11 Vaccine Shots : 11 ಬಾರಿ ಕೊರೊನಾ ಲಸಿಕೆ ಸ್ವೀಕರಿಸಿದ್ದ ವೃದ್ಧನಿಗೆ ಬಿಗ್​ ರಿಲೀಫ್​​

11 Vaccine Shots : ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಬರೋಬ್ಬರಿ 11 ಡೋಸ್​ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದ ಬಿಹಾರದ 84 ವರ್ಷದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಜೈಲುಪಾಲಾಗೋದ್ರಿಂದ ಬಚಾವ್​ ಆಗಿದ್ದಾರೆ. ಭಾರತೀಯ ದಂಡ ಸಂಹಿತೆಯ ವಾರಂಟ್​ ಇಲ್ಲದೇ ಬಂಧಿಸುವ ನಿಬಂಧನೆಯ ಅಡಿಯಲ್ಲಿ ಬಂಧನ ಸಾಧ್ಯವಿಲ್ಲದ ಕಾರಣ ವೃದ್ಧ ಪಾರಾಗಿದ್ದಾರೆ.


84 ವರ್ಷದ ಬ್ರಹ್ಮದೇವ್​ ಮಂಡಲ್​ ಎಂಬವರು ನಕಲಿ ಗುರುತಿನ ಚೀಟಿಗಳನ್ನು ಬಳಕೆ ಮಾಡಿ 11 ಬಾರಿ ಕೋವಿಡ್​ ಲಸಿಕೆಗಳನ್ನು ಸ್ವೀಕಾರ ಮಾಡಿದ್ದಾರೆ. ಇವರಿಗೆ ಸದ್ಯ ರಿಲೀಫ್​ ನೀಡಲಾಗಿದೆ. ಅವರ ವಯಸ್ಸನ್ನು ಪರಿಗಣಿಸಿ ವಾರಂಟ್​ ಇಲ್ಲದೇ ಬಂಧಿಸಲಾಗುವುದಿಲ್ಲ ಎಂದು ಪುರೈನಿ ಸ್ಟೇಷನ್​​​ ಹೌಸ್​ ಆಫೀಸರ್​​ ದೀಪಕ್​ ಚಂದ್ರ ದಾಸ್​ ಹೇಳಿದ್ದಾರೆ.


ಬಿಹಾರ ಪೊಲೀಸರು ಮಾಧೇಪುರ ಜಿಲ್ಲೆಯ ಪುರೈನಿ ಪ್ರದೇಶದ ನಿವಾಸಿಯಾದ ಮಂಡಲ್​ ವಿರುದ್ಧ ಜನವರಿ 9ರಂದು ಕೋವಿಡ್​ ಲಸಿಕೆಯ 11 ಡೋಸ್​ಗಳನ್ನು ಸ್ವೀಕರಿಸಿದ್ದ ಬಗ್ಗೆ ಆರೋಪ ಮಾಡಿದ್ದರು.


ಬ್ರಹ್ಮದೇವ್​ ಮಂಡಲ್​ ವಿವಿಧ ದಿನಾಂಕಗಳು ಹಾಗೂ ವಿವಿಧ ಲಸಿಕಾ ಕೇಂದ್ರಗಳಲ್ಲಿ ವಿವಿಧ ಗುರುತಿನ ಚೀಟಿಯನ್ನು ಬಳಕೆ ಮಾಡಿಕೊಂಡು ಆರೋಗ್ಯ ಕಾರ್ಯಕರ್ತರ ದಾರಿತಪ್ಪಿಸಿದ್ದರು. ಈ ರೀತಿ ಮಾಡಿ ಬರೋಬ್ಬರಿ 11 ಬಾರಿ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2021ರ ಫೆಬ್ರವರಿ 13ರಿಂದ 2022ರ ಜನವರಿ ನಾಲ್ಕನೇ ತಾರೀಖಿನವರೆಗೆ ಬ್ರಹ್ಮದೇವ್​ ಮಂಡಲ್​ ಈ ರೀತಿ ಕಳ್ಳಾಟ ನಡೆಸಿದ್ದಾರೆ ಎನ್ನಲಾಗಿದೆ.


11 ಬಾರಿ ಕೊರೊನಾ ಲಸಿಕೆ ಸ್ವೀಕರಿಸಿದ್ದರೂ ಸಹ ಬ್ರಹ್ಮದೇವ್​ ಮಂಡಲ್​ ಆರೋಗ್ಯದಲ್ಲಿ ಯಾವುದೇ ಏರುಪೇರು ಸಂಭವಿಸಿರಲಿಲ್ಲವಂತೆ. ಅಲ್ಲದೇ ಈ ರೀತಿ ಪದೇ ಪದೇ ಲಸಿಕೆ ಸ್ವೀಕರಿಸಿದೆ ತನ್ನ ಆರೋಗ್ಯ ಸುಧಾರಿಸುತ್ತದೆ ಎಂದು ನಂಬಿ ಈ ರೀತಿ ಮಾಡಿದ್ದಾಗಿ ಬ್ರಹ್ಮದೇವ್​ ಮಂಡಲ್​ ಹೇಳಿದ್ದಾರೆ.

Relief For Bihar Man Who Took 11 Vaccine Shots With Fake ID Cards, Names

ಇದನ್ನು ಓದಿ : Aishwarya Dhanush :ರಜನಿಕಾಂತ್‌ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್‌ ವಿಚ್ಚೇಧನ

ಇದನ್ನೂ ಓದಿ : Samantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್

Comments are closed.