ಮಂಗಳವಾರ, ಏಪ್ರಿಲ್ 29, 2025
HomeCinemaತೆಲುಗು ಖ್ಯಾತ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ

ತೆಲುಗು ಖ್ಯಾತ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ

- Advertisement -

ಹೈದ್ರಾಬಾದ್ : ತೆಲುಗು ಚಿತ್ರರಂಗದ ಖ್ಯಾತ ಯುವ ಸುಧೀರ್ ವರ್ಮಾ (Sudheer Varma) ಆತ್ಮಹತ್ಯೆ (ಮಾಡಿಕೊಂಡಿದ್ದಾರೆ. ವೈಯಕ್ತಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಅವರು ವಿಶಾಖಪಟ್ಟಣಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ , ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಆದರೆ ವೈಯಕ್ತಿಕ ಕಾರಣದಿಂದ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.

2013ರಲ್ಲಿ ಕಿಶೋರ್ ತಿರುಮಲ ನಿರ್ದೇಶನದ ಸೆಕೆಂಡ್ ಹ್ಯಾಂಡ್ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಸುಧೀರ್ ವರ್ಮ ಅವರಿಗೆ ನಾಯಕನಾಗಿ ಮೊದಲ ಸಿನಿಮಾವೇ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಿನಿಮಾದಲ್ಲಿ ಸಂತೋಷ್ ಎಂಬ ಛಾಯಾಗ್ರಾಹಕನ ಪಾತ್ರವನ್ನು ಸುಧೀರ್ ವರ್ಮಾ ನಿರ್ವಹಿಸಿದ್ದರು. ನಂತರ ವರಮುಲಪುಡಿ ನಿರ್ದೇಶನದ ಕುಂದನಪು ಬೊಮ್ಮ ಚಿತ್ರದಲ್ಲಿ ಸುಧೀರ್ ವರ್ಮ ನಾಯಕನಾಗಿ ನಟಿಸಿದ್ದರು. ಕುಂದನಪು ಬೊಮ್ಮ 2016 ರಲ್ಲಿ ಬಿಡುಗಡೆಯಾಯಿತು. ನಂತರದಲ್ಲಿ ಟಾಲಿವುಡ್ ಖ್ಯಾತ ನಟ ಸುಧೀರ್ ವರ್ಮಾ ಹಲವು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಪುತ್ರಿ ಸುಶ್ಮಿತಾ ನಿರ್ಮಿಸಿರುವ ಶೂಟೌಟ್ ಅಟ್ ಅಲ್ಲರ್ ವೆಬ್ ಸರಣಿಯಲ್ಲಿ ಸುಧೀರ್ ವರ್ಮಾ ನಟಿಸಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಲಕ್ಷ್ಮಣ ವಿಧಿವಶ

ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ಖಳನಟ ಲಕ್ಷ್ಮಣ ಕೆಲ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ. ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವೇಳೆ ಮಾರ್ಗ ಮಧ್ಯದಲ್ಲೇ ಲಕ್ಷ್ಮಣ ಅವರು ಕೊನೆಯುಸಿರು ಎಳೆದಿದ್ದಾರೆ. ಸ್ಯಾಂಡಲ್‌ ವುಡ್‌ ನಲ್ಲಿ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿರುವ ಇವರು ಮಲ್ಲ, ಯಜಮಾನ, ಸೂರ್ಯವಂಶ, ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ನಟ ಅಂಬರೀಶ್‌ ಅವರ ನೆಚ್ಚಿನ ನಟ ಎಂಬ ಹೆಗ್ಗಳಿಕೆಗೂ ಲಕ್ಷ್ಮಣ ಅವರು ಖ್ಯಾತರಾಗಿದ್ದಾರೆ.

ಕನ್ನಡ ಚಿತ್ರರಂಗದ ಅತ್ಯುನ್ನತ ಕಲಾವಿದರಾದ ಡಾ. ರಾಜ್ ಕುಮಾರ್‌, ಡಾ. ಅಂಬರೀಶ್‌, ಡಾ. ವಿಷ್ಣುವರ್ಧನ್‌, ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಅನೇಕ ದಿಗ್ಗಜ ರೊಂದಿಗೆ ಇವರು ಕೆಲಸ ಮಾಡಿದ್ದು, ಅಭಿಮಾನಿಗಳ ಹಾಗೂ ನಟ ದಿಗ್ಗಜರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟರಾಗಿ ಸೇವೆ ಸಲ್ಲಿಸಿ ನಂತರ ದಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಸಿನಿಮಾ ರಂಗಕ್ಕೆ ಬರುವ ಮೊದಲು ಇವರಿಗೆ ಖಾಕಿ ಮೇಲೆಯೇ ಸೆಳೆತವಿದ್ದು, ತಾಯಿ ಒಪ್ಪದ ಕಾರಣ ಬಣ್ಣದ ಪ್ರಪಂಚಕ್ಕೆ ಲಕ್ಷ್ಮಣ ಅವರು ಕಾಲಿಟ್ಟರು. ಕನ್ನಡ ಚಿತ್ರರಂಗದಲ್ಲಿ ಅನೇಕ ಅವಕಾಶಗಳನ್ನು ಪಡೆದರು.

ಇದನ್ನೂ ಓದಿ : ಹಿಂದಿ ಬಾಕ್ಸ್‌ ಆಫೀಸ್‌ನಲ್ಲಿ 100 ದಿನ ಪೂರೈಸಿದ “ಕಾಂತಾರ” ಸಿನಿಮಾ

ಇದನ್ನೂ ಓದಿ ; Kranthi firstday show details: ಕ್ರಾಂತಿ ರಿಲೀಸ್‌ ಗೆ 3 ದಿನ ಬಾಕಿ: ಎಲ್ಲೆಲ್ಲಿ ಎಷ್ಟೆಷ್ಟು ಶೋ? ಇಲ್ಲಿದೆ ಪೂರ್ಣ ಮಾಹಿತಿ

Tollywood famous actor Sudheer Varma commits suicide

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular