ಭಾನುವಾರ, ಏಪ್ರಿಲ್ 27, 2025
HomeCinemaBiggBoss Telugu: ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ ಲೈಂಗಿಕ ದೌರ್ಜನ್ಯ: ಕೆಟ್ಟದಾಗಿ ಮುಟ್ಟಿ ಸಂಜ್ಞೆ...

BiggBoss Telugu: ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ ಲೈಂಗಿಕ ದೌರ್ಜನ್ಯ: ಕೆಟ್ಟದಾಗಿ ಮುಟ್ಟಿ ಸಂಜ್ಞೆ ಮಾಡಿದ ಎಂದ ಸ್ಪರ್ಧಿ

- Advertisement -

ದೇಶದ ಎಲ್ಲಾ ಭಾಷಾ ಚಿತ್ರರಂಗದಲ್ಲೂ ಸದ್ದು ಮಾಡ್ತಿದೆ ಬಿಗ್ ಬಾಸ್ ಶೋ. ಮೊನ್ನೆ ಮೊನ್ನೆಯಷ್ಟೇ ಹಿಂದಿ ಬಿಗ್ ಬಾಸ್ ಓಟಿಟಿ ಶೋ ಕೊನೆಗೊಂಡ ಬೆನ್ನಲ್ಲೇ ಬಿಗ್ ಬಾಸ್ ತೆಲುಗು ಸುದ್ದಿಯಾಗಿದ್ದು, ಸ್ಪರ್ಧಿಯೊಬ್ಬರು ಸಹ ಸ್ಪರ್ಧಿಯ ವಿರುದ್ಧ ಕೆಟ್ಟದಾಗಿ ಮುಟ್ಟಿದ ಹಾಗೂ ಸಂಜ್ಞೆ ಮಾಡಿದ ಆರೋಪ ಮಾಡಿದ್ದಾರೆ.

ಬಿಗ್ ಬಾಸ್ ತೆಲುಗು ಸೀಸನ್ 5 ನಡೆದಿದ್ದು, ನಟ ನಾಗಾರ್ಜುನ್ ನಿರೂಪಕರಾಗಿರೋ ಶೋ ಸಖತ್ ಜನಪ್ರಿಯತೆ ಗಳಿಸಿದೆ. ಈ ಮಧ್ಯೆ ಶೋದಲ್ಲಿ ಸ್ಪರ್ಧಿಯಾಗಿರೋ ನಟಿ ಪ್ರಿಯಾಂಕಾ, ಸಹಸ್ಪರ್ಧಿ ಕಮಿಡಿಯನ್ ಲೋಬೋ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಆದರೆ ಈ ಆರೋಪವನ್ನು ಪ್ರಿಯಾಂಕಾ ಆಯೋಜಕರು ಅಥವಾ ನಿರೂಪಕರ ಬಳಿ ಮಾಡಿಲ್ಲ. ಬದಲಾಗಿ ಸಹ ಸ್ಪರ್ಧಿಗಳ ಬಳಿ ಹೇಳಿಕೊಂಡಿದ್ದಾರೆ. ಶೋ ವೇಳೆ ಹೈದ್ರಾಬಾದ್ ಅಮ್ಮಾಯಿ – ಅಮೇರಿಕ ಬುಲ್ಲೂಡು ಹೆಸರಿನ ಟಾಸ್ಕ್ ನಡೆದಿತ್ತು. ಈ ವೇಳೆ ಸಹಸ್ಪರ್ಧಿ ಲೋಬೋ ನನ್ನನ್ನು ಕೆಟ್ಟದಾಗಿ ಮುಟ್ಟಿ ಸಂಜ್ಞೆ ಮಾಡಿದ ಎಂದು ಪ್ರಿಯಾಂಕಾ ಸಹ ಸ್ಪರ್ಧಿಗಳಾದ ಸಿರಿ ಹಾಗೂ ಕಾಜಲ್ ಬಳಿ ಹೇಳಿಕೊಂಡಿದ್ದಾರೆ.

ಈ ವೇಳೆ ಸಿರಿ ಮತ್ತು ಕಾಜಲ್ ನೀನು ಅವಾಗಲೇ ಪ್ರತಿಭಟಿಸಬೇಕಿತ್ತೆಂದು ಹೇಳಿದ್ದಾರೆ. ಈ ಮಾತುಕತೆ ನಡೆದಿರುವಾಗಲೇ ಅಲ್ಲಿಗೆ ಬಂದ ಲೋಬೋ ಮತ್ತೊಮ್ಮೆ ಪ್ರಿಯಾಂಕಾರನ್ನು ತಬ್ಬಿಕೊಂಡಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರಿಯಾಂಕಾ ಲವ್ ಯೂ ಅಣ್ಣಯ್ಯಾ ಎಂದಿದ್ದಾರೆ.

ಈ ಬೆಳವಣಿಗೆ ಪ್ರೇಕ್ಷಕರಿಗೆ ಅಚ್ಚರಿ ತಂದಿದ್ದು, ಹಾಗಿದ್ದರೇ ಪ್ರಿಯಾಂಕಾ ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿದ್ದಾರಾ ಅಥವಾ ಪ್ರೇಕ್ಷಕರ ಗಮನ ಸೆಳೆಯಲು ಈ ರೀತಿ ಆರೋಪ ಮಾಡಿದ್ರಾ ಎಂಬ ಅನುಮಾನ ಸೃಷ್ಟಿಯಾಗಿದೆ. ವೀಕೆಂಡ್ ಶೋನಲ್ಲಿ ಈ ವಿಚಾರ ಚರ್ಚೆಗೆ ಬರೋ ಸಾಧ್ಯತೆ ಇದೆ.  

(Transwoman contestant Priyanka Singh alleges Lobo touched her inappropriately)

RELATED ARTICLES

Most Popular