“ಕ್ರಾಂತಿ” ಸಿನಿಮಾ ಬೆಂಬಲಿಸಿದ ಅಪ್ಪು ಅಭಿಮಾನಿಗಳು! ಭೇಷ್ ಎಂದ ನೆಟ್ಟಿಗರು

ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಕ್ರಾಂತಿ” ಸಿನಿಮಾಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಈ ಸಿನಿಮಾದ ಮುಂಗಡ ಬುಕ್ಕಿಂಗ್‌ ಆರಂಭಗೊಂಡಿದ್ದು, ಬಹುತೇಕವಾಗಿ ಹೆಚ್ಚಿನ ಸಿನಿಮಂದಿರಗಳಲ್ಲಿ ಫಸ್ಟ್‌ ಡೇ ಫಸ್ಟ್‌ ಶೋ ಟಿಕೆಟ್‌ ಸೋಲ್ಡ್‌ ಔಟ್‌ ಆಗಿರುತ್ತದೆ. ಈ ಸಿನಿಮಾದ ಹಾಡು ಬಿಡುಗಡೆ ವೇಳೆ ದರ್ಶನ್ ಹೇಳಿಕೆಯ ನಂತರ ನಡೆದ ಚಪ್ಪಲಿ ಎಸೆತ ಪ್ರಕರಣದ ಬಳಿಕ ಅಪ್ಪು ಅಭಿಮಾನಿಗಳು (Gokak’s Puneeth Rajkumar fans) ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಯುದ್ಧವೇ ಆರಂಭವಾಗಿ ಅದು ಸಾಮಾಜಿಕ ಜಾಲತಾಣ ದಾಟಿ ರಸ್ತೆಗೂ ಬಂದಿತ್ತು. ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ವೈಷಮ್ಯ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಜಾರಿಯಲ್ಲಿರುವಾಗ ಗೋಕಾಕ್‌ನ ಅಪ್ಪು ಅಭಿಮಾನಿಗಳು ಮಾಡಿರುವ ಕಾರ್ಯ ಸಿನಿಮಾ ಪ್ರೇಮಿಗಳ ಮನ ಗೆದ್ದಿದೆ.

ಗೋಕಾಕ್‌ನ ಅಪ್ಪು ಅಭಿಮಾನಿಗಳು (Gokak’s Puneeth Rajkumar fans) , ದರ್ಶನ್‌ ನಟನೆಯ ‘ಕ್ರಾಂತಿ’ ಸಿನಿಮಾ ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿ ದೊಡ್ಡ ಫ್ಲೆಕ್ಸ್‌ ಅನ್ನು ಹಾಕಿದ್ದಾರೆ. ಫ್ಲೆಕ್ಸ್‌ನಲ್ಲಿ ‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ 100 ದಿನ ಆಚರಿಸಲೆಂದು ಹಾರೈಕೆ’ ಎಂದು ಬರೆದಿದ್ದಾರೆ. ಕನ್ನಡ ಪರ, ಕರ್ನಾಟಕದ ಪರ ಜಾಗೃತಿ ಮೂಡಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ‘ಬೆಳಗಾವಿ ರಾಯಣ್ಣ’ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಸುಂದರ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ : Kranthi firstday show details: ಕ್ರಾಂತಿ ರಿಲೀಸ್‌ ಗೆ 3 ದಿನ ಬಾಕಿ: ಎಲ್ಲೆಲ್ಲಿ ಎಷ್ಟೆಷ್ಟು ಶೋ? ಇಲ್ಲಿದೆ ಪೂರ್ಣ ಮಾಹಿತಿ

ಇದನ್ನೂ ಓದಿ : Amrita Prem’s birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಟಗರು ಪಲ್ಯ’ ಬೆಡಗಿ ಅಮೃತ ಪ್ರೇಮ್

ಇದನ್ನೂ ಓದಿ : KL Rahul Athiya Shetty reception : ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ವಿವಾಹ ಆರತಕ್ಷತೆಗೆ 3000 ಅತಿಥಿಗಳಿಗೆ ಆಹ್ವಾನ

ಗೋಕಾಕಿನ ಅಪ್ಪು ಅಭಿಮಾನಿಗಳು ಹಾಕಿರುವ ಫ್ಲೆಕ್ಸ್‌ನಲ್ಲಿ ಪುನೀತ್ ರಾಜ್‌ಕುಮಾರ್, ಯುವರಾಜ್ ಕುಮಾರ್ ಫೋಟೋಗಳ ಜೊತೆಗೆ ನಟ ದರ್ಶನ್ ಅವರ ಫೋಟೋವನ್ನು ಹಾಕಲಾಗಿದೆ. ದೊಡ್ಮನೆಯ ಅಭಿಮಾನಿಗಳ ಸೌಹಾರ್ದಯುತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಚಂದನವನದ ಸ್ಟಾರ್‌ ನಟರ ನಡುವೆ ಹಾಗೂ ಅವರ ಅಭಿಮಾನಿಗಳ ನಡುವೆ ಇದೇ ರೀತಿಯ ಒಗ್ಗಟ್ಟನ್ನು ಕರ್ನಾಟಕದ ಜನತೆ ನಿರೀಕ್ಷಿಸುತ್ತಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರ್ಶನ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ನಡೆದಿದ್ದ ವೈಷಮ್ಯಕ್ಕೆ ಅಂತ್ಯ ಹಾಡುವಲ್ಲಿ ಮೊದಲ ಹೆಜ್ಜೆ ಇಟ್ಟ ಅಪ್ಪು ಅಭಿಮಾನಿಗಳ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಪ್ಪು ಅಭಿಮಾನಿಗಳು ಆರಂಭಿಸಿರುವ ಈ ಸೌಹಾರ್ದಯುತ ಕಾರ್ಯವನ್ನು ದರ್ಶನ್ ಅಭಿಮಾನಿಗಳು ಸ್ವಾಗತಿಸುವ ಮೂಲಕ ವೈಷಮ್ಯಕ್ಕೆ ಅಂತ್ಯ ಹಾಡುವರೇ ಇಲ್ಲವೇ ನೋಡಬೇಕಿದೆ.

While the feud between Darshan and Appu fans is still going on like an ash-covered pit, the action taken by Gokak’s Appu fans has won the hearts of movie lovers.

Comments are closed.