ಬುಧವಾರ, ಏಪ್ರಿಲ್ 30, 2025
HomeCinemaಉಪಾಧ್ಯಕ್ಷರಿಗೆ “ಹುಡುಗಿ” ಬೇಕಂತೆ….! ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನ…!!

ಉಪಾಧ್ಯಕ್ಷರಿಗೆ “ಹುಡುಗಿ” ಬೇಕಂತೆ….! ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನ…!!

- Advertisement -

ಸ್ಯಾಂಡಲ್ ವುಡ್ ನಲ್ಲಿ ತಮ್ಮ ಹಾವ-ಭಾವ ಹಾಗೂ ಅಭಿನಯದ ಮೂಲಕ ಹಾಸ್ಯನಟರಾಗಿ ನೆಲೆನಿಂತ ಚಿಕ್ಕಣ್ಣ ಈಗ ಹೀರೋ ಆಗಲು ಹೊರಟಿದ್ದಾರೆ. ಉಪಾಧ್ಯಕ್ಷರಾಗಿ ಪ್ರಮೋಶನ್ ಪಡೆದಿರೋ ಚಿಕ್ಕಣ್ಣ ಹುಡುಗಿ ಹುಡುಕಾಟದಲ್ಲಿದ್ದಾರೆ. ಅರೇ ಇದೇನು ಚಿತ್ರದಲ್ಲಿ ಹೀರೋ ಆಗ್ತಿದ್ದಂಗೆ ಮದುವೆ ಆಗೋಕೆ ಹೊರಟ್ರಾ ಚಿಕ್ಕಣ್ಣ ಅಂತಿದ್ದೀರಾ…. ಚಿಕ್ಕಣ್ಣ ಹುಡುಗಿ ಹುಡುಕತಾ ಇರೋದು ಮದುವೆಗಲ್ಲ…! ಬದಲಾಗಿ ಸಿನಿಮಾ ನಾಯಕಿ ಪಾತ್ರಕ್ಕೆ.

ಹೌದು ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾಗೆ ನಾಯಕಿ ಹುಡುಕಾಟದಲ್ಲಿದೆ ಚಿತ್ರತಂಡ. ಇದಕ್ಕಾಗಿ ಜಾಹೀರಾತು ರಿಲೀಸ್ ಮಾಡಿರೋ ಚಿತ್ರತಂಡ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆ. ನಮ್ಮ ಮುಂದಿನ ಕನ್ನಡ ಚಿತ್ರ ಉಪಾಧ್ಯಕ್ಷಕ್ಕಾಗಿ  ಪ್ರತಿಭಾನ್ವಿತ ನಾಯಕಿ ಬೇಕಾಗಿದ್ದಾರೆ. ಆಸಕ್ತರು ಇತ್ತೀಚಿನ ಭಾವಚಿತ್ರ ಹಾಗೂ ತಮ್ಮ ನಟನೆಯ ವಿಡಿಯೋಗಳನ್ನು ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ ಎಂದಿದೆ.

ಚಂದ್ರಮೋಹನ ನಿರ್ದೇಶನದ  ಸಿನಿಮಾದ ಮೂಲಕ ಚಿಕ್ಕಣ್ಣ ಮೊದಲ ಬಾರಿಗೆ ಹಿರೋ ಆಗಿ ಕಾಣಿಸಿಕೊಳ್ಳಲಿದ್ದು, ಉಮಾಪತಿ ಫಿಲ್ಮ್ಸ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದೆ.


ಚಿತ್ರತಂಡ ನಾಯಕಿಗಾಗಿ ಹುಡುಕಾಟ ಆರಂಭಿಸಿದ್ದು, ಹೊಸಬರಿಗೆ ಅವಕಾಶ ನೀಡೋ ನಿರ್ಧಾರದಿಂದ ಉಪಾಧ್ಯಕ್ಷನ ನಾಯಕಿ ಯಾರು ಅನ್ನೋ ಕುತೂಹಲ ಸೃಷ್ಟಿಯಾಗಿದೆ.

ಈಗಾಗಲೇ ಚಿತ್ರತಂಡ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಶೂಟಿಂಗ್ ಗಾಗಿ ಲೋಕೇಶನ್ ಆಯ್ಕೆ ಕೂಡ ಮುಗಿದಿದೆಯಂತೆ. ಇನ್ನೇನು ನಾಯಕಿ ಆಗ್ತಿದ್ದಂತೆ ಚಿತ್ರತಂಡ ಕಣಕ್ಕಿಳಿಯಲಿದೆ.

2011 ರಲ್ಲಿ ಕಿರಾತಕ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಚಿಕ್ಕಣ್ಣ ಇದುವರೆಗೂ 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಕನ್ನಡದ ಎಲ್ಲ ಟಾಪ್ ನಟರ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

RELATED ARTICLES

Most Popular