ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ ‘ಸೈಂಧವ್’ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ನಟ ವೆಂಕಟೇಶ್ (Victory Venkatesh) ಸಿನಿಮಾಗಳು ಹೆಚ್ಚಾಗಿ ಸದ್ದು ಮಾಡುತ್ತಿದೆ. ಸದ್ಯ ಭಾರತೀಯ ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಹಾಗಾಗಿ ವೆಂಕಟೇಶ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ‘ನಾರಪ್ಪ’, ‘ದೃಶ್ಯಂ- 2’, ‘ಎಫ್3’ ನಂತರ ವಿಕ್ಟರಿ ವೆಂಕಟೇಶ್ ‘ಸೈಂಧವ್’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ.
‘ಹಿಟ್’ ಹಾಗೂ ‘ಹಿಟ್- 2’ ಸಿನಿಮಾಗಳನ್ನು ನಿರ್ದೇಶಿಸಿದ ಶೈಲೇಶ್ ಕೊಲನು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ವೆಂಕಟೇಶ್ ಸೈಂಧವ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಈ ಭಾರಿ ನಟ ವಿಕ್ಟರಿ ವೆಂಕಟೇಶ್ ಗನ್ ಹಿಡ್ದು ಅಬ್ಬರಿಸಿದ್ದಾರೆ. ಹೆಚ್ಚಾಗಿ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ವೆಂಕಟೇಶ್ ಈ ಸಲ ಆಕ್ಷನ್ ಸಿನಿಮಾದಲ್ಲಿ ನಟಿಸ್ತಿದ್ದಾರೆ.
ಇದೀಗ ಟೈಟಲ್ ಜೊತೆ ಸಿನಿಮಾದ ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿದೆ. ಟಾಲಿವುಡ್ ಸೀರಿಯರ್ ಹೀರೊಗಳು ಅಂದಾಕ್ಷಣ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಕಣ್ಣಮುಂದೆ ಬರುತ್ತಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಚಿರಂಜೀವಿ, ಬಾಲಯ್ಯ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿದ್ದರು. ಹಾಗಾಗಿ ‘ವೀರಸಿಂಹ ರೆಡ್ಡಿ’, ‘ವಾಲ್ತೇರು ವೀರಯ್ಯ’ ಸಿನಿಮಾಗಳು ಹಿಟ್ ಲಿಸ್ಟ್ ಸೇರಿಕೊಂಡಿದೆ.
ಬಿಡುಗಡೆಯಾದ ಟೀಸರ್‌ನಲ್ಲಿ ಚಂದ್ರಪ್ರಸ್ಥ ಎನ್ನುವ ಬಂದರು ನಗರಿಯಲ್ಲಿ ವೆಂಕಟೇಶ್ ನಡೆದುಕೊಂಡು ಹೋಗಿ ಬೈಕ್ ಮೇಲೆ ಇರುವ ಒಂದು ಬಾಕ್ಸ್ ಓಪನ್ ಮಾಡುತ್ತಾರೆ. ಅದರಲ್ಲಿ ಮೆಡಿಸಿನ್ ವೈಲ್ ಇರುತ್ತೆ. ಅದನ್ನು ತೆಗೆದುಕೊಂಡು ಕಂಟೇನರ್ ಒಳಗೆ ಹೋದ ವೆಂಕಟೇಶ್ ಒಂದು ಗನ್ ಹಿಡ್ದು ಹೊರಗೆ ಬರ್ತಾರೆ. ಎದುರಿಗೆ ಬಿದ್ದು ಒದ್ದಾಡುತ್ತಿರುವ ಪುಂಡರನ್ನು ನೋಡಿ ‘ನಾನು ಇಲ್ಲೇ ಇರ್ತೀನಿ, ಎಲ್ಲೂ ಹೋಗಲ್ಲ, ಬರೋಕೆ ಹೇಳು’ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಟೀಸರ್ ಬಿಜಿಎಂ, ಹೀರೊ ಪ್ರಸೆಂಟೇಷನ್ ಚೆನ್ನಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮೊದಲ ನೋಟದಲ್ಲೇ ‘ಸೈಂಧವ್’ ಟೀಸರ್ ಅಭಿಮಾನಿಗಳ ಮನ ಗೆದ್ದಿದೆ. ಇದು ವೆಂಕಟೇಶ್ ಅಭಿನಯದ 75ನೇ ಸಿನಿಮಾ ಎನ್ನುವುದು ವಿಶೇಷ. ಈ ಮೈಲಿಗಲ್ಲು ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲಾಗುತ್ತಿದೆ. ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ನಿಹಾರಿಕಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟೇಶ್ ಬೋಯನಪಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹಳ ದಿನಗಳ ನಂತರ ವೆಂಕಟೇಶ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
“ಹಿಟ್” ಸರಣಿ ಸಿನಿಮಾಗಳ ಮೂಲಕ ನಿರ್ದೇಶಕ ಶೈಲೇಶ್ ಕೊಲನು ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ‘ಹಿಟ್’ -2 ಸಕ್ಸಸ್ ಬೆನ್ನಲ್ಲೇ ನಾನಿ ಹೀರೊ ಆಗಿ ‘ಹಿಟ್- 3’ ಸಿನಿಮಾ ಘೋಷಿಸಿದ್ದರು. ಆದರೆ ಆ ಸಿನಿಮಾವನ್ನು ಪಕ್ಕಕ್ಕಿಟ್ಟು ‘ಸೈಂಧವ್’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ‘ವಿಕ್ರಂ’ ಸಿನಿಮಾದಲ್ಲಿ ಕಮಲ್ ಗನ್ ಹಿಡ್ದು ಕಾಣಿಸಿಕೊಂಡಂತೆ ಇಲ್ಲಿ ವೆಂಕಟೇಶ್ ಕಾಣಿಸಿಕೊಳ್ಳಲಿದ್ದಾರೆ. ಕೆಲವರು ‘ಸೈಂಧವ್’ ಟಾಲಿವುಡ್ ‘ವಿಕ್ರಂ’ ಎನ್ನುವಂತೆ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ : ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿದ ಶಾರುಖ್ ಖಾನ್ “ಪಠಾಣ್”
ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ‘ವಿಕ್ರಮ್’ ಬೆಡಗಿ ಧಾರವಾಡದ ಸ್ವತಿಷ್ಠ ಕೃಷ್ಣನ್
ಇದನ್ನೂ ಓದಿ : ‘ರೋಲೆಕ್ಸ್ ಕೋಮಲ್’ಗೆ ನಾಯಕಿಯಾದ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಂಡವಾಳ ಹೂಡಲು ನಿರ್ಮಾಪಕರು ಹಿಂದೆ ಮುಂದೆ ನೋಡಲ್ಲ. ದೊಡ್ಡಮಟ್ಟದ ಮಾರ್ಕೆಟ್ ಸಿಗುವುದರಿಂದ ಹಣ ವಾಪಸ್ ಬಂದೇ ಬರುತ್ತದೆ ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಇನ್ನು ಓಟಿಟಿ, ಡಿಜಿಟಲ್ ರೈಟ್ಸ್‌ಗೂ ಡಿಮ್ಯಾಂಡ್ ಬರುತ್ತದೆ. ‘ಸೈಂಧವ್’ ಸಿನಿಮಾವನ್ನು ಕೂಡ ಬಹಳ ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ನಟ, ನಟಿಯರು ಬಹುತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Tollywood actor Victory Venkatesh 75th movie first look teaser release