ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡಿದ ಸೆಲೆಬ್ರೆಟಿ ಡಿವೋರ್ಸ್ ಜನಮಾನಸದಿಂದ ಮರೆಯಾಗುವ ಮುನ್ನವೇ ತಮಿಳು ಚಿತ್ರರಂಗದಲ್ಲಿ ಮತ್ತೊಂದು ಸೆಲೆಬ್ರೆಟಿ ದಂಪತಿ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು, ಫೇಮಸ್ ನಟನ ಈ ನಿರ್ಧಾರ ಅಭಿಮಾನಿಗಳಿಗೆ ಶಾಕ್ ತಂದಿದೆ. ಅಷ್ಟೇ ಅಲ್ಲ ದೇಶದ ಸಿನಿ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್ (Rajinikanth’s daughter) ಕುಟುಂಬಕ್ಕೂ (Aishwarya Dhanush) ಈ ನ್ಯೂಸ್ ಶಾಕ್ ನೀಡಿದೆ
ಹೌದು, ತಮಿಳಿನ ತಲೈವಿ ಸ್ಟಾರ್ ರಜನಿಕಾಂತ್ ಮಗಳ ಬದುಕಿನಲ್ಲಿ ಬಿರುಕು ಮೂಡಿದೆ. ಪ್ರೀತಿಸಿ ಮದುವೆಯಾದ ರಜನಿಕಾಂತ್ ಪುತ್ರಿ ಐಶ್ವರ್ಯಾ ವಿವಾಹ ವಿಚ್ಛೇಧನದ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಅನಾರೋಗ್ಯದಲ್ಲಿರೋ ರಜನಿಕಾಂತ್ ಗೆ ಮತ್ತಷ್ಟು ಆಘಾತ ಎದುರಾಗಿದೆ. ತಮಿಳಿನ ಸೈಲೆಂಟ್ ಸ್ಟಾರ್ ಖ್ಯಾತಿಯ ನಟಧನುಶ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ.
ಸ್ವತಃ ನಟ ಧನುಶ್ ತಮ್ಮ ಸೋಷಿಯಲ್‌ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ನಾವಿಬ್ಬರೂ 18 ವರ್ಷಗಳಿಂದ ಸ್ನೇಹಿತರಾಗಿ,ದಂಪತಿಗಳಾಗಿ,ಪೋಷಕರಾಗಿ ಸಾಕಷ್ಟು ಉತ್ತಮ ನೆನಪುಗಳನ್ನು ಹೊಂದಿದ್ದೇವೆ. ಆದರೆ ಈಗ ನಮ್ಮಿಬ್ಬರ ದಾರಿ ಬೇರೆಯಾಗಿದೆ. ಹೀಗಾಗಿ ನಾವಿಬ್ಬರು ಪರಸ್ಪರ ಬೇರೆಯಾಗುವ ನಿರ್ಧಾರಕೈಗೊಂಡಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ನಿಮ್ಮ ಬೆಂಬಲ ಇರಲಿ ಹಾಗೂ ನಮ್ಮ ನಿರ್ಧಾರ ಹಾಗೂ ವೈಯಕ್ತಿಕತೆಯನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ಇದೆ ಎಂದು ಧನುಶ್ ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಐಶ್ವರ್ಯಾ ಕೂಡ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರಿಗೂ ತುಂಬ ಪ್ರೀತಿಯ ವಂದನೆ. ಕೆಲವೊಂದಕ್ಕೆ ಕ್ಯಾಪ್ಸನ್ ಅಗತ್ಯವಿರೋದಿಲ್ಲ. ಕೇವಲ ನಿಮ್ಮ ಅರ್ಥೈಸಿಕೊಳ್ಳುವಿಕೆ ಹಾಗೂ ಪ್ರೀತಿ ಮಾತ್ರ ಮುಖ್ಯವಾಗುತ್ತದೆ. ನಿಮ್ಮ ಐಶ್ವರ್ಯ ರಜನಿಕಾಂತ್ ಎಂದು ಬರೆದಿದ್ದಾರೆ. ಆ ಮೂಲಕ ತಮ್ಮ ಹೆಸರಿನ ಕೊನೆಯಲ್ಲಿದ್ದ ಧನುಶ್ ಹೆಸರನ್ನು ಕೈಬಿಟ್ಟಿದ್ದಾರೆ.
🙏🙏🙏🙏🙏 pic.twitter.com/hAPu2aPp4n
— Dhanush (@dhanushkraja) January 17, 2022
ಯಾತ್ರಾ ರಾಜ್ ಹಾಗೂ ಲಿಂಗ್ ರಾಜ್ ಎಂಬ ಇಬ್ಬರು ಮಕ್ಕಳನ್ನು ಹೊಂದಿರುವ ಧನುಶ್ ಹಾಗೂ ಐಶ್ವರ್ಯಾ ದಂಪತಿ ಹಲವು ವರ್ಷಗಳ ಪ್ರೀತಿ ಬಳಿಕ 2004 ರಲ್ಲಿ ಮದುವೆ ಆಗಿದ್ದರು. ಐಶ್ವರ್ಯಾ ರಜನಿಕಾಂತ್ ಧನುಶ್ ಗಾಗಿ 3 ಹಾಗೂ ಕೋಲವೇರಿ ಡಿ ಸಿನಿಮಾ ನಿರ್ಮಿಸಿದ್ದರು . ಈ ಎರಡು ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಗೆದ್ದಿದ್ದಲ್ಲದೇ ಧನುಶ್ ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.
ಇದನ್ನೂ ಓದಿ : ಸೋಷಿಯಲ್ ಮೀಡಿಯಾಕ್ಕೆ ಮತ್ತೇರಿಸಿದ ಸ್ವೀಟಿ : ರಾಧಿಕಾ ಕುಮಾರಸ್ವಾಮಿ ವಿಡಿಯೋ ವೈರಲ್
ಇದನ್ನೂ ಓದಿ : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್
( Aishwarya Dhanush : Rajinikanth’s daughter Aishwarya and actor Dhanush divorce)