Landslide in Brazil: ಬ್ರೆಜಿಲ್‌ನಲ್ಲಿ ಭೂಕುಸಿತ 24 ಮಂದಿ ಸಾವು

ಬ್ರೆಜಿಲ್:‌ (Landslide in Brazil) ಪ್ರದೇಶದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಸಂಭವಿಸಿದ್ದು, ಮಳೆಯ ಕಾರಣ ಭೂಕುಸಿತ ಸಂಭವಿಸಿದೆ. ಈ ವೇಳೆ ಮಣ್ಣಿನ ಗುಡ್ಡ ಕುಸಿದು 24 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮ‍ಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ಹೊರ ತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ.

ಪ್ರದೇಶದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಸಂಭವಿಸಿದ್ದು, ಮಳೆಯ ಕಾರಣ ಭೂಕುಸಿತ ಸಂಭವಿಸಿದೆ. ಈ ವೇಳೆ ಮಣ್ಣಿನ ಗುಡ್ಡ ಕುಸಿದು 24 ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ ಶ್ರೀಮಂತ ರಾಜ್ಯ ಸಾವ್‌ ಪಾಲೊ ಪ್ರಕಾರ, ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 566 ಮಂದಿ ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗುಡ್ಡ ಕುಸಿತದಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹವಾಮಾನ ಇಲಾಖೆ ವರದಿ ಪ್ರಕಾರ ಸಾವ್‌ ಪಾಲೊ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದ್ದು, ಇದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳು ಇವೆ.

ಇನ್ನೂ ಬ್ರೆಜಿಲ್‌ನ ಕಾರನಿವಲ್‌ ಸಂಭ್ರಮಾಚರಣೆಗೆ ತೆರಳುತ್ತಿದ್ದವರು ಇದರಲ್ಲಿ ಸಿಲುಕಿರುವ ಸಾಧ್ಯತೆಯಿದ್ದು, ಅವರನ್ನು ಸಂಪರ್ಕಿಸಲಾಗುತ್ತಿದೆ ಎಂದು ವರದಿಯಾಗಿದೆ. ಸರಕಾರ ಈಗಾಗಲೇ ನಿರಾಶ್ರಿತರ ಮತ್ತು ಮೃತ ಹೊಂದಿದವರ ಕುಟುಂಬದ ಸಂಪರ್ಕದಲ್ಲಿದ್ದು, ಸಚಿವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈಗಾಗಲೇ ನಗರದ ಮರು ನಿಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಕನ್ಯಾಶ್ರಮದಲ್ಲಿ ಮಧ್ಯಾಹ್ನದ ಊಟ ಸೇವಿಸಿದ 10ನೇ ತರಗತಿ ವಿದ್ಯಾರ್ಥಿನಿ ಸಾವು: 25 ಮಂದಿ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Panna accident: ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: ಕೇರಳದ 16 ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : ಹಿಂಸಾಚಾರಕ್ಕೆ ತಿರುಗಿದ ಶಿವರಾತ್ರಿ ಆಚರಣೆ:ಎರಡು ಗುಂಪುಗಳ ನಡುವೆ ಘರ್ಷಣೆ: 14 ಮಂದಿಗೆ ಗಾಯ

Landslide in Brazil: 24 people died in a landslide in Brazil

Comments are closed.