Private Hospital Corona Treatment : ರಾಜ್ಯದಲ್ಲಿ ಏರುತ್ತಲೇ ಇದೆ‌ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು

ಬೆಂಗಳೂರು : ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಭಾನುವಾರ ಅಂತ್ಯದ ವೇಳೆಗೆ ರಾಜ್ಯದಲ್ಲಿ 12 ಸಾವಿರ ಕೊರೋನಾ ಪ್ರಕರಣ ದಾಖಲಾಗಿದ್ದರೇ, ನಗರದಲ್ಲಿ 9 ಸಾವಿರಕ್ಕೂ ಅಧಿಕ‌ ಸೋಂಕಿತರು ಕೊರೋನಾಕ್ಕೆ ತುತ್ತಾಗಿದ್ದಾರೆ. ಈ ಮಧ್ಯೆ ನಗರದಲ್ಲಿ ಸರ್ಕಾರಿ ಆಸ್ಪತ್ರೆಗಳು ಕೊರೋನಾ ಹಾಗೂ ಓಮೈಕ್ರಾನ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು (Private Hospital Corona Treatment) ಸಜ್ಜಾಗುತ್ತಿದ್ದು ಈ ವಾರ ನಗರದಲ್ಲಿ ಐದು ಸಾವಿರಕ್ಕೂ ಅಧಿಕ ಹಾಸಿಗೆಗಳು ರೋಗಿಗಳ ಚಿಕಿತ್ಸೆಗೆ ಲಭ್ಯವಾಗಲಿದೆ.

ಕಳೆದ ಎರಡು ಅಲೆಗಳಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಏರಿಕೆಯಾದಾಗ ರೋಗಿಗಳ ಚಿಕಿತ್ಸೆಗೆ ಬೆಡ್ ಗಳಿಲ್ಲದೇ ಪರದಾಡುವ ಸ್ಥಿತಿ ಎದುರಾಗಿತ್ತು. ಹೀಗಾಗಿ ಈ ಭಾರಿ ಮೊದಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಈಗಾಗಲೇ ಓಮೈಕ್ರಾನ್ ಹಾಗೂ ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಜ್ಜಾಗುವಂತೆ ಖಾಸಗಿ ಅಸ್ಪತ್ರೆಗಳಿಗೆ ಸೂಚಿಸಿದೆ. ಮಾತ್ರವಲ್ಲ ಕೊರೋನಾ ಹಾಗೂ ಓಮೈಕ್ರಾನ್ ರೋಗಿಗಳ ಚಿಕಿತ್ಸೆ ಮತ್ತು ರೋಗಿಗಳ ಡಿಸ್ಚಾರ್ಜ್ ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ.

ನಗರದಲ್ಲಿ ವಿಕ್ಟೋರಿಯಾ,ಬೌರಿಂಗ್ ,ಲೇಡಿ‌ಕರ್ಜನ್ ಹಾಸ್ಪಿಟಲ್, ರಾಜೀವಗಾಂಧಿ ಎದೆರೋಗಗಳ ಆಸ್ಪತ್ರೆ,ಕೆಸಿಜನರಲ್,ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಇಂದಿರಾನಗರ ಆಸ್ಪತ್ರೆಗಳಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಾಸ್ಪಿಟಲ್ ನಲ್ಲಿ ಒಟ್ಟು 1836 ಹಾಸಿಗೆಗಳಿದ್ದು ಈ ಪೈಕಿ1667 ಹಾಸಿಗೆಗಳು ಖಾಲಿ ಉಳಿದಿವೆ. ಕೊರೋನಾ ಸೋಂಕಿತರ ಪೈಕಿ 166 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಕೊವೀಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ‌ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಸಿದ್ಧಪಡಿಸಿ ಕೊಳ್ಳಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಶೇಕಡಾ 50 ರಷ್ಟು ಹಾಸಿಗೆಗಳು ಭರ್ತಿಯಾದ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಿದ್ದತೆ ನಡೆದಿದೆ.

ಇನ್ನೂ ಖಾಸಗಿಯಾಗಿ ೫೦೦ ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಗುರುತಿಸಲಾಗಿದ್ದು, ಈ ಹಿಂದೆ ಕೋವಿಡ್ ಕೇಸ್ ಗಳು ಉಲ್ಬಣಗೊಂಡಾಗ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗಲೂ ಸರ್ಕಾರದ ಸೂಚನೆಯಂತೆ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರದ ಸೂಚನೆಯಂತೆ ಅಸ್ಪತ್ರೆಗಳು ಸಜ್ಜಾಗಿದೆ ಎಂದು ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು, ಉಡುಪಿ, ದ.ಕ, ಮೈಸೂರಲ್ಲಿ ಕೊರೊನಾ ಬ್ಲಾಸ್ಟ್‌ : ಸಕ್ರೀಯ ಪ್ರಕರಣಗಳ ಸಂಖ್ಯೆ 49,602 ಕ್ಕೆ ಏರಿಕೆ

ಇದನ್ನೂ ಓದಿ : ಟಾಲಿವುಡ್ ನಟಿಯ ಸತ್ಯ ದರ್ಶನ : ನನಗೂ ಮಾನಸಿಕ ಸಮಸ್ಯೆ‌ ಇತ್ತು ಎಂದ ಸಮಂತಾ

( Karnataka Corona Virus Hike, private Hospital Ready to Corona Treatment )

Comments are closed.