Hardik Pandya and Natasa Stankovic: ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಗಾಳಿ, ಪತಿಯಿಂದ ದೂರವಾದಳಾ ಸರ್ಬಿಯಾ ನಟಿ ನತಾಶಾ ಸ್ಟಾಂಕೋವಿಕ್ ?

Hardik Pandya and Natasa Stankovic:  ಟೀಮ್ ಇಂಡಿಯಾದ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಟೈಮ್ ಯಾಕೋ ಸರಿಯಿದ್ದಂತೆ ಕಾಣ್ತಿಲ್ಲ.

Hardik Pandya and Natasa Stankovic:  ಟೀಮ್ ಇಂಡಿಯಾದ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಟೈಮ್ ಯಾಕೋ ಸರಿಯಿದ್ದಂತೆ ಕಾಣ್ತಿಲ್ಲ. ಐಪಿಎಲ್-2024 ಟೂರ್ನಿಯಲ್ಲಿ (IPL 2024) ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಾಂಡ್ಯ, ನಾಯಕತ್ವದಲ್ಲಿ ದಯನೀಯ ವೈಫಲ್ಯ ಕಂಡಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆದ್ದು 10 ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.

Storm in the Hardik Pandya and Natasa Stankovic marriage
Image Credit to Original Source

ನಾಯಕತ್ವದಲ್ಲಷ್ಟೇ ಅಲ್ಲ, ವೈಯಕ್ತಿಕ ಪ್ರದರ್ಶನದಲ್ಲೂ ಪಾಂಡ್ಯ ವೈಫಲ್ಯ ಎದುರಿಸಿದ್ದರು. 14 ಪಂದ್ಯಗಳಿಂದ 216 ರನ್ ಮತ್ತು 11 ವಿಕೆಟ್ ಪಡೆಯಲಷ್ಟೇ ಪಾಂಡ್ಯ ಶಕ್ತರಾಗಿದ್ದರು. ವೃತ್ತಿಜೀವನದ ವೈಫಲ್ಯದ ಜೊತೆಗೆ ಇದೀಗ ವೈಯಕ್ತಿಕ ಜೀವನದಲ್ಲೂ ಪಾಂಡ್ಯಗೆ ಹಿನ್ನಡೆಯಾಗಿದೆ. ಪತ್ನಿ ನತಾಶಾ ಸ್ಟಾಂಕೋವಿಕ್ (Natasa Stankovic) ಪಾಂಡ್ಯನಿಂದ ದೂರವಾಗಿದ್ದಾಳೆ ಎಂಬ ಮಾತುಗಳು ಕೇಳಿ ಬಂದಿವೆ. ಸರ್ಬಿಯಾ ಮೂಲದ ಮಾಡೆಲ್-ನಟಿ ನತಾಶಾ ಸ್ಟಾಂಕೋವಿಕ್ ಇನ್ಸ್’ಟಾಗ್ರಾಂ ಪ್ರೊಫೈಲ್’ನಲ್ಲಿರುವ ತಮ್ಮ ಹೆಸರಿನಿಂದ ಪಾಂಡ್ಯ ಸರ್’ನೇಮನ್ನು ತೆಗೆದು ಹಾಕಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Team India To Fly New York Tomorrow: ಟಿ20 ವಿಶ್ವಕಪ್: ನಾಳೆ ಮುಂಬೈನಿಂದ ನ್ಯೂ ಯಾರ್ಕ್’ಗೆ ಹಾರಲಿದೆ ಟೀಮ್ ಇಂಡಿಯಾ

ಇದು ಪಾಂಡ್ಯ ಮತ್ತು ನತಾಶಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವುದು ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಂಡ್ಯ ಸರ್’ನೇಮ್ ಅನ್ನು ತೆಗೆದು ಹಾಕಿರುವುದಷ್ಟೇ ಅಲ್ಲದೆ, ಪಾಂಡ್ಯ ಜೊತೆಗಿರುವ ಕೆಲ ಫೋಟೋಗಳನ್ನೂ ತಮ್ಮ ಇನ್ಸ್’ಟಾಗ್ರಾಂ ಅಕೌಂಟ್’ನಿಂದ ತೆಗೆದು ಹಾಕಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯ ವೇಳೆಯೂ ನತಾಶಾ ಸ್ಟಾಂಕೋವಿಕ್ ಕಾಣಿಸಿಕೊಳ್ಳದೇ ಇರುವುದು ಇಬ್ಬರೂ ದೂರವಾಗಿದ್ದಾರೆ ಎಂಬ ಊಹಾಪೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.

Storm in the Hardik Pandya and Natasa Stankovic marriage
Image Credit to Original Source

ಮಾರ್ಚ್ 4ರಂದು ನತಾಶಾ ಸ್ಟಾಂಕೋವಿಕ್ ಅವರ ಹುಟ್ಟುಹಬ್ಬ. ಪ್ರೀತಿಸಿ ಮದುವೆಯಾದ ಪತ್ನಿಯ ಹುಟ್ಟುಹಬ್ಬಕ್ಕೂ ಹಾರ್ದಿಕ್ ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿರಲಿಲ್ಲ. ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020ರ ಮೇ ತಿಂಗಳಲ್ಲಿ ಕೊರೊನಾ ಸಂದರ್ಭದಲ್ಲಿ ಮದುವೆಯಾಗಿದ್ದರು.

ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’

ಅದೇ ವರ್ಷದ ಜುಲೈ ತಿಂಗಳಲ್ಲಿ ಪಾಂಡ್ಯ-ನತಾಶಾ ದಂಪತಿಗೆ ಗಂಡು ಮಗು ಜನಿಸಿತ್ತು. ಐಪಿಎಲ್’ನಲ್ಲಿ ಭಾರೀ ವೈಫಲ್ಯ ಎದುರಿಸಿರುವ ಹಾರ್ದಿಕ್ ಪಾಂಡ್ಯ, ಕಳಪೆ ಫಾರ್ಮ್ ಮಧ್ಯೆಯೂ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

Storm in the Hardik Pandya and Natasa Stankovic marriage

Comments are closed.