ಸೋಮವಾರ, ಏಪ್ರಿಲ್ 28, 2025
HomeCinemaಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ

ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ

- Advertisement -

 A movie actress chandni ನಟರಾಗಿ, ನಿರ್ದೇಶಕರಾಗಿ ತಮ್ಮ ವಿಭಿನ್ನತೆಯಿಂದಲೇ ಗುರುತಿಸಿಕೊಂಡ ಬುದ್ಧಿವಂತ ಉಪೇಂದ್ರ ಅವರ ಸಿಗ್ನೇಚರ್ ಸಿನೆಮಾ “ಎ” ಈ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಪರಿಚಯವಾದ ಮತ್ತೊಂದು ಪ್ರತಿಭೆ ಚಾಂದಿನಿ. ಎ ಸಿನಿಮಾದ ಬಳಿಕ ಬಹುತೇಕ ಕಾಣೆಯಾಗಿದ್ದಂತಿದ್ದ ಚಾಂದಿನಿ ಈಗ ಬಹು ವರ್ಷದ ಬಳಿಕ “ ” ಸಿನಿಮಾದ ಮರುಬಿಡುಗಡೆಯ ಹೊತ್ತಿನಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಮಾತ್ರವಲ್ಲ ಕನ್ನಡಾಭಿಮಾನಿಗಳಿಗಾಗಿ ತಾವು ಸಿನಿಮಾವೊಂದನ್ನು ನಿರ್ಮಾಣ ಮಾಡುವ ಸಿಹಿ ಸುದ್ದಿ ನೀಡಿದ್ದಾರೆ.

Upendra a movie actress chandni now is doctor
Image Credit to Original Source

ಸ್ಯಾಂಡಲ್ ವುಡ್ ನಲ್ಲಿ ಬಹುದಿನಗಳಿಂದ ಸ್ಟಾರ್ ಚಿತ್ರಗಳು ತೆರೆಕಾಣದೇ ಒಂದು ನಿರ್ವಾತಸೃಷ್ಟಿಗೊಂಡಿದೆ. ಅದನ್ನು ಹೋಗಲಾಡಿಸುವ ಹಾಗೂ ಥಿಯೇಟರ್ ಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಬುದ್ಧಿವಂತನ ಬಹುಮೆಚ್ಚುಗೆಯ ಚಿತ್ರ ಎ ಮತ್ತೆ ರ್ರೀ ರಿಲೀಸ್ ಕಾಣಲಿದೆ. ಈ ಸಿನಿಮಾದ ಇವೆಂಟ್ ಗಾಗಿ ಮತ್ತೆ ಚಂದನವನದಲ್ಲಿ ಕಾಣಿಸಿಕೊಂಡ ನಟಿ ಚಾಂದಿನಿ ತಾವು ಮತ್ತೊಮ್ಮೆ ಉಪೇಂದ್ರ ಜೊತೆ ಸಿನಿಮಾ ಮಾಡೋ ಕನಸೊಂದನ್ನು ಬಿಚ್ಚಿಟ್ಟಿದ್ದಾರೆ.

ಚಾಂದಿನಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಈ ವೇಳೆ ಎ ಸಿನಿಮಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಎ ನನ್ನ ಜೀವನದ ಅತ್ಯಂತ ವಿಭಿನ್ನ ಸಿನಿಮಾ. ನಾನಾಗ ವಿದ್ಯಾಭ್ಯಾಸ ಮಾಡುತ್ತಿದ್ದೆ. ನ್ಯೂಯಾರ್ಕ್‌ನಿಂದ ಇದರ ಚಿತ್ರೀಕರಣಕ್ಕಾಗಿ ಬಂದಿದ್ದೆ. ಉಪೇಂದ್ರ ನಿರ್ದೇಶನ ಹಾಗೂ ಅವರ ಆಲೋಚನೆಗಳು ಬಹಳ ವಿಭಿನ್ನ. ಹೀಗಾಗಿಯೇ ಇಂತಹ ಅದ್ಭುತ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಈಗಲೂ ಎಲ್ಲರಿಗೂ ಬಹಳ ಮುಖ್ಯ. ಬಾಲಿವುಡ್ ನವರು ಈ ಚಿತ್ರದ ರಿಮೇಕ್ ಮಾಡಬೇಕು ಎಂದುಕೊಂಡಿದ್ದರು. ಆದರೆ ಅದಕ್ಕೆ ಅನುಮತಿ ಸಿಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್

