ನಟಿಯರು ನಟನೆ, ಸಿನಿಮಾದ ಪಾತ್ರ, ಪೋಟೋಶೂಟ್ ಮೂಲಕ ಸುದ್ದಿಯಾಗೋದು ಕಾಮನ್. ಆದರೆ ಈ ನಟಿ ಮಾತ್ರ ಪೋಟೋಶೂಟ್ ಗಿಂತ ಹೆಚ್ಚು ಹಾಕೋ ಬಟ್ಟೆಯಿಂದಲೇ ಸದ್ದು ಮಾಡ್ತಿದ್ದಾರೆ. ದೇವಸ್ಥಾನ, ಮನೆ, ಪಾರ್ಟಿ, ಶೂಟಿಂಗ್ ಎಲ್ಲೇ ಹೋಗಲಿ ಈ ಹೆಣ್ಮಗಳು ಹಾಕೋ ಬಟ್ಟೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೇ ಇರುತ್ತೆ. ಹೀಗೆ ವೈರೈಟಿ ಹಾಗೂ ವಿಭಿನ್ನ ಬಟ್ಟೆಯ ಮೂಲಕವೇ ಸುದ್ದಿಯಾಗೋ ನಟಿ ಮತ್ಯಾರೂ ಅಲ್ಲ ಊರ್ಫಿ ಜಾವೇದ್ (Urfi Javed Plastic Dress).
ಎದೆಯ ಬಹುಭಾಗ ಕಾಣಿಸೋವಂತ ಜಾಕೆಟ್, ಕರ್ಚೀಪ್ ಕತ್ತರಿಸಿದಂತಹ ಬ್ಲೌಸ್, ಅಲ್ಲಲ್ಲಿ ಹರಿದಂತೆ ಕಾಣ್ತಿದ್ದ ಜಾಕೆಟ್ ಹೀಗೆ ಊರ್ಫಿ ಒಂದೊಂದು ಅವತಾರವೂ ಒಂದೊಂದು ವಿವಾದ. ಸದಾ ಹಾಕೋ ಬಟ್ಟೆ ವಿಚಾರಕ್ಕೆ ನೆಟ್ಟಿಗರ ಗಮನ ಸೆಳೆದು ಸೋಷಿಯಲ್ ಮೀಡಿಯಾದ ಅಟೆನ್ಸನ್ ಗಿಟ್ಟಿಸಿಕೊಳ್ಳೋ ಊರ್ಫಿ ಜಾವೇದ್ ಈ ಭಾರಿ ಮೈಗೆಲ್ಲ ಪ್ಲ್ಯಾಸ್ಟಿಕ್ ಕವರ್ ಸುತ್ತಿಕೊಂಡು ಕ್ಯಾಮರಾ ಎದುರು ಬಂದಿದ್ದಾರೆ. ಕೇವಲ ಬಟ್ಟೆ ಮಾತ್ರವಲ್ಲ ತನ್ನ ಚಿತ್ರ ವಿಚಿತ್ರ ನಡುವಳಿಕೆಯಿಂದಲೂ ಊರ್ಫಿ ಟ್ರೋಲ್ ಪ್ರಿಯರಿಗೆ ಆಹಾರವಾಗುತ್ತಲೇ ಇದ್ದಾರೆ. ಈ ಭಾರಿ ಕಪ್ಪು ಉಡುಗೆ ತೊಟ್ಟ ಊರ್ಫಿ ಹೈಹಿಲ್ಡ್ ಧರಿಸಿ ಬ್ಯಾಲೆನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ.
ಇನ್ನೇನು ಬಿದ್ದೇ ಹೋಗ್ತಾರೇ ಅನ್ನೋ ಸಂದರ್ಭದಲ್ಲಿ ಊರ್ಫಿ ಚೇತರಿಸಿಕೊಂಡು ಮೇಲೆ ಎದ್ದಿದ್ದಾರೆ. ಈ ವೀಡಿಯೋವನ್ನು ಸ್ವತಃ ಊರ್ಫಿ ಕೂಡ ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದಾರೆ. ಈ ಭಾರಿ ಊರ್ಫಿ ಹಾಕಿರೋ ಡ್ರೆಸ್ ವಿಚಿತ್ರವಾಗಿದ್ದು ಜನರು ಕಸ ತುಂಬಿ ಎಸೆಯೋಕೆ ಬಳಸೋವಂತ ಕವರ್ ನ್ನು ಜೋಡಿಸಿ ಅಲ್ಲಲ್ಲಿ ಕತ್ತರಿಸಿ ಹೊಲಿದಂತಿದೆ. ಈ ವಿಡಿಯೋ ನೋಡಿರೋ ಜನರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡ್ತಿದ್ದು, ಇದೇನು ಪ್ಲಾಸ್ಟಿಕ್ ಕವರ್ ಸುತ್ತಿಕೊಂಡಿದ್ದೀರಾ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು ನಿಮ್ಮ ವಾರ್ಡ್ ರೋಬ್ ಇಷ್ಟು ಕೆಟ್ಟದಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ನಿಮಗೆ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಒಂದು ಟ್ರೈನಿಂಗ್ ಅಗತ್ಯವಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕರಣ್ ಜೋಹರ್ ಓಟಿಟಿ ಬಿಗ್ ಬಾಸ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದ ಊರ್ಫಿ ಜಾವೇದ್ ತನ್ನ ಹುಚ್ಚಾಟಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದು ಕೆಲದಿನಗಳ ಹಿಂದೆಯಷ್ಟೇ ಮುಸ್ಲಿಂ ಯುವಕನನ್ನು ಮದುವೆಯಾಗಲ್ಲ ಎನ್ನೋ ಮೂಲಕ ಗಮನ ಸೆಳೆದಿದ್ದರು.
Black pic.twitter.com/JxxMPlRLzu
— Urfi Javed (@urf7i) February 9, 2022
ಇದನ್ನೂ ಓದಿ : ಬೈಟ್ ಟೂ ಲವ್ ಗಾಗಿ ಸೌಟು ಹಿಡಿದ ಶ್ರೀಲೀಲಾ : ದಾವಣಗೆರೆಯಲ್ಲಿ ದೋಸೆ ಹಾಕಿದ ಭರ್ಜರಿ ಬೆಡಗಿ
ಇದನ್ನೂ ಓದಿ : ಪ್ಲಸ್ ಸೈಜ್ ಮಾಡೆಲ್ ಎಲ್ಲಿಲ್ಲದ ಬೇಡಿಕೆ: ಹಸೀಕ್ವಾಜೀ ಹಸಿಬಿಸಿ ಪೋಟೋ ವೈರಲ್
( Troll again to Urfi Javed, she wear plastic dress)