ಶನಿವಾರ, ಏಪ್ರಿಲ್ 26, 2025
HomeCinemaFirefly : ಮಗಳ ಸಿನಿಮಾದಲ್ಲಿ ಶಿವಣ್ಣ ಪಿಜ್ಜಾ ಡೆಲಿವರಿ ಬಾಯ್‌ ..ಹೇಗಿದೆ ಫೈರ್‌ ಫ್ಲೈ ಟ್ರೇಲರ್...

Firefly : ಮಗಳ ಸಿನಿಮಾದಲ್ಲಿ ಶಿವಣ್ಣ ಪಿಜ್ಜಾ ಡೆಲಿವರಿ ಬಾಯ್‌ ..ಹೇಗಿದೆ ಫೈರ್‌ ಫ್ಲೈ ಟ್ರೇಲರ್ ?

Firefly : ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ ಫ್ಲೈ ಸಿನಿಮಾ ಟೀಸರ್‌ ಹಾಗೂ ಹಾಡುಗಳ ಮೂಲಕ ಈಗಾಗಲೇ ಇಂಡಸ್ಟ್ರೀಯಲ್ಲಿ ಬಜ್‌ ಕ್ರಿಯೇಟ್‌ ಮಾಡಿದೆ.

- Advertisement -

Firefly : ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಫೈರ್‌ ಫ್ಲೈ ಸಿನಿಮಾ ಟೀಸರ್‌ ಹಾಗೂ ಹಾಡುಗಳ ಮೂಲಕ ಈಗಾಗಲೇ ಇಂಡಸ್ಟ್ರೀಯಲ್ಲಿ ಬಜ್‌ ಕ್ರಿಯೇಟ್‌ ಮಾಡಿದೆ. ಅಣ್ಣಾವ್ರ ಜನ್ಮದಿನ ಅಂದ್ರೆ ಇದೇ ತಿಂಗಳ 24ಕ್ಕೆ ತೆರೆಗೆ ಬರ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರ ಭಾಗವಾಗಿ ನಿನ್ನೆ ಶಿವಣ್ಣನ ನಿವಾಸದಲ್ಲಿ ಟ್ರೇಲರ್‌ ಬಿಡುಗಡೆ ಕಾರ್ಯ್ರಕಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫೈರ್‌ ಫ್ಲೈ ಇಡೀ ತಂಡ ಹಾಗೂ ಶಿವಣ್ಣ ದಂಪತಿ ಭಾಗಿಯಾಗಿ ಹೊಸಪ್ರತಿಭೆಗಳ ಕನಸಿಗೆ ಬೆನ್ನುತಟ್ಟಿದ್ದರು.

ಟ್ರೇಲರ್‌ ಬಿಡುಗಡೆ ಬಳಿಕ ಶಿವಣ್ಣ ಮಾತನಾಡಿ, ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಕಥೆ ಕೇಳಿದೆ ವಿಭಿನ್ನವಾಗಿತ್ತು. ಕೇಳಿದ ತಕ್ಷಣ ಹೃದಯಕ್ಕೆ ಸೇರಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಬರೀ ಫೈಟ್‌, ಡ್ಯುಯೇಟ್‌ ಸಾಂಗ್‌ ಮಾಡಬಹುದು. ಆದರೆ ಫೈರ್‌ ಫ್ಲೈ ವ್ಯಾಲ್ಯೂ ಸಬ್ಜೆಕ್ಟ್ ಇರುವ ಚಿತ್ರ. ವಂಶಿ ಒಳ್ಳೆ ಕಥೆ ಮಾಡಿದ್ದಾರೆ. ಒಳ್ಳೆ ತಂಡ ಚಿತ್ರಕ್ಕೆ ಕೆಲಸ ಮಾಡಿದೆ. ಚರಣ್ ರಾಜ್‌ ಸಂಗೀತ ಬಗ್ಗೆ ಮಾತನಾಡುವ ಆಗಿಲ್ಲ. ನಮ್ಮ ಕನ್ನಡದಲ್ಲಿಯೂ ಹೊಸ ತಂಡ ಬರಬೇಕು. ಹೊಸ ಅಲೆ ಬರಬೇಕು ಎಂಬ ಉದ್ದೇಶದಿಂದ ನನ್ನ ಆಸೆ. ಅವರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಕರೆದುಕೊಂಡು ಹೋಗಬೇಕು. ಸಿನಿಮಾ ಹೇಗೆ ಹೋಗುತ್ತದೆ. ಬಿಡುತ್ತದೆ ಅದು ಎರಡನೇಯದ್ದು. ಆದರೆ ನಮ್ಮ ಪ್ರಯತ್ನ ಇರಬೇಕು. ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಹೊಸ ಹುಡುಗರು ನಮ್ಮನ್ನು ಇನ್ನಷ್ಟು ಯಂಗ್‌ ಆಗಿ ತೋರಿಸಿದ್ದಾರೆ.

