ಕಿರುತೆರಯಲ್ಲಿ ಹೊಸ ಹೊಸ ಧಾರಾವಾಹಿಗಳ ನಡುವೆ ದಿನದಿಂದ ದಿನಕ್ಕೆ ಸ್ಪರ್ಧೆಗಳು ಹೆಚ್ಚಾಗ ತೊಡಗಿವೆ. ನಾವು ನಂಬರ್ ಒನ್ ಸ್ಥಾನ ಪಡೆಯಬೇಕು ಎಂದು ಜಿದ್ದಿಗೆ ಬಿದ್ದಂತೆ ಹೊಸ ಹೊಸ ತಿರುವುಗಳನ್ನು ಕೊಡುತ್ತಾ ಮುಂದೆ ಸಾಗುತ್ತಿವೆ. ಜೀ ಕನ್ನಡ ಮತ್ತು ಕಲರ್ಸ್ ಕನ್ನಡ, ಉದಯ ಟಿವಿ, ಕಲರ್ಸ್ ಸೂಪರ್, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಲವಾರು ಪ್ರೇಕ್ಷಕರ ಮನಸನ್ನು ಗೆದ್ದಿವೆ. ಇನ್ನೂ ಸೋಶಿಯಲ್ ಮೀಡಿಯಾದ ಹವಾ ಜೊತೆಗೆ ಜನರನ್ನು ಯಾವ ಧಾರಾವಾಹಿಗಳು ಮನಸೊರೆಗೊಂಡು ಹೆಚ್ಚಿನ ಟಿಆರ್‌ಪಿ ಗಳಿಸಿವೆ (TRP rating of serials) ಎನ್ನುವ ಕುತೂಹಲ ಮೂಡಿಸಿದೆ. ಕಳೆದ ವಾರದ ಟಿಆರ್‌ಪಿ ಲಿಸ್ಟ್ ಬಿಡುಗಡೆಯಾಗಿದ್ದು ಕೆಲ ಧಾರವಾಹಿಗಳ ಸ್ಥಾನ ಅದಲು ಬದಲಾಗಿದೆ. ಹೀಗಾಗಿ ಧಾರಾವಾಹಿಗಳ ಮೇಳ ವೀಕ್ಷಕರ ಒಲವು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಹಾಗೆಯೇ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಿದೆ.
ಅಗ್ರಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’
ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ‘ಮಕ್ಕಳು ಧಾರಾವಾಹಿ’ ಟಾಪ್ ಒನ್ ಸ್ಥಾನದಲ್ಲಿ ಇದೆ. ಮೂವರು ಹೆಣ್ಣು ಮಕ್ಳಳು ಎಂದು ಗಂಡ ಬಿಟ್ಟು ಹೋದರು ಛಲದಿಂದ ಅವರು ಸಾಕಿ ಸಲುಹಿದ್ದಾಳೆ ಪುಟ್ಟಕ್ಕ. ಇದು ನೋಡುಗರಿಗೆ ತಮ್ಮದೇ ಕಥೆ ಅಥವಾ ನಮ್ಮ ಸುತ್ತಮುತ್ತಲಿನ ಕಥೆ ಎನ್ನುವು ಥರ ಮೂಡಿ ಬರುತ್ತಿದೆ. ಇದೀಗ ಪುಟ್ಟಕ್ಕ ತನ್ನ ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ಇಡೀ ಹಳ್ಳಿಯ ತುಂಬಾ ಮನೆ ಮಾಡಿದೆ. ಈ ಕಡೆ ಸ್ನೇಹ ಕಂಠಿ ಪ್ರೀತಿ ಸಹ ಚಿಗುರಿದೆ. ಪುಟ್ಟಕ್ಕನ ಮೆಸ್ ಮೇಲೆ ರಾಜಿ ಕಣ್ಣು ಬಿದ್ದಿದೆ. 9.9 ಟಿಆರ್‌ಪಿ ಪಡೆದು ಮೊದಲ ಸ್ಥಾನವನ್ನು ಪುಟ್ಟಕ್ಕನ ಮಕ್ಕಳು ಪಡೆದುಕೊಂಡಿದೆ.
