The Vaccine War : ದಿ ಕಾಶ್ಮೀರ್ ಫೈಲ್ಸ್ ನ ಅಗಾಧ ಯಶಸ್ಸಿನ ನಂತರ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದ್ದು ʼದಿ ವ್ಯಾಕ್ಸಿನ್ ವಾರ್ʼ ಎನ್ನುವ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನ ಮಾಡುತ್ತಿರುವುದಾಗಿ ಇಂದು ಘೋಷಣೆ ಮಾಡಿದ್ದಾರೆ.
ಮಾರ್ಚ್ 11ರಂದು ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆಗಿದ್ದು, ಸಾಕಷ್ಟು ಜನಪ್ರೀಯತೆಯನ್ನು ಪಡೆದುಕೊಂಡಿತ್ತು . ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿಯನ್ನು ಗಳಿಸಿ ಕೊಟ್ಟಿತು . ತೊಂಬತ್ತರ ದಶಕದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಆಧರಿಸಿ ಈ ಸಿನಿಮಾ ಗೆದ್ದುಕೊಂಡಿತ್ತು .
ಇದೀಗ ವಿವೇಕ್ ಅವರು ʼದಿ ವ್ಯಾಕ್ಸಿನ್ ವಾರ್ʼ(The Vaccine War)ಎನ್ನುವ ಸಿನಿಮಾ ಮಾಡುತ್ತಿದ್ದಾರೆ . ಈ ಚಿತ್ರದ ಟೈಟಲ್ ರಿವಿಲ್ ಮಾಡಲೆಂದು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ . ವ್ಯಾಕ್ಸಿನ್ ಬಾಟಲಿ ಮೇಲೆ ಚಿತ್ರದ ಟೈಟಲ್ ಬರೆಯಲಾಗಿದ್ದು , ಪೋಸ್ಟರ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ . ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲವಾದರೂ, ಭಾರತೀಯ ಜೈವಿಕ ವಿಜ್ಞಾನಿಗಳು ಮತ್ತು ಸ್ಥಳೀಯ ಲಸಿಕೆಗಳ ಬಗ್ಗೆ ಕೆಲವು ಅಧ್ಯಾಯಗಳನ್ನು ಈ ಚಿತ್ರವು ತೆರೆದಿಡುತ್ತದೆ ಎನ್ನುವುದನ್ನು ಸೂಚಿಸುತ್ತದೆ .
ಇದನ್ನೂ ಓದಿ : Jacqueline Fernandez: ‘ಜಾಕ್ವೆಲಿನ್ ಬಂಧನ ಯಾಕೆ ಇನ್ನೂ ಆಗಿಲ್ಲ’..? ಇಡಿ ಅಧಿಕಾರಿಗಳಿಗೆ ಕೋರ್ಟ್ ತರಾಟೆ
ಇದನ್ನೂ ಓದಿ : The Film Maker : ಹಲವು ರೋಚಕತೆ ಒಳಗೊಂಡ ‘ದಿ ಫಿಲಂ ಮೇಕರ್’ ನವೆಂಬರ್ 18ಕ್ಕೆ ರಿಲೀಸ್
ಶೀರ್ಷಿಕೆಯ ಪ್ರಕಾರ, ಈ ಚಿತ್ರವು ಕೋವಿಡ್ ಸಮಯದಲ್ಲಿ ಭಾರತದಲ್ಲಿ ತಯಾರಿಸಲಾದ ಕೋವಿಡ್ -19 ಲಸಿಕೆಯನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಲಾಗಿದ್ದು , 2023ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಚಿತ್ರವು ಕನ್ನಡ ಸೇರಿದಂತೆ ಹನ್ನೊಂದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವುದು ವಿಶೇಷ . ಕನ್ನಡ , ಇಂಗ್ಲೀಷ್ , ಹಿಂದಿ , ತೆಲುಗು , ಮಲಯಾಳಂ , ಮರಾಠಿ ಹಾಗೂ ಮೊದಲಾದ ಬಾಷೆಗಳಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ ಎನ್ನಲಾಗಿದೆ .
ಇದನ್ನೂ ಓದಿ : Kantara Hindi Collection : ಹಿಂದಿಯಲ್ಲಿ 70 ಕೋಟಿ ಕಲೆಕ್ಷನ್ ದಾಟಿದ ‘ಕಾಂತಾರ’
ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ನಿರ್ಮಾಪಕರಾದ ಪಲ್ಲವಿ ಜೋಶಿ ಮತ್ತು ಅಭಿಷೇಕ್ ಅಗರ್ವಾಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು , ಈ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದು ಇನ್ನಷ್ಟೇ ತಿಳಿಬೇಕಿದೆ .
“ಕೋವಿಡ್ ಲಾಕ್ಡೌನ್ ಸಮಯದಲ್ಲಿ ನಾನು ಕೋವಿಡ್ ಲಸಿಕೆಯ ಕುರಿತಾಗಿ ಸಂಶೋದಿಸಲು ಪ್ರಾರಂಭಿಸಿದ್ದೆನು . ನಂತರ ನಾವು ಅದನ್ನು ತಯಾರಿಸುವ ಐ.ಸಿ.ಎಮ್.ಆರ್ ಮತ್ತು ಎನ್.ಐ.ವಿ ಯ ವಿಜ್ಞಾನಿಗಳೊಂದಿಗೆ ಸಂಶೋದನೆಯನ್ನು ಪ್ರಾರಂಭಿಸಿದೆವು . ಅವರ ಹೋರಾಟ ಮತ್ತು ತ್ಯಾಗದ ಕಥೆ ಅಗಾದವಾಗಿತ್ತು ಮತ್ತು ವಿಜ್ಞಾನಿಗಳು ಭಾರತದ ವಿರುದ್ದದ ವಿದೇಶಿ ಏಜೆನ್ಸಿಗಳಿಂದ ಮಾತ್ರವಲ್ಲದೆ ತಮ್ಮದೇ ಆದ ಜನರಿಂದ ಆದ ಯುದ್ದವನ್ನು ಹೇಗೆ ಎದುರಿಸಿದರು ಎಂಬುದನ್ನು ಸಂಶೋಧಿಸಿದಾಗ ಭಾರತೀಯನು ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತೆ ಈ ಕಥೆಯನ್ನು ಹೇಳಬೇಕು ಎಂದು ನಾನು ಭಾವಿಸಿದ್ದೆ . ಇದಲ್ಲದೆ ಇದು ನಿಮಗೆ ತಿಳಿದಿಲ್ಲದ ಜೈವಿಕ ಯುದ್ದದ ಬಗ್ಗೆ ಭಾರತದ ಮೊದಲ ಶುದ್ದ ವಿಜ್ಞಾನ ಚಲನಚಿತ್ರವಾಗಿದೆ ” ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ
After the huge success of The Vaccine War: The Kashmir Files, everyone was curious about director Vivek Agnihotri’s next film. Vivek Agnihotri has announced today that he is directing a film called ‘The Vaccine War’.