂದಿಗೆ ಶೇರ್ ಮಾಡಿದ್ದಾರೆ.

ಇದನ್ನೂ ಓದಿ : ಸದ್ದಿಲ್ಲದೇ ಓಟಿಟಿಗೆ ಲಗ್ಗೆ ಇಟ್ಟ ನಟಿ ಸಮಂತಾ ಅಭಿನಯದ ಶಾಕುಂತಲಂ

ಇದನ್ನೂ ಓದಿ : ನರೇಶ್‌ ಪವಿತ್ರಾ ಲೋಕೇಶ್‌ ಮತ್ತೆ ಮದುವೆ ಸಿನಿಮಾ ಟ್ರೈಲರ್‌ನಲ್ಲಿದೆ ಗೊತ್ತೆ ?

ಕಳೆದ ಹಲವು ವರ್ಷಗಳಿಂದ ಅಂದ್ರೇ 2008 ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ಅದಾ ಶರ್ಮಾ ಕನ್ನಡ,ಹಿಂದಿ,ತೆಲುಗು,ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿದ್ದ ಅದಾ ಶರ್ಮಾ 2015 ರಲ್ಲಿ ತೆರೆಕಂಡ ರಣವಿಕ್ರಮ ಸಿನಿಮಾದಲ್ಲಿ‌ ನಟಿಸಿದ್ದರು. ಅದಾದ ಬಳಿಕ ಕನ್ನಡದತ್ತ ಮುಖಮಾಡದ ಅದಾ‌ಶರ್ಮಾಗೆ ಇದುವರೆಗೂ ಸಿನಿಮಾ ರಂಗದಲ್ಲಿ ಹೇಳಿಕೊಳ್ಳುವಂತ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಈಗ ದಿ ಕೇರಳ ಸ್ಟೋರಿ ಮೂಲಕ ಅದಾ ಮನೆಮಾತಾಗಿದ್ದಾರೆ. ಈ ಸಿನಿಮಾಗಾಗಿ ತಾವು ಹಲವು ಸಂತ್ರಸ್ಥರನ್ನು ಭೇಟಿ ಮಾಡಿ ಅವರ ನೋವು ಆಲಿಸಿದ್ದಾಗಿಯೂ ಅದಾ ಶರ್ಮಾ ಸಿನಿಮಾ ಪ್ರಮೋಶನ್ ವೇಳೆ ಹೇಳಿಕೊಂಡಿದ್ದರು.

The Kerala Story Movie: Kerala Story Sundaria Shivabhakti: Adah Sharma Video Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular