ಶಾಸಕ ಸಿ.ಟಿ ರವಿ ಆರೋಗ್ಯದಲ್ಲಿ ಏರುಪೇರು : ದಿಢೀರ್‌ ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು : ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ (MLA CT Ravi) ಆರೋಗ್ಯದಲ್ಲಿ ದಿಢೀರ್‌ ಅಂತ ಏರುಪೇರು ಕಂಡಿದ್ದು, ಕೂಡಲೇ ಅಂದರೆ ತಡರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ದೊರಕಿದೆ. ಶಾಸಕ ಸಿ.ಟಿ ರವಿ ಅವರು ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದ ಕಾರಣದಿಂದ ಆರೋಗ್ಯದಲ್ಲಿ ಅಸ್ಥವ್ಯಸ್ಥಗೊಂಡಿದ್ದಾರೆ ಎಂದು ಮೂಲಗಳಿಂದ ವರದಿ ತಿಳಿದು ಬಂದಿದೆ.

ಸದ್ಯ ಸಿ.ಟಿ ರವಿ ಅವರನ್ನು ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಧಾನಸಭೆ ಚುನಾವಣೆ ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಆದರೆ ನಿನ್ನೆ ತಡರಾತ್ರಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ಕೂಡ ಸಿ ಟಿ ರವಿ ಅವರು ಕಿಡ್ನಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿದ್ದಾರೆ. ಆಗ ವೈದ್ಯರು ಸಿ.ಟಿ. ರವಿ ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎನ್ನುವ ಮಾಹಿತಿ ಕೊಟ್ಟಿದ್ದಾರೆ. ಆದರೆ ಇದೀಗ ಮತ್ತೆ ಕಡ್ನಿ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರವಿ ಬಿಜೆಪಿ ಕರ್ನಾಟಕ ಯುವ ಮೋರ್ಚಾ (ಪಕ್ಷದ ಯುವ ಘಟಕ) ಅಧ್ಯಕ್ಷರಾಗಿದ್ದರು. ನಂತರ, ರಾಜನಾಥ್ ಸಿಂಗ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಮಾಡಿದರು ಮತ್ತು ಅವರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. ಪತ್ರಿಕಾಗೋಷ್ಠಿಗಳಲ್ಲೂ ಪಕ್ಷವನ್ನು ಪ್ರತಿನಿಧಿಸಿದ್ದರು. ರವಿ ಕರ್ನಾಟಕದ ಚಿಕಮಗಳೂರು ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರು ಮುಸ್ಲಿಮರ ವಿರುದ್ಧ ಬಹಿರಂಗವಾಗಿ ಕೋಮುವಾದಿ ಹೇಳಿಕೆಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ ಮತ್ತು ಕರಾವಳಿ ಕರ್ನಾಟಕದಲ್ಲಿ ಹಿಂದುತ್ವ ಚಳವಳಿಯ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ : ಸಮೀಕ್ಷೆಗೆ ಬಿಜೆಪಿ ಪಡೆ ತತ್ತರ : ರಾಜಧಾನಿಗೆ ನಾಯಕರ ದೌಡು ಮಹತ್ವದ ಸಭೆ

ಇದನ್ನೂ ಓದಿ : ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್‌ ಬ್ಲಾಕ್‌ ಮೇಲ್‌ : ರಮೇಶ್‌ ಜಾರಕಿಹೊಳಿ ಆರೋಪ

ಇದನ್ನೂ ಓದಿ : ರಾಜ್ಯದಲ್ಲಿ ಅತಂತ್ರ ಸರಕಾರ : ಏನ್‌ ಹೇಳುತ್ತೆ EXIT POLL

ವಿಧಾನಸಭೆ ಚುನಾವಣೆ ಹಿನ್ನಲೆ ಈಗಾಗಲೇ ಅವರು ಕ್ಷೇತ್ರದಲ್ಲಿ ಹಲವಾರು ಕಡೆ ಸುತ್ತಾಡಿದ್ದಾರೆ. ಅಲ್ಲದೇ ಹಲವು ಕಾರ್ಯಕರ್ತರ ಜೊತೆ ಸೇರಿ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದರು. ಇದೀಗ ಆರೋಗ್ಯದಲ್ಲಿನ ಏರುಪೇರಿನಿಂದ ಆಸ್ಪತ್ರೆ ಸೇರಿರುವುದು ದುಃಖಕರ ಸಂಗತಿಯಾಗಿದೆ. ಇನ್ನು ರಾಜಕಾರಣಿಗಳು, ಹಿತೈಷಿಗಳು ಆದಷ್ಟು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

MLA CT Ravi’s health deteriorated: He was suddenly admitted to the hospital

Comments are closed.