ಕೆಜಿಎಫ್-2 ಟೀಸರ್ ಗೆ ಅಭಿಮಾನಿಗಳ ಬೇಡಿಕೆ…! ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಅಭಿಯಾನ…!!

ಸಿನಿಮಾ ಜಗತ್ತಿನಲ್ಲಿ ಕೆಜಿಎಫ್ ಸೃಷ್ಟಿಸಿದ ಇತಿಹಾಸದಿಂದ ಪ್ರೇಕ್ಷಕರು ಕೆಜಿಎಫ್-2 ಗಾಗಿ ಕಾಯುತ್ತಲೇ ಇದ್ದಾರೆ. ಆದರೆ ಕೊರೋನಾ ಎಫೆಕ್ಟ್ ನಿಂದ ನಿಗದಿತ ಸಮಯಕ್ಕೆ ಕೆಜಿಎಫ್-2 ರಿಲೀಸ್ ಮಾಡೋದು ಚಿತ್ರತಂಡಕ್ಕೆ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು ಇದೀಗ ಫಿಲ್ಮ್ ಲೇಟಾದ್ರೆ ಒಕೆ ಕೊನೆಪಕ್ಷ ಟೀಸರ್ ಆದ್ರೂ ರಿಲೀಸ್ ಮಾಡಿ ಅಂತ ಒತ್ತಾಯಿಸಿ ಹ್ಯಾಶ್ ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ.

ಕೆಜಿಎಫ್ ಯಶ್ ಗೆ ಅಭಿಮಾನಿಗಳನ್ನು ಹುಟ್ಟುಹಾಕಿದ್ದು ಮಾತ್ರವಲ್ಲ ಕೆಜಿಎಫ್ ಚಿತ್ರಕ್ಕೆ, ಆ ಹೆಸರಿಗೆ ಒಂದು ಅಭಿಮಾನಿ ಬಳಗವನ್ನು ಸೃಷ್ಟಿಸಿದೆ. ಇದರ ಫಲವಾಗಿಯೇ ಇಂದು ಚಿತ್ರದ ಟೀಸರ್ ಗಾಗಿ ಜನ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡ್ತಿದ್ದಾರೆ. #Weneedkgf2teaser ಹೆಸರಿನಲ್ಲಿ ಅಭಿಯಾನ ಆರಂಭವಾಗಿದೆ.

https://twitter.com/YashBoss182/status/1319500882610851840

ಕೆಜಿಎಫ್-2 ಅಕ್ಟೋಬರ್ 23 ರಂದು ತೆರೆಗೆ ಬರೋದು ಮೊದಲೇ ನಿರ್ಧಾರವಾಗಿತ್ತು. ಆದರೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟ ಕೊರೋನಾದಿಂದ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಇದರಿಂದ ಸಿನಿಮಾ ಶೂಟಿಂಗ್ ಇನ್ನು ಮುಗಿದಿಲ್ಲ. ಇನ್ನು ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದ್ದು, ಇತ್ತೀಚಿಗಷ್ಟೇ ಯಶ್ ಚಿತ್ರೀಕರಣಕ್ಕೆ ಮರಳಿದ್ದಾರೆ.

ಹೀಗಾಗಿ ಚಿತ್ರದ ರಿಲೀಸ್ ಯಾವಾಗ ಅನ್ನೋದನ್ನು ಚಿತ್ರತಂಡ ನಿರ್ಧರಿಸಿಲ್ಲ. ಮೂಲಗಳ ಮಾಹಿತಿ ಪ್ರಕಾರ ಚಿತ್ರ  ವರ್ಷ ತೆರೆಗೆ ಬರೋದು ಅನುಮಾನ ಎನ್ನಲಾಗ್ತಿದೆ. ಇತ್ತ ಸಿನಿಮಾ ರಿಲೀಸ್ ಗಾಗಿ ಕಾದು ಸುಸ್ತಾದ ಅಭಿಮಾನಿಗಳು ಕೊನೆ ಪಕ್ಷ ಸಿನಿಮಾ ಟೀಸರ್ ಬಿಡುಗಡೆ ಮಾಡಿ ಅಂತ ಚಿತ್ರತಂಡಕ್ಕೆ ದುಂಬಾಲು ಬಿದ್ದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿರೋ ಈ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಜನರು ಎಲ್ಲೆಡೆ ಶೇರ್ ಮಾಡಿಕೊಳ್ತಿದ್ದಾರೆ. ಇನ್ನು ಅಭಿಮಾನಿಗಳ  ಈ ಒತ್ತಾಯಕ್ಕೆ ಮಣಿದ್ರೆ ಚಿತ್ರತಂಡ ನವೆಂಬರ್ ನಲ್ಲಿ ದೀಪಾವಳಿ ವೇಳೆಗೆ  ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳ ಆಸೆ ಪೊರೈಸಿದ್ರು ಅಚ್ಚರಿ ಏನಿಲ್ಲ.

Comments are closed.