also read : ಜೀಬ್ರಾ ಸಿನಿಮಾ ಪ್ರೀ-ರಿಲೀಸ್ ಇವೆಂಟ್ : ಡಾಲಿ ಧನಂಜಯ್-ಸತ್ಯದೇವ್ ಚಿತ್ರ ಸಲಗ ಸಾಥ್

Trailer release of the movie 'Firefly' produced by Nivedita Shivaraj kumar

ಗೀತಾ ಶಿವರಾಜ್‌ ಕುಮಾರ್‌ ಮಾತನಾಡಿ, ಹೊಸ ತಂಡ ಹೊಸ ಪ್ರಯತ್ನ ಮಾಡಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ಕೊಡಬೇಕು. ಈ ಚಿತ್ರವನ್ನು ಕುಮಾರ್‌ ಅವರು ಡಿಸ್ಟ್ರೀಬ್ಯೂಟ್‌ ಮಾಡುತ್ತಿದ್ದಾರೆ. ಅದಕ್ಕೆ ತುಂಬಾ ಧನ್ಯವಾದ. ವಂಶಿ ಹೇಳಿದ ಕಥೆ ಕೇಳಿ ಅವಳಿಗೆ ಅವರ ತಂದೆಗೂ ಇಷ್ಟವಾಯ್ತು. ಅದು ಈಗ ಇಲ್ಲಿವರೆಗೂ ಬಂದು ನಿಂತಿದೆ.

ನಿರ್ಮಾಪಕಿ ನಿವೇದಿತಾ ಶಿವರಾ ಕುಮಾರ್‌, ಇದು ನನ್ನ ಮೊದಲ ಸಿನಿಮಾ. ತಾತನ ಹುಟ್ಟುಹಬ್ಬದ ದಿನ ಬರುತ್ತಿರುವುದು ಬಹಳ ಖುಷಿ ಇದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ನಾವು ಅದಕ್ಕೆ ಒಳ್ಳೆ ಸಿನಿಮಾ ಕೊಟ್ಟರೆ ಖಂಡಿತ ಬರುತ್ತಾರೆ. ಏಪ್ರಿಲ್ 24 ಸಿನಿಮಾ ರಿಲೀಸ್‌ ಆಗುತ್ತಿದೆ. ಎಲ್ಲರೂ ಥಿಯೇಟರ್‌ ನಲ್ಲಿಯೇ ಫೈರ್‌ ಫ್ಲೈ ಸಿನಿಮಾ ನೋಡಿ ಎಂದರು.

Trailer release of the movie 'Firefly' produced by Nivedita Shivaraj kumar

ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್‌ ಫ್ಲೈ ಸಿನಿಮಾದಲ್ಲಿ ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. . ಜಯ್ ರಾಮ್ ಚಿತ್ರದ ಸಹ-ನಿರ್ದೇಶಕ. ಅಭಿಲಾಷ್ ಕಳತ್ತಿ ಅವರ ಕ್ಯಾಮರಾ ಕೈಚಳಕವಿದ್ದು , ಚರಣ್ ರಾಜ್ ಸಂಗೀತ ಸಿನಿಮಾಕ್ಕಿದೆ. ಜೊತೆಗೆ ರಘು ನಿಡುವಳ್ಳಿ ಅವರ ಸಂಭಾಷಣೆಯಲ್ಲಿ ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ.

Also Read : ಮೇಘನಾ ರಾಜ್ ಸರ್ಜಾ ಹೊಸ ಮನೆ : ಚಿರು ಮನೆ ತೊರೆಯೋ ನಿರ್ಧಾರ ಮಾಡಿದ್ಯಾಕೆ ಗೊತ್ತಾ ?

ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್‌ ಫ್ಲೈ ಸಿನಿಮಾ ಏಪ್ರಿಲ್‌ 24ಕ್ಕೆ ತೆರೆಗೆ ಬರ್ತಿದೆ. ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಆದರೆ, ಕಿಂಗ್ಸ್ ಅನ್ನೋದು ಇಲ್ಲಿ ಶಿವಣ್ಣನಿಗೆ ಸೂಟೇಬಲ್ ಆಗಿದೆ. ಶಿವಣ್ಣ ಕಿಂಗ್ ಅಲ್ವೇ? ಅದಕ್ಕೇನೆ ಈ ಹೆಸರು ಇಟ್ಟಂತೇನೆ ಇದೆ. ಆದರೆ, ಶಿವಣ್ಣ ಇಂತಹ ರೋಲ್ ಯಾಕೆ ಮಾಡಿದ್ರು ಅನ್ನೋದನ್ನು ನೀವು ಥಿಯೇಟರ್‌ ನಲ್ಲಿಯೇ ನೋಡಬೇಕು.

Trailer release of the movie ‘Firefly’ produced by Nivedita Shivaraj kumar

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular