Check Your Voter ID: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? SMS ಅಥವಾ ಆನ್‌ಲೈನ್ ಮೂಲಕ ಚೆಕ್ ಮಾಡುವುದು ಹೀಗೆ

ಯಾವುದೇ ಚುನಾವಣೆಯಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಮುನ್ನ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಪರಿಶೀಲನೆ ನಡೆಸಬೇಕು. ಅದಕ್ಕೂ ಮುನ್ನ ವೋಟರ್ ಐಡಿಯ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಆದರೆ ಅದಕ್ಕೂ ಮುನ್ನ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ನೀವು ಹೊಂದಿರಬೇಕು. ಮತ್ತು ಅದು ಸರಿಯಾದ ಅವಸ್ಥೆಯಲ್ಲಿದೆಯೇ ಎಂದು ಪರಿಶೀಲಿಸಬೇಕು. ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ನೀವು ಚುನಾವಣಾ ಕಚೇರಿಗೆ ಹೊಗಬೇಕೆಂದಿಲ್ಲ. ನೀವು ಆನ್‌ಲೈನ್‌ನಲ್ಲೇ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಅಲ್ಲದೆ ಚುನಾವಣೆಯಲ್ಲಿ ಮತದಾನ ಮಾಡಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲನೆಯನ್ನು ಸಹ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ((Check Your Voter ID)) ಮಾಡಬಹುದು.

ನೀವು ಮತದಾನ ಮಾಡಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಮುಂದಿನ ವೆಬ್‌ಸೈಟ್‌ಗೆ ಲಾಗಿನ್ ಆಗಿ https://electoralsearch.in/

ವೆಬ್‌ಸೈಟ್ ಮೂಲಕವೊಂದೇ ಅಲ್ಲದೇ ಚುನಾವಣಾ ಆಯೋಗವು ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೆ ಎಂದು ಖಚಿತಪಡಿಸಿಕೊಳ್ಲಲು ಸಹಾಯವಾಣಿಯ ವ್ಯವಸ್ಥೆಯನ್ನು ಸಹ ಮಾಡಿದೆ. ಇಡೀ ದೇಶದಾದ್ಯಂತ ಮತದಾರರು 1950 ನಂಬರ್‌ನ ಸಹಾಯವಾಣಿಯನ್ನು ಸಂಪರ್ಕಿಸಿ ತಮ್ಮ ಹೆಸರು ಮತದಾನದ ಪಟ್ಟಿಯಲ್ಲಿ ಇದೆಯೆ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಬಹುದು. ಅಲ್ಲದೇ ತಮ್ಮ ವೋಟರ್ ಐಡಿ ಅಥವಾ ಮತದಾನದ ಗುರುತಿನ ಚೀಟಿಯ ಬಗ್ಗೆ ಯಾವುದೇ ಅನುಮಾನ, ಗೊಂದಲ, ಸಮಸ್ಯೆಗಳಿದ್ದಲ್ಲಿ ಸಹ ಈ ಸಹಾಯವಾಣಿಗೆ ಕರೆಮಾಡಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಭೇಟಿ ನೀಡಿ—https://www.nvsp.in/. ಈ ವೆಬ್‌ಸೈಟ್ ಮೂಲಕವೂ ನೀವು ನಿಮ್ಮ ವೋಟಿಂಗ್ ಕಾರ್ಡ್‌ ಕುರಿತು ಖಚಿತತೆಯನ್ನು ಪಡೆದುಕೊಳ್ಳಬಹುದು.

ಆನ್​ಲೈನ್​ನಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ? ಹೇಗೆ ಚೆಕ್ ಮಾಡುವುದು?
ಎಲ್ಲಕ್ಕಿಂತ ಮೊದಲು ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ವೆಬ್‌ಸೈಟ್‌ಗೆ ತೆರಳಬೇಕು https://www.nvsp.in/
– ಸರ್ಚ್ ಇನ್ ಎಲೆಕ್ಟೋರಲ್ ರೋಲ್ ಎಂಬ ಆಯ್ಕೆ ನಿಮಗೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
– ನಂತರ ಹೊಸ ವೆಬ್‌ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕಾಣಿಸುವ ಆಪ್ಶನ್‌ಗಳಲ್ಲಿ ನಿಮ್ಮ ಸಂಪೂರ್ನ ವಿವರಗಳನ್ನು ನಮೂದಿಸಬೇಕು.

– ಉದಾಹರಣೆಗೆ: ಹೆಸರು, ತಂದೆಯ ಅಥವಾ ಗಂಡನ ಹೆಸರು, ವಯಸ್ಸು, ಹುಟ್ಟಿದ ದಿನಾಂಕಗಳನ್ನು ನಮೂದಿಸಬೇಕು. ನಂತರ ನೀವು ನಿಮ್ಮ ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳ ವಿವರಗಳನ್ನು ನಮೂದಿಸಬೇಕು.
– EPIC ಸಂಖ್ಯೆಯ ಮೂಲಕವೂ ನೀವು ಹುಡುಕಬಹುದಾಗಿದೆ. ಈ ವೆಬ್‌ಸೈಟ್‌ನಲ್ಲಿ ನಿಮ್ಮ EPIC ಸಂಖ್ಯೆಯನ್ನು ದಾಖಲಿಸಬೇಕು.
– ಈಗ ಕಾಣಿಸುವ ಕ್ಯಾಪ್ಚಾ ಕೋಡ್ (Captcha Code) ಅಲ್ಲಿ ಟೈಪ್ ಮಾಡುವ ಮೂಲಕ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಖಚಿತಪಡಿಸಬೇಕು.
– ವೆಬ್ ಪೇಜ್ ನಿಮಗೆ ಮತದಾರರ ನೋಂದಣಿಯ ವಿವರಗಳು ಕಾಣಿಸುತ್ತವೆ.

ಮೆಸೇಜ್ ಮೂಲಕವೂ ಮಾಹಿತಿ ತಿಳಿದುಕೊಳ್ಳಿ

ನಿಮ್ಮ ಮೊಬೈಲ್‌ನ ಟೆಕ್ಸ್ಟ್‌ ಮೆಸೆಜ್ EPIC ಎಂದು ಟೈಪಿಸಿ
– ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿ
– ಅದನ್ನು 9211728082 ಅಥವಾ 1950ಗೆ ಸೆಂಡ್ ಮಾಡಿ
– ಪೋಲಿಂಗ್ ಸ್ಟೇಷನ್ ಸಂಖ್ಯೆ, ಹೆಸರನ್ನು ನಿಮ್ಮ ಫೋನ್‌ನಲ್ಲಿ ಕಾಣಿಸುತ್ತದೆ
– ಆದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೋ ರೆಕಾರ್ಡ್‌ ಫೌಂಡ್ (No Record Found) ಎಂಬ ಮೆಸೆಜ್ ನಿಮಗೆ ಬರುತ್ತದೆ ಎಂಬ ಉತ್ತರವನ್ನು ಸ್ವೀಕರಿಸುತ್ತೀರಿ.

ಇದನ್ನೂ ಓದಿ: Best 365 Day Plans: ಯಾವ ಸಿಮ್‌ನ ಯಾವ ರೀಚಾರ್ಜ್ ಬೆಸ್ಟ್? ಕಡಿಮೆ ದುಡ್ಡಿಗೆ ಹೆಚ್ಚು ಲಾಭ ಕೊಡುವ ಇಂಟರ್‌ನೆಟ್ ಪ್ಯಾಕ್‌ಗಳಿವು

(Check Your Voter ID in Online and SMS)

Comments are closed.