2ನೇ ಸ್ಥಾನದಲ್ಲಿ ‘ಗಟ್ಟಿಮೇಳ’
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಸೀರಿಯಲ್ ಎರಡನೇ ಸ್ಥಾನದಲ್ಲಿ ಇದೆ. ಹೇಗೋ ಜೈಲುಪಾಲಾಗಿದ್ದ ಅಮೂಲ್ಯಳ ಅಪ್ಪನನ್ನು ವೇದಾಂತ್ ಬಿಡಿಸಿ ಅಮೂಲ್ಯ ಕುಟುಂಬವನ್ನು ಪಾರು ಮಾಡಿದ್ದಾನೆ. ಈ ವಿಲನ್ ಯಾರು, ಯಾಕೆ ಅವನು ಈ ರೀತಿಯಾಗಿ ಮಾಡುತ್ತಿದ್ದಾನೆ ಎಂಬುದನ್ನು ಕಂಡು ಹಿಡಿಯಲು ವೇದಾಂತ್ ಪ್ಲ್ಯಾನ್ ಮಾಡಿದ್ದಾನೆ. ಹಾಗಾಗಿ ಧಾರಾವಾಹಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದು 8.8 ಟಿಆರ್‌ಪಿಯನ್ನು ಪಡೆದಿದೆ.
3ನೇ ಸ್ಥಾನಕ್ಕೇರಿದ ‘ಹಿಟ್ಲರ್ ಕಲ್ಯಾಣ’
ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯನ್ನು ಹಿಂದೆ ಹಾಕಿದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಟಾಪ್ 3 ಸ್ಥಾನವನ್ನು ಪಡೆದುಕೊಂಡಿದೆ. ಈಗ ಎಜೆ, ಲೀಲಾಳನ್ನು ಪ್ರೀತಿ ಮಾಡಲು ಶುರು ಮಾಡಿದ್ದಾನೆ. ಈ ಕಡೆ ಲೀಲಾ ಅತ್ತೆಯ ದರ್ಪವನ್ನು ಸೊಸೆಯಂದಿರಿಗೆ ಅರ್ಥ ಮಾಡಿಸುತ್ತಿದ್ದಾಳೆ. ಇದು 8.1 ಟಿಆರ್‌ಪಿಯನ್ನು ಪಡೆದಿದೆ.
4ನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’
ಮೂರನೇ ಸ್ಥಾನವನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದ್ದ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗೆ ಕಳೆದ ವಾರ ಹಿನ್ನಡೆ ಆಗಿದೆ. ಕೊಂಚ ಕೆಳಗೆ ಇಳಿದು 4ನೇ ಸ್ಥಾನವನ್ನು ಪಡೆದುಕೊಂಡಿದೆ. ಎರಡು ಕುಟುಂಬಗಳು ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಇದು ಟಿಆರ್‌ಪಿಯಲ್ಲಿ 7.7ನ್ನು ಪಡೆದುಕೊಂಡಿದೆ.
ಇದನ್ನೂ ಓದಿ : Director SK Bhagavan: ಜೀವನದ ಅಧ್ಯಾಯ ಮುಗಿಸಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್
ಇದನ್ನೂ ಓದಿ : ಸ್ಯಾಂಡಲ್‌ವುಡ್ ಸಿನಿಪಯಣದಲ್ಲಿ 37 ವರ್ಷ ಪೂರೈಸಿದ ನಟ ಶಿವರಾಜ್‌ಕುಮಾರ್
ಇದನ್ನೂ ಓದಿ : ನಟ ದರ್ಶನ ಪತ್ನಿ ಆಕ್ರೋಶಕ್ಕೆ ಪ್ರತಿಕ್ರಿಯೇ ನೀಡದೇ ಪೋಸ್ಟ್ ಡಿಲೀಟ್ ಮಾಡಿದ ನಟಿ ಮೇಘಾ ಶೆಟ್ಟಿ
ಇನ್ನುಳಿದಂತೆ ಟಾಮ್ ಬಾಯ್ ‘ಸತ್ಯ’ ಟಾಪ್ 5ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದು 6.5 ಟಿಆರ್‌ಪಿ ಪಡೆದುಕೊಂಡಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಭಾಗ್ಯಲಕ್ಷ್ಮೀ’ಗೆ 6ನೇ ಸ್ಥಾನ, ‘ಗೀತಾ’ ಧಾರಾವಾಹಿಗೆ 7ನೇ ಸ್ಥಾನ, ‘ಜೊತೆ ಜೊತೆಯಲಿ’ ಹಾಗೂ ತ್ರಿಪುರ ಸುಂದರಿ ಧಾರಾವಾಹಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. ‘ತ್ರಿಪುರ ಸುಂದರಿ’ 8ನೇ ಸ್ಥಾನ, ರಾಮಾಚಾರಿಗೆ 9 ಸ್ಥಾನದಲ್ಲಿದ್ದರೆ 10ನೇ ಸ್ಥಾನದಲ್ಲಿ ಲಕ್ಷಣ, ಕೆಂಡಸಂಪಿಗೆ ಧಾರಾವಾಹಿಗಳು ಪಡೆದಿವೆ. ಇನ್ನು ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ನೋಡಬೇಕಿದೆ.
TRP rating of serials: TRP rating details of Kannada serials: Who is the first place? Who has the last place?