Semi-final phobia for India: ಭಾರತಕ್ಕೆ ಸೆಮೀಸ್ ಫೋಬಿಯಾ. 7 ವರ್ಷಗಳಲ್ಲಿ 4 ವಿಶ್ವಕಪ್ ಸೆಮಿಫೈನಲ್ ಸೋತ ಟೀಮ್ ಇಂಡಿಯಾ

ಅಡಿಲೇಡ್: Semi-final phobia for India : ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್’ಗಳ ಹೀನಾಯ ಸೋಲು ಕಾಣುವುದರೊಂದಿಗೆ ಟಿ20 ವಿಶ್ವಕಪ್ (T20 World Cup 2022) ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ನುಚ್ಚುನೂರಾಗಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಒಡ್ಡಿದ 169 ರನ್’ಗಳ ಟಾರ್ಗೆಟನ್ನು ಲೀಲಾಜಾಲವಾಗಿ ಚೇಸ್ ಮಾಡಿದ ಇಂಗ್ಲೆಂಡ್ ಕೇವಲ 16 ಓವರ್’ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಸೆಮಿಫೈನಲ್’ನಲ್ಲಿ ಸೋತ ಭಾರತ ಟೂರ್ನಿಯಿಂದ ನಿರ್ಗಮಿಸಿದ್ರೆ, ಇಂಗ್ಲೆಂಡ್ 3ನೇ ಬಾರಿ ಫೈನಲ್’ಗೆ ಲಗ್ಗೆಯಿಟ್ಟಿತು. ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ಫೈನಲ್ ಕದನದಲ್ಲಿ 2010ರ ಚಾಂಪಿಯನ್ ಇಂಗ್ಲೆಂಡ್, 2009 ಚಾಂಪಿಯನ್ಸ್ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್’ನಿಂದ ಹೊರ ಬಿದ್ದಿರುವ ಭಾರತಕ್ಕೆ ಕಳೆದ ಏಳು ವರ್ಷಗಳಲ್ಲಿ 4ನೇ ಬಾರಿ ಸೆಮಿಫೈನಲ್ ಫೋಬಿಯಾ ಎದುರಾಗಿದೆ. 2015ರಿಂದ 2022ರವರೆಗೆ ಆಡಿದ ನಾಲ್ಕು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಸೆಮಿಫೈನಲ್’ನಲ್ಲೇ ಸೋತಿದೆ.

Semi-final phobia for India : 7 ವರ್ಷ, 4 ವಿಶ್ವಕಪ್ ಸೆಮಿಫೈನಲ್ ಸೋಲು

2015 (ಏಕದಿನ ವಿಶ್ವಕಪ್): ಆಸ್ಟ್ರೇಲಿಯಾ ವಿರುದ್ಧ 95 ರನ್ ಸೋಲು
2016: (ಟಿ20 ವಿಶ್ವಕಪ್): ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಸೋಲು
2019: (ಏಕದಿನ ವಿಶ್ವಕಪ್): ನ್ಯೂಜಿಲೆಂಡ್ ವಿರುದ್ಧ 18 ರನ್ ಸೋಲು
2022: (ಟಿ20 ವಿಶ್ವಕಪ್): ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು

ಐಸಿಸಿ ಟ್ರೋಫಿ ಇಲ್ಲದೆ ಒಂಬತ್ತೂವರೆ ವರ್ಷ:

ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲದೆ ಒಂಬತ್ತೂವರೆ ವರ್ಷಗಳೇ ಕಳೆದಿವೆ. 2013ರ ಜೂನ್ ತಿಂಗಳಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್’ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದೇ ಕೊನೆ. ನಂತರ ಭಾರತ ಒಮ್ಮೆಯೂ ಐಸಿಸಿ ಟ್ರೋಫಿ ಗೆದ್ದಿಲ್ಲ.

2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ 2014ರ ಟಿ20 ವಿಶ್ವಕಪ್’ನಲ್ಲಿ ಫೈನಲ್’ನಲ್ಲಿ ಸೋತಿದೆ. 2015ರ ಏಕದಿನ ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋಲು, 2016ರ ಟಿ20 ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋಲು, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್’ನಲ್ಲಿ ಸೋಲು, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋಲು, 2021ರ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಸೋಲು, 2021ರ ಟಿ20 ವಿಶ್ವಕಪ್’ನಲ್ಲಿ ಗ್ರೂಪ್ ಹಂತದಲ್ಲೇ ಪರಾಜಯ, ಈಗ ಮತ್ತೊಮ್ಮೆ ಟಿ20 ವಿಶ್ವಕಪ್’ನಲ್ಲಿ ಸೆಮಿಫೈನಲ್’ನಲ್ಲಿ ಭಾರತ ಸೋತಿದೆ. ಮುಂದಿನ ವರ್ಷ ಐಸಿಸಿ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದ್ದು, ಅಲ್ಲೂ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೆ, ಐಸಿಸಿ ಪ್ರಶಸ್ತಿ ಗೆದ್ದು ಭರ್ತಿ 10 ವರ್ಷ ತುಂಬಲಿದೆ.

ಇದನ್ನೂ ಓದಿ : India vs England : ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಹಿನಾಯ ಸೋಲು : ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಇದನ್ನೂ ಓದಿ : Fazal Atrachali : ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಟ್ಯಾಕಲ್ ಪಾಯಿಂಟ್ಸ್, ಐತಿಹಾಸಿಕ ದಾಖಲೆ ಬರೆದ ಇರಾನ್ ದಿಗ್ಗಜ ಫಜಲ್ ಅತ್ರಾಚಲಿ

Semi-final phobia for India ICC World Cup Team India eng vs ind

Comments are closed.