ಈಗ ನಾನು ಈ ಚಿತ್ರದ ಸೀಕ್ವೆಲ್ ಮಾಡುವ ಯೋಚನೆ ಮಾಡಿದ್ದೇನೆ. ಈಗಾಗಲೇ ನನ್ನದೊಂದು ದೊಡ್ಡ ಬರಹಗಾರರ ತಂಡ ಮಾಡಿ ಸ್ಕ್ರಿಪ್ಟ್ ಕೆಲಸ ಪೂರ್ಣಗೊಳಿಸಿದ್ದೇನೆ. ಕಥೆ ಮತ್ತು ಚಿತ್ರಕಥೆ ಬಗ್ಗೆ ನಾನೇ ಪೂರ್ತಿಯಾಗಿ ಗಮನ ಹರಿಸಿದ್ದೇನೆ. ಕೊನೆಯ ಒಂದು ಹಂತದ ತಿದ್ದುಪಡಿ ಮಾಡುವುದು ಬಾಕಿಯಿದೆ. ಬಳಿಕ ಉಪೇಂದ್ರ ಕಾಲಿಗೆ ಬಿದ್ದಾದರೂ ನಿರ್ದೇಶನ ಮಾಡಲು ಒಪ್ಪಿಸಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಗುರುದತ್ ಸಂಭಾಷಣೆ ಬರೆಯುತ್ತಿದ್ದು, ‘ಎ’ ಸಿನಿಮಾಗೆ ಕೆಲಸ ಮಾಡಿದ ತಂಡ ಈ ಸಿನಿಮಾದಲ್ಲಿ ಜೊತೆಯಾಗಲಿದೆ ಎಂದಿದ್ದಾರೆ.

Upendra a movie actress chandni now is doctor
Image Credit to Original Source

ಅಲ್ಲದೇ ಎ ಸಿನಿಮಾದ ಬಳಿಕ ನಾನು ವಿದ್ಯಾಭ್ಯಾಸ ಸೇರಿದಂತೆ ನಾನಾ ಕಾರಣಕ್ಕೆ ಸಿನಿಮಾ ರಂಗದಿಂದ ದೂರವುಳಿದಿದ್ದೆ. ಆದರೆ ಈಗ ಮತ್ತೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದ್ದೇನೆ. ಹೆಚ್ಚು ಸಿನಿಮಾದಲ್ಲಿ ನಟಿಸಲು ಸಿದ್ದತೆ ಆರಂಭಿಸಿದ್ದೇನೆ ಎಂದಿದ್ದಾರೆ. ಭಾರತ ಹಾಗೂ ಅಮೇರಿಕದ ಫುಡ್ ಇಂಡಸ್ಟ್ರಿಗಳ ಬಗ್ಗೆ ಅಧ್ಯಯನ ಮಾಡಿ ಥೀಸಿಸ್ ಬರೆದ ಚಾಂದಿನಿ‌ ಇದಕ್ಕಾಗಿ ಡಾಕ್ಟರೇಟ್ ಪದವಿ ಕೂಡ ಪಡೆದಿದ್ದು, ಈಗ ಡಾ.ಚಾಂದಿನಿಯಾಗಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಡಿಸ್ಟ್ರಿಬ್ಯೂಟರ್ ಆಗಿಯೋ ಕೆಲಸ ಮಾಡಿರೋ ಚಾಂದಿನಿ 50 ಸಿನಿಮಾ ಹಂಚಿಕೆ ಮಾಡಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ : Ragini Dwivedi : ವೈಟ್ ಸ್ಕರ್ಟ್ ನಲ್ಲಿ ಹಾಟ್ ನಟಿ ರಾಗಿಣಿ : ತುಪ್ಪದ ಬೆಡಗಿ ನೋಡಿ ಫ್ಯಾನ್ಸ್ ಸುಸ್ತಾಗೋದ್ರಪ್ಪ…!

ಕೇವಲ ಸಿನಿಮಾ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರೋ ಚಾಂದಿನಿ ನೂರಾರು ಮಕ್ಕಳ ಡಿಗ್ರಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರಂತೆ. 1998 ರಲ್ಲಿ ತೆರೆಕಂಡ ಉಪೇಂದ್ರರ A ಸಿನಿಮಾ ಅಂದು ಜನಮೆಚ್ಚುಗೆ ಗಳಿಸಿ ತಿಂಗಳುಗಳ ಕಾಲ ಪ್ರದರ್ಶನ ಕಂಡಿತ್ತು. ಈಗ ಮತ್ತೊಮ್ಮೆ ಪ್ರೇಕ್ಷಕರ ಮನಗೆಲ್ಲಲು ಬರ್ತಿದೆ. ಈ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಚಾಂದಿನಿ ಮತ್ತೆ ಚಮಕ್ ತೋರಿ ಚಂದನವನಕ್ಕೆ ಮರಳೋ ಮುನ್ಸೂಚನೆ ನೀಡಿದ್ದಾರೆ.

Upendra a movie actress chandni now is doctor

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular