ಮಂಗಳವಾರ, ಏಪ್ರಿಲ್ 29, 2025
HomeCinemaSamantha Mental Problem : ಟಾಲಿವುಡ್ ನಟಿಯ ಸತ್ಯ ದರ್ಶನ : ನನಗೂ ಮಾನಸಿಕ ಸಮಸ್ಯೆ‌...

Samantha Mental Problem : ಟಾಲಿವುಡ್ ನಟಿಯ ಸತ್ಯ ದರ್ಶನ : ನನಗೂ ಮಾನಸಿಕ ಸಮಸ್ಯೆ‌ ಇತ್ತು ಎಂದ ಸಮಂತಾ

- Advertisement -

ಟಾಲಿವುಡ್ ಬ್ಯೂಟಿ ಸಮಂತಾ ಸದ್ಯ ಸೋಷಿಯಲ್‌ಮೀಡಿಯಾದ‌ ಹಾಟ್ ಟಾಪಿಕ್. ವಿಚ್ಚೇಧನದ ಬಳಿಕ ಸೋಷಿಯಲ್ ‌ಮೀಡಿಯಾದಲ್ಲಿ ಸಮಂತಾ ಬಗ್ಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆ ನಡೆಯುತ್ತಲೇ ಇದೆ. ಎಲ್ಲ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯುತ್ತಿರುವ ಸಮಂತಾ ಮಾಧ್ಯಮ ಸಂದರ್ಶನವೊಂದರಲ್ಲಿ ತಾವು ಮಾನಸಿಕ‌ ಸಮಸ್ಯೆ ಎದುರಿಸಿದ ಸಂಗತಿಯನ್ನು (Samantha Mental Problem) ಬಿಚ್ಚಿಟ್ಟಿದ್ದು ಫ್ಯಾನ್ಸ್ ಗೆ ಶಾಕ್ ನೀಡಿದ್ದಾರೆ.

ಊ ಅಂಟಾವಾ ಮಾವಾ ಊಹೂಂ ಅಂಟಾವಾ ಮಾವಾ ಎಂದು ಮತ್ತೇರಿಸುವಂತೆ ಕುಣಿದ ಸಮಂತಾ ಸದ್ಯ ಟಾಲಿವುಡ್ ನ ಕಣ್ಮನಿ. ನಾಗಚೈತನ್ಯರಿಂದ ಡಿವೋರ್ಸ್ ಪಡೆದ ಬಳಿಕ ಸಮಂತಾ ಆ ನೋವಿನಿಂದ ಹೊರಬಂದು ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. ದಾಂಪತ್ಯವನ್ನು ಮುರಿದುಕೊಂಡ ಮೇಲೂ ನಟನೆ ಯಲ್ಲಿ ಮೊದಲಿನಂತೆ‌ ಮುಂದುವರಿದ ಸಮಂತಾ ಗಟ್ಟಿತನಕ್ಕೆ ಹೊಗಳಿಕೆ ಹಾಗೂ ಟೀಕೆ ಎರಡೂ ವ್ಯಕ್ತವಾಗಿತ್ತು. ಆದರೆ ಈಗ ಆ ಗಟ್ಟಿತನದ ಹಿಂದೆ ತಾವು ಎದುರಿಸಿದ ನೋವನ್ನು ಹಾಗೂ ದುಃಖವನ್ನು ಸಮಂತಾ ಹಂಚಿಕೊಂಡಿದ್ದಾರೆ.

ನನ್ನ ಬದುಕಿನ ಸಂದಿಗ್ಧದ ಹೊತ್ತಿನಲ್ಲಿ ನಾನು ಧೈರ್ಯವಾಗಿ ಇದ್ದೇನೆ. ಹೀಗಾಗಿ‌ನಾನು ಎಲ್ಲರಿಗೂ ಮಾದರಿ. ನಾನು ಮಾನಸಿಕವಾಗಿ ಸ್ಟ್ರಾಂಗ್ ಎಂದು ಎಲ್ಲರೂ ಭಾವಿಸಿದ್ದಾರೆ‌. ಆದರೆ ನಾನು ಸ್ಟ್ರಾಂಗ್ ಆಗಿದ್ದು ನನ್ನಿಂದ ಅಲ್ಲ. ನನ್ನ ಸುತ್ತಲಿನ ಜನರಿಂದ. ಅವರೆಲ್ಲರೂ ನನ್ನ ಬದಲಾವಣೆಗಾಗಿ ಸಾಕಷ್ಟು ಸಮಯವನ್ನು ವ್ಯಯಿಸಿದ್ದಾರೆ. ನಾವು ಕೂಡ ಮಾನಸಿಕವಾಗಿ ನೊಂದಂಥವರಿಗೆ‌ ನೆರವಾಗುವ ಮೂಲಕ ನಾವು ಕುಸಿದಾಗ ‌ಬಳಸಿಕೊಂಡ‌ ಸಹಾಯವನ್ನು ಮರಳಿಸಬೇಕು ಎಂದಿದ್ದಾರೆ.

ಟ್ರಸ್ಟ್ ವೊಂದು ಆಯೋಜನೆ ಮಾಡಿದ್ದ ನಿಮ್ಮ ಮನೆ ಬಾಗಿಲಿಗೆ ಮನೋಶಾಸ್ತ್ರ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಂತಾ ನಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ.‌ ನನಗೂ ಸಾಕಷ್ಟು ಸಮಸ್ಯೆಗಳಿವೆ. ನಾನು ಸ್ನೇಹಿತರು ಹಾಗೂ ಸಲಹೆಗಾರರಿಂದ ಸಹಾಯ ಪಡೆದು ಇದರಿಂದ‌ ಹೊರಬಂದಿದ್ದು, ಹೇಗೆ ಹೃದಯಕ್ಕೆ ಅನಾರೋಗ್ಯವಾದಾಗ ವೈದ್ಯರ ಬಳಿ ಹೋಗುತ್ತೆವೆಯೋ ಹಾಗೇ ಮನಸ್ಸಿಗೆ ನೋವಾದಾಗಲೂ ನಾವು ವೈದ್ಯರನ್ನು ಭೇಟಿ ಮಾಡಬೇಕು ಎಂದು ಸಮಂತಾ ಮುಕ್ತವಾಗಿ ಮಾತನಾಡಿದ್ದಾರೆ.

ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಸಮಂತಾ ಸದ್ಯ ಯಶೋಧಾ ಮೂವಿ ಚಿತ್ರೀಕರಣ ಮುಗಿಸಿದ್ದು, ಶಾಕುಂತಲಂ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೇ ಸಖತ್ ಬೋಲ್ಡ್ ಪೋಸ್ಟ್ ಗಳ‌ ಮೂಲಕವೂ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಸಖತ್ ವೀವ್ಸ್ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಸಮಂತಾ ಸ್ನೇಹಿತೆಯರ ಜೊತೆ ಗೋವಾ ಟ್ರಿಪ್ ಹೋಗಿದ್ದು ಪೋಟೋಸ್ ಶೇರ್ ಮಾಡಿದ್ದರು.

ಇದನ್ನೂ ಓದಿ : ಬೀಚ್‌ನಲ್ಲಿ ಮೌನಿ ರಾಯ್ ಬಿಕನಿ ಅವತಾರಕ್ಕೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : ಮದುವೆಯ ತಿಂಗಳ ಸಂಭ್ರಮದಲ್ಲಿ ಕತ್ರೀನಾ ಕೈಫ್–ವಿಕ್ಕಿ ಕೌಶಲ್

(Samantha says I too had a mental problem